ತುಮಕೂರು

ಸಿದ್ಧಿವಿನಾಯಕ ವೈಭಕ ದೃಶ್ಯ ರೂಪಕ....

Published On :

ತುಮಕೂರು: ಕಳೆದ 37 ವರ್ಷಗಳಿಂದ ಅತ್ಯಂತ ವೈಭವವಾಗಿ ಸಿದ್ಧಿವಿನಾಯಕ ಸೇವಾ ಮಂಡಳಿಯವರು ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದು ಈ ಬಾರಿ ಅಮೋಘ ಸಂಗೀತ ದೃಶ್ಯರೂಪಕವಾದ ಶ್ರೀದೇವಿ ಮಹಾತ್ಮೆ ಅಥವಾ ಶ್ರೀ ಸಿದ್ಧಿವಿನಾಯಕ ವೈಭವ ಗಣೇಶನನ್ನು ಪ್ರತಿಷ್ಠಾಪಿಸಲಿದ್ದಾರೆ. ಸೆ. 9 ರಿಂದ ಅಕ್ಟೋಬರ್ 8 ರ ವರೆಗೆ ಭರ್ತಿ 1 ತಿಂಗಳ ಕಾಲ ವೈಭವವಾಗಿ ಗಣೇಶೋತ್ಸವ ನಡೆಯಲಿದ್ದು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಕ್ಟೋಬರ್ 9 ರಂದು ಗಣೇಶನ ವೈಭವದ ಮೆರವಣಿಗೆ ಹಾಗೂ ವಿಸರ್ಜನೆ ನೆರವೇರಲಿದೆ.
37ನೇ ವರ್ಷದ 30 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ಸೆ. 9 ರಂದು ಸೋಮವಾರ ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ. ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 37ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮಗಳ
ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ನೆರವೇರಿಸುವರು. ಗಣೇಶ ದೃಶ್ಯಾವಳಿ ಉದ್ಘಾಟನೆಯನ್ನು ಸಂಸದ ಜಿ.ಎಸ್. ಬಸವರಾಜು ನೆರವೇರಿಸುವರು. ಹಿರಿಯ ಕಲಾವಿದರು ಮತ್ತು ನಾಗರಿಕರನ್ನು ಶಾಸಕ ರಫೀಕ್ ಅಹಮದ್ ಸನ್ಮಾನಿಸುವರು. ಮಹಾದ್ವಾರ ಉದ್ಘಾಟನೆಯನ್ನು ಮಾಜಿ ಸಚಿವ ಸೊಗಡು ಶಿವಣ್ಣ ನೆರವೇರಿಸುವರು. ವಿದ್ಯುತ್ ಅಲಂಕಾರ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಸತ್ಯಮೂರ್ತಿ ನೆರವೇರಿಸುವರು. ವಿಶೇಷ ಆಹ್ವಾನಿತರಾಗಿ ಎಸ್ಪಿ ರಮಣಗುಪ್ತ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಿದ್ಧಿವಿನಾಯಕ ಸೇವಾ ಮಂಡಳಿ ಅಧ್ಯಕ್ಷ ಎನ್.ಆರ್. ಜಗದೀಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನಗರಸಭೆ ಮಾಜಿ ಅಧ್ಯಕ್ಷ ಎಂ.ಪಿ. ಮಹೇಶ್ ಹಾಗೂ ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಜಿ.ಆರ್. ಚಂದ್ರಶೇಖರಯ್ಯ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸತ್ಯನಾರಾಯಣಸ್ವಾಮಿ ಪೂಜೆ, ಮಕ್ಕಳಿಗೆ ಸ್ಥಳದಲ್ಲಿ ಗಣಪತಿ ಹಾಗೂ ನಂದಿನ ಹಾಲಿನ ಲಾಂ:ನವಿರುವ ಚಿತ್ರ ಬರೆಯುವ ಸ್ಪರ್ಧೆ ಆಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.