ದೇಶದ ಭದ್ರತೆಗೆ ಮೋದಿ ಬೆಂಬಲಿಸಿ
ಪಾವಗಡ: ಭದ್ರತೆ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ನರೇಂದ್ರಮೋದಿ ಅವರನ್ನು ಬೆಂಬಲಿಸುವ ಮೂಲಕ ಬಿಜೆಪಿಗೆ ಮತ ನೀಡಿ ಎಂದು ತಾ.ಬಿಜೆಪಿ ಮುಖಂಡ ಓಬಳಾಪುರ ಈಶ್ವರಪ್ಪ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವರು ಇಂದು ದೇಶದ ಭದ್ರತೆ, ಅಭಿವೃದ್ಧಿಗಾಗಿ ನರೇಂದ್ರಮೋದಿ ಅವರಂತಹ ನಾಯಕರ ಅವಶ್ಯಕತೆ ಇದೆ. ಅವರನ್ನು ಬೆಂಬಲಿಸುವ ಮೂಲಕ ಬಿಜೆಪಿಗೆ ಮತ ನೀಡಿ. ಮುಖ್ಯಮಂತ್ರಿಯಾಗಿ ನರೇಂದ್ರಮೋದಿ ಗುಜರಾತ್ನಲ್ಲಿ ಕೈಗೊಂಡ ಅಭಿವೃದ್ಧಿ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ ಎಂದರು. ರಾಜ್ಯ ರೈತ ಮೋರ್ಚ ಅಧ್ಯಕ್ಷ ಶಿವಪ್ರಸಾದ್ ಮತ್ತು ತಾ.ಅಧ್ಯಕ್ಷ ವಕೀಲ ಮುರಳೀಧರ್ ಅವರು ಮಾತನಾಡಿದರು. ಲಿಂಗದಹಳ್ಳಿ, ವದನಕಲ್ಲು, ರಂಗಸಮುದ್ರ, ಓಬಳಾಪುರ, ಮರಿದಾಸನಹಳ್ಳಿ ತಾಲೂಕಿನ ಇತರೆ ಕಡೆ ಬಿಜೆಪಿ ಪರ ಪ್ರಚಾರ ನಡೆಯಿತು.
ಸಿಪಿಐ ಪ್ರಚಾರ ಇಂದು
ತುಮಕೂರು: ಏ. 3 ರಿಂದ 14 ರವರೆಗೆ ಸಿಪಿಐ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ವೇಳಾಪಟ್ಟಿ ಇಂತಿದೆ. ಏ. 3 ರಂದು ಗುಬ್ಬಿ ತಾಲೂಕಿನಲ್ಲಿ ಪ್ರಚಾರ ಕೈಗೊಳ್ಳಲಿದ್ದು, ಬೆಳಗ್ಗೆ 9 ಗಂಟೆಗೆ ಸುದ್ದಿಗೋಷ್ಠಿ, 10-30 ಕ್ಕೆ ನಿಟ್ಟೂರು, 11 ಗಂಟೆಗೆ ಕಡಬಾ, 12 ಕ್ಕೆ ಮಾಯಸಂದ್ರ. ಮಧ್ಯಾಹ್ನ 1 ಗಂಟೆಗೆ ತುರುವೇಕೆರೆಗೆ ಪ್ರಯಾಣ. 1-30 ಕ್ಕೆ ನೊಣವಿನಕೆರೆ, 4 ಗಂಟೆಗೆ ತಿಪಟೂರು ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

