ತುಮಕೂರು

ಹುಳಿಯಾರಲ್ಲಿ ಸಂಭ್ರಮದ ಗೌರಿ ಹಬ್ಬದ ಸಡಗರ

Published On :

ಹುಳಿಯಾರು: ಭಾನುವಾರದಂದು ಪಟ್ಟಣದ ಮನೆಮನೆಗಳಲ್ಲಿ  ಗೌರಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ವಿವಿಧ ಹೂಗಳಿಂದ ಅಲಂಕರಿಸಿ, ಸಿಹಿ ಅಡುಗೆ ಮಾಡಿ, ಮನೆಗೆ ಬಂದವರಿಗೆ ಬಾಗಿನ ನೀಡುವ ಮೂಲಕ  ಹಬ್ಬವನ್ನು ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.  ಗೌರಿ ಹಬ್ಬವನ್ನು ಹಿಂದಿನಿಂದಲೂ ಭಕ್ತಿಯಿಂದ ಆಚರಿಸಿಕೊಂಡು ಬಂದಿರುವ ಮಹಿಳೆಯರು ಗೌರಿ ಪೂಜೆ ಸಲ್ಲಿಸಿ ನಂತರ ಮುತ್ತೈದಯರಿಗೆ ಬಾಗಿನ ಅರ್ಪಿಸುವಲ್ಲಿ ನಿರತರಾಗಿದ್ದರು.  ತವರುಮನೆಗೆ ಬಂದಿದ್ದ ಹೆಣ್ಣುಮಕ್ಕಳು ಮುಂಜಾನೆಯಿಂದಲೇ ಮನೆಯ ಆವರಣವನ್ನು ಸಾರಿಸಿ, ಸಿಂಗರಿಸಿ ಗೌರಿ ವಿಗ್ರಹವನ್ನು  ಫಲ-ಪುಷ್ಪಗಳಿಂದ ಅಲಂಕರಿಸಿದ್ದಲ್ಲದೆ, ವಿವಿಧ ಪೂಜಾ ಕಾರ್ಯಗಳನ್ನು ಮಾಡಿ ಹಿರಿಯರಿಂದ ಆಶೀರ್ವಾದ ಪಡೆಯುವ ಮೂಲಕ ಹಬ್ಬದ ಶುಭಾಷಯವನ್ನು ಹಂಚಿಕೊಳ್ಳುತ್ತಿದ್ದರು. ಪಟ್ಟಣದ ದೇವಾಲಯಗಳಲ್ಲಿ ದೇವರುಗಳಿಗೆ ವಿಶೇಷ ಪೂಜೆ, ಅಲಂಕಾರಗಳನ್ನು ಮಾಡಿದ್ದು ಅನೇಕರು ದೇವಾಲಯಗಳಿಗೆ ಬಂದು ಪೂಜೆ ಸಲ್ಲಿಸಿದರು. ಗಣೇಶ ಚತುರ್ಥಿ ಅಂಗವಾಗಿ ಗಣೇಶ ವಿಗ್ರಹಗಳನ್ನು ಕೊಳ್ಳಲು ಜನ ಮುಗಿಬಿದ್ದಿದ್ದು, ಹುಳಿಯಾರಿನ ಬಸ್ ನಿಲ್ದಾಣದಲ್ಲಿ ಜನ ಜಂಗುಳಿಯೇ ನೆರೆದಿತ್ತು. ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ರೈತರು, ಯುವಕರು ತಮ್ಮ ತಮ್ಮ ಊರುಗಳಿಗೆ ವಿವಿಧ ಬಗೆಯ ಗಣೇಶನ ಮೂರ್ತಿಗಳನ್ನು, ಅದರ ಅಲಂಕಾರಕ್ಕೆ ಬೇಕಾದ ಹೂ, ಹಣ್ಣು, ಬಾಳೆಕಂದು ಸೇರಿದಂತೆ ನಾನಾ ಬಗೆಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.