ತುಮಕೂರು

ನರೇಗಾ ಪರಿಣಾಮಕಾರಿ ಅನುಷ್ಠಾನವಾಗಲಿ

Published On :

ತುಮಕೂರು: ತುಮಕೂರಿನಂತಹ ಬರಪೀಡಿತ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಬಹಳ ಮುಖ್ಯ ಪಾತ್ರ ವಹಿಸಲಿದ್ದು, ಜನರು ಎಲ್ಲಿಯೂ ವಲಸೆ ಹೋಗದಂತೆ ಯೋಜನೆಯಡಿ ಉದ್ಯೋಗವಕಾಶ ಕಲ್ಪಿಸಿ, ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಗೋಶಾಲೆ, ಕುಡಿಯುವ ನೀರು, ಉದ್ಯೋಗವಕಾಶ, ಮುಂತಾದವುಗಳ ಕಡೆ ಅಧಿಕಾರಿಗಳು ಗಮನಹರಿಸಿ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ತ್ವರಿತ ಪರಿಹಾರಕ್ಕೆ ಕ್ರಮ: ಜಿಲ್ಲೆಯಲ್ಲಿನ ಬರಪರಿಸ್ಥಿತಿಯಿಂದ  ಎದುರಾಗುತ್ತಿರುವ ಸಮಸ್ಯೆಗಳ ಕುರಿತಂತೆ  ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳ  ತ್ವರಿತ ಪರಿಹಾರಕ್ಕೆ ತಾವು ಮುಂದಾಗುವುದಾಗಿ  ಸಚಿವರು ಈ ಸಂದರ್ಭ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ  ್ಢಕಂದಾಯ ಸಚಿವರಿಗೆ ಜಿಲ್ಲೆಯ ಸಮಗ್ರ ಚಿತ್ರಣ ನೀಡುತ್ತಾ, ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚುವ ರೀತಿಯಲ್ಲಿ ಮಳೆಯಾಗಿಲ್ಲ. ಅಡಕೆ, ತೆಂಗು ಸಹಸ್ರಾರು ಸಂಖ್ಯೆಯಲ್ಲಿ ಒಣಗಿದೆ. ಸತತ ಮೂರು ವರ್ಷದಿಂದ  ಜಿಲ್ಲೆಯಲ್ಲಿ ಮಳೆ ಇಲ್ಲ. ಪ್ರತಿ ತಾಲೂಕಿನಲ್ಲಿ 50 ರಿಂದ 60 ಬೋರ್ವೆಲ್ಗಳನ್ನು ಕೊರೆಯಬೇಕಿದೆ.  ಸದ್ಯದ ಪರಿಸ್ಥಿತಿಯಲ್ಲಿ ಹುರಳಿ, ಜೋಳ ಬಿಟ್ಟರೆ ಬೇರಾವುದೇ ಬೆಳೆ ಬೆಳೆಯಲು ಜಿಲ್ಲೆಯಲ್ಲಿ ಸಾಧ್ಯವಿಲ್ಲ, ಕುಡಿಯುವ ನೀರು, ಉದ್ಯೋಗ ಸಮಸ್ಯೆ ಎದುರಾಗುತ್ತಿದೆ ಎಂದು ಕಂದಾಯ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಈ ವಾರದೊಳಗೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು.  ಇದಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಬ್ರೈಸ್ಪೆಲ್ ( 4ವಾರ ಮಳೆ ಇಲ್ಲದಿರುವುದು) ಆಧಾರದ ಮೇರೆಗೆ ಮಳೆ, ಬೆಳೆ, ಕುರಿತಂತೆ ವರದಿ ಸಿದ್ದಪಡಿಸಿ ಎಂದು ಸೂಚಿಸಿದರು. ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಪಂಚಾಯತ್  ರಾಜ್ ಇಂಜನಿರಿಂಗ್ ವಿಭಾಗ ಮತ್ತು ಬೆಸ್ಕಾಂ ಅಧಿಕಾರಿಗಳು ಯಾವುದೇ ಕಾರಣಕ್ಕೂ ರಜೆಯ ಮೇಲೆ ತೆರಳಬಾರದು.  ತಹಸೀಲ್ದಾರ್ ಮತ್ತು ಜಿಪಂ ಎ.ಇ.ಇ. ಒಟ್ಟಿಗೆ ಸಭೆ ಸೇರಿ ಜಿಲ್ಲೆಯಲ್ಲಿ ಹಣ ಪಾವತಿ ಮುಂತಾದವುಗಳ ಕುರಿತು ಚರ್ಚಿಸಬೇಕು ಎಂದು ಉಸ್ತುವಾರಿ ಸಚಿವರು ಸೂಚಿಸಿದರು.  
ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಾದ್ಯಂತ ಮಳೆ ಕೊರತೆ ಇದೆ.  ಶೇ.66ರಷ್ಟು ಬಿತ್ತನೆಯಾಗಿದ್ದರೂ ಶೇ. 25 ರಿಂದ 30 ರಷ್ಟು ಸಹ ಫಲ ದೊರಕುವುದು ಕಷ್ಟಸಾಧ್ಯವಾಗಿದೆ.  ಮುಂದಿನ ದಿನಗಳಲ್ಲೂ ಮಳೆ ಬಂದರೂ ಸಹ ಬೆಳೆ ದೊರಕುವುದಿಲ್ಲ. ಮೇವು ದೊರಕಬಹುದಷ್ಟೆ, ಎಲ್ಲೆಡೆ ಗೋಶಾಲೆ ತೆರೆಯುವಂತೆ ಒತ್ತಡ ಹೆಚ್ಚುತ್ತಿದೆ.  ಪಾವಗಡ ಹೊರತುಪಡಿಸಿ ಎಲ್ಲಾ ತಾಲೂಕುಗಳಿಗೂ ಕುಡಿಯುವ ನೀರಿಗಾಗಿ ಹೇಮಾವತಿ ಅವಲಂಬಿಸಿದ್ದೇವೆ.  ಜಿಲ್ಲೆಗೆ ಎಣಿಸಿದಷ್ಟು ನೀರು ಬಂದಿಲ್ಲ ಎಂದರು.
ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಸೇರಿದಂತೆ, ಉಪ ವಿಭಾಗಧಿಕಾರಿಗಳು, ತಹಸೀಲ್ದಾರರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.