ತುಮಕೂರು

ಅಕ್ರಮ ಮರಳು ಸಾಗಣೆ: ಪೊಲೀಸರ ಬೆಂಗಾವಲು

Published On :

ಕುಣಿಗಲ್: ಅಕ್ರಮ ಮರಳುಸಾಗಾಣಿಕೆ ಪೊಲೀಸರ ಬೆಂಗಾವಲು...ಹೀಗಾದ್ರೆ ಜನ ಪೊಲೀಸರನ್ನು ನಂಬುತ್ತಾರೆಯೇ.. ಆರಕ್ಷಕ ವೃತ್ತ ನಿರೀಕ್ಷಕರಾದ ನೀವು ಉತ್ತಮ ಕೆಲಸ ಮಾಡುತ್ತಿದ್ದೀರಾ, ನಿಮ್ಮ ಕೈ ಕೆಳಗಿನ ಪಿಎಸೈಗಳು ಮಾಡುವ ಕೆಲಸದಿಂದ ನಿಮಗೆ ಶೋಭೆ ಬರುತ್ತಿಲ್ಲ. ಅಕ್ರಮ ಮರಳು ಸಾಗಾಣೆ ತಡೆಯುವ ನಿಟ್ಟಿನಲ್ಲಿ ನೀವಾದರೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶಾಸಕ ಡಿ.ನಾಗರಾಜಯ್ಯ ಸಭೆಯಲ್ಲಿ ಆರಕ್ಷಕ ವೃತ್ತ ನಿರೀಕ್ಷಕರಿಗೆ ತಾಕೀತು ಮಾಡಿದರು.
  ಕಂದಾಯಭವನದಲ್ಲಿ ನಡೆದ ಸಕಾಲ ಸಹಾಯವಾಣಿ ಕೇಂದ್ರದ ಉದ್ಘಾಟನೆ ನಂತರ ಹುಲಿಯೂರುದುರ್ಗಠಾಣೆ ವ್ಯಾಪ್ತಿಯಲ್ಲಿ ಹೆಚ್ಚಿರುವ ಅಕ್ರಮಮರಳು ಸಾಗಾಣೆ ನಿಯಂತ್ರಣಕ್ಕೆ ಪೊಲೀಸರು ಕ್ರಮ ಕೈಗೊಳ್ಳದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಗ್ರಾಮಸ್ಥರು ಅಕ್ರಮ ಮರಳು ಸಾಗಾಣೆ ಲಾರಿ ಹಿಡಿದುಕೊಟ್ಟರೆ,ಪೊಲೀಸ್ ಜೀಪ್ ಚಾಲಕ ಹಿಡಿದುಕೊಟ್ಟವರನ್ನು ಥಳಿಸಿ, ಲಾರಿಗಳನ್ನು ಗಡಿದಾಟಿಸುವವರೆಗೂ ಬೆಂಗಾವಲು ನೀಡಿ ಬಂದಿರುವ ಘಟನೆಗಳಿವೆ ಇವೆ.
 ದಿನವೊಂದಕ್ಕೆ ಹುಲಿಯೂರುದುರ್ಗ ವ್ಯಾಪ್ತಿಯಲ್ಲೆ ಹಲವು ಲೋಡ್ಗಳಷ್ಟು ಮರಳನ್ನು ನಿಷೇಧದ ನಡುವೆ ಮನಬಂದಂತೆ ಸಾಗಿಸುತ್ತಿದ್ದಾರೆ. ಪುಟ್ಪಾತ್ನಲ್ಲಿದ್ದವರು ಅಕ್ರಮ ಮರಳುಸಾಗಾಣೆ ದಂಧೆಯಿಂದ ಇಂದು ಮೂರ್ನಾಲ್ಕು ಲಾರಿಗಳ ಮಾಲೀಕರಾಗಿದ್ದಾರೆ. ಮರಳುಸಾಗಾಣೆ ನಿಯಂತ್ರಣಕ್ಕೆ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ ನಡುವೆ ಸಮನ್ವಯತೆ ಇಲ್ಲವಾಗಿದೆ.   
ಈ ರೀತಿ ಆದ್ರೆ, ಜನ ಪೊಲೀಸರನ್ನು ನಂಬುತ್ತಾರೆಯೇ, ಇನ್ನು ಕುಣಿಗಲ್ ವೃತ್ತದ ವ್ಯಾಪ್ತಿಯಲ್ಲಿನ ಮೂರು ಠಾಣೆಗಳಲ್ಲಿ ಫಿರ್ಯಾದುದಾದರರು ಹೋದರೆ ಮನ್ನಣೆ ಇಲ್ಲ. ದಲ್ಲಾಳಿಗಳಿಗೆ ಮನ್ನಣೆ ನೀಡುತ್ತಾ ಸುಳ್ಳು, ಸುಳ್ಳು ಪ್ರಕರಣಗಳನ್ನು ಪಿಎಸೈಗಳು ದಾಖಲಿಸುತ್ತಾ ಹಲವು ಸಮಸ್ಯೆಗೆ ಕಾರಣವಾಗಿದ್ದು, ಸಿಪಿಐ ಆದ ನೀವು ಉತ್ತಮ ಕೆಲಸ ಮಾಡುತ್ತಿದ್ದೀರಾ. ನಿಮ್ಮ ಕೈಕೆಳಗಿನ ಪಿಎಸೈಗಳು ಮಾಡುವ ಕೆಲಸದಿಂದ ತಾಲೂಕು ಪೊಲೀಸ್ ವ್ಯವಸ್ಥೆಗೆ ಕೆಟ್ಟ ಹೆಸರು ಬರುವಂತಾಗಿದ್ದು ಇನ್ನಾದರೂ ಕಠಿಣ ಕ್ರಮ ಕೈಗೊಂಡು ಇಲಾಖೆ ಉತ್ತಮವಾಗಿ ಕೆಲಸಮಾಡಿ, ಹೆಸರು ಮಾಡುವತ್ತ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಹಾಜರಿದ್ದ ಸಿಪಿಐ ಧರ್ಮೇಂದ್ರ ಅವರಿಗೆ ಶಾಸಕರು ತಾಕೀತು ಮಾಡಿದರು.0


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.