ತುಮಕೂರು

ಉಪನೋಂದಣಾಧಿಕಾರಿ ಕಚೇರಿ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

Published On :

ಚಿಕ್ಕನಾಯಕನಹಳ್ಳಿ: ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ತಳೆಯುವ ನಿರ್ಧಾರಗಳು ಸಾರ್ವಜನಿಕರಿಗೆ ಅನುಕೂಲವಾಗುವುದರ ಬದಲು ತೊದರೆಗೊಳಗಾಗುತ್ತಿರುವುದು ತಿಳಿಯದಂತ ಮೂರ್ಖರು ನಮ್ಮನ್ನಾಳುತ್ತಿದ್ದಾರೆ ಎಂದು ಬಿಜೆಪಿ ರಾಜಣ್ಣ ನುಡಿದರು.
ಅವರು ಪಟ್ಟಮದ ತಾಲೂಕು ಕಚೇರಿ ಮುಂಭಾಗ ಸಾರ್ವಜನಿಕರು ಮತ್ತು ತಾಲೂಕು ಪತ್ರಬರಹಗಾರರ ಸಂಘ ಏರ್ಪಡಿಸಿದ್ದ ಪ್ರತಿಭಟನಾ ಸಭೆಯನ್ನುದ್ದೇಸಿಸಿ ಮಾತನಾಡುತ್ತಿದ್ದರು. ಇತಿಹಾಸದುದ್ದಕ್ಕೂ ಉಪನೋಂದಣಾಧಿಕಾರಿ ಕಚೇರಿ, ತಾಲೂಕು ಕಚೇರಿ ಕಟ್ಟಡದಲ್ಲಿಯೇ ತನ್ನ ಕಾರ್ಯನಿರ್ವಹಿಸುತ್ತಾ ಬಂದಿದೆ. ಕಂದಾಯ ಇಲಾಖೆ ಮತ್ತು ನೋಂದಣಿ ಇಲಾಖೆ ಪರಸ್ಪರ ಒಂದಕ್ಕೊಂದು ಪೂರಕವಾದ ಇಲಾಖೆಗಳಾದ್ದರಿಂದ ಎರಡು ಇಲಾಖೆಗಳು ಒಂದರ ಪಕ್ಕದಲ್ಲೊಂದು ಇರುವುದು ಅನುಕೂಲವೇ ಹೊರತು ಯಾರದೋ ಹಿತಕ್ಕಾಗಿ ಕಚೇರಿಯನ್ನು ಜಾಗದ ಕೊರತೆಯ ನೆಪವೊಡ್ಡಿ ಸ್ಥಳಾಂತರಿಸುವುದನ್ನು ತಾಲೂಕಿನ ಜನತೆ ಎಂದಿಗೂ ಸಹಿಸುವುದಿಲ್ಲ. ಒಂದುವೇಳೆ ಕಚೇರಿಗೆ ಸ್ಥಳಾವಕಾಶದ ಕೊರತೆಯಿದ್ದರೆ ತಾಲೂಕು ಕಚೇರಿಯ ಮಹಡಿಯ ಮೇಲೆ ಜಾಗದ ಲಭ್ಯತೆಯಿದ್ದು, ಅಲ್ಲಿಯೇ ಕಟ್ಟಡ ನಿರ್ಮಿಸಿ ಕೊಡಲಿ. ಹಾಲಿ ಪ್ರಸ್ತಾವಿತ ಕಚೇರಿ ಸ್ಥಳಾಂತರಿಸುವ ಜಾಗ ತಾಲೂಕು ಕಚೇರಿಯಿಂದ 2 ಕಿ.ಮೀ.ದೂರದಲ್ಲಿದ್ದು ನೋಂದಣಿಗೆ ಪೂರಕ ದಾಖಲೆಗಳನ್ನು ಒದಗಿಸಲು ತೊಂದರೆಯಾಗುತ್ತದೆ. ಇಂತಹ ಹುಚ್ಚು ಪ್ರಸ್ತಾವನೆಗಳನ್ನು ಸರ್ಕಾರ ಕೈಬಿಟ್ಟು, ಜನಸಾಮಾನ್ಯರ ಅನುಕೂಲಕ್ಕೆ ತೀರ್ಮಾನಗಳನ್ನು ಕೈಗೊಳ್ಳಲಿ, ಇಲ್ಲದಿದ್ದರೆ  ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳ ಬೇಕಾಗುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹಿರಿಯ ಪತ್ರಬರಹಗಾರರಾದ ಹುಳಿಯಾರಿನ ಲಕ್ಷ್ಮೀನರಸಿಂಹಯ್ಯ, ಮಾತನಾಡಿ ಕಚೇರಿ
ಸ್ಥಳಾಂತರಗೊಳ್ಳದಂತೆ ಕ್ಷೇತ್ರದ ಶಾಸಕರಲ್ಲಿ ಮನವಿ ಮಾಡಿದ್ದು, ಅವರು ಕಚೇರಿಯನ್ನು ಇಲ್ಲಯೇ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ರೈತಸಂಘದ ಗಂಗಾಧರ್, ಚನ್ನಬಸವಯ್ಯ, ನಾಗರಾಜು, ಮಾರಿಮುತ್ತು, ಸಿ.ಎಸ್.ಯೋಗೀಶ್, ಪಾರ್ವತಮ್ಮ, ಉಮೇಶ್, ರೋಜೇಗೌಡ,ಪತ್ರಬರಹಗಾರ ಕೃಷ್ಣಮೂರ್ತಿ, ನಾರಾಯಣರಾಜು, ಚಿಕ್ಕಣ್ಣ, ಪ್ರಭುಲಿಂಗಯ್ಯ, ನಟರಾಜ್, ಶಿವಕುಮಾರ್,ಬಿಜೆಪಿ ನಗರಾಧ್ಯಕ್ಷ ನರಸಿಂಹಮೂರ್ತಿ ಮುಂತಾದವರು ಭಾಗವಹಿಸಿದ್ದರು. ಗ್ರೇಡ್-2 ತಹಸೀಲ್ದಾರ್ ಪುಟ್ಟರಾಮಯ್ಯನವರು ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.