ಮುನಿರಾಜುಗೌಡ ಆಯ್ಕೆಯಾದಲ್ಲಿ ಗೂಂಡಾ ರಾಜಕಾರಣ ಅಂತ್ಯ
ಕುಣಿಗಲ್: ಕಾರ್ಯಕರ್ತರೇ ನಿಮಗೆ ಗೊತ್ತಿರಲಿ, ಹಿರಣ್ಯಕಶುಪುವಿನಂತ ದೊಡ್ಡರಾಕ್ಷಸನನ್ನು ಸಂಹರಿಸಿದ್ದು ಪುಟ್ಟ ಬಾಲಕ ಪ್ರಹ್ಲಾದನೇ, ಅದೇ ರೀತಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ನಡೆಯಲಿದೆ, ಕಿರಿಯ ವಯಸ್ಸಿನ ಅಭ್ಯರ್ಥಿ ಮುನಿರಾಜುಗೌಡ ಆಯ್ಕೆಯಾದಲ್ಲಿ ತಾಲೂಕಿನಲ್ಲಿ ನಡೆಯುತ್ತಿರುವ ಧೂರ್ತ ರಾಜಕಾರಣ ಮತ್ತು ಗೂಂಡಾ ಪ್ರವೃತ್ತಿ ರಾಜಕಾರಣ ಎರಡೂ ಅಂತ್ಯ ಕಾಣಲಿದೆ. ಈ ಕುರಿತು ಸಂಶಯಬೇಡ ಎಂದು ವಿರೋಧ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ಮುಖಂಡರ ಹೆಸರನ್ನು ಪ್ರಸ್ತಾಪಿಸದೆ ಬಿಜೆಪಿ ರಾಜ್ಯ ಸಂಘಟನ ಕಾರ್ಯದರ್ಶಿ ಸಂತೋಷ್ ಮಾರ್ಮಿಕವಾಗಿ ಕಾರ್ಯಕರ್ತರಿಗೆ ತಿಳಿಸಿದರು.
ಜೆಡಿಯುಗೆ ಕೆಜಿಎಲ್ ರವಿ ವಿದಾಯ
ತುಮಕೂರು: ಜಿಲ್ಲಾ ಜೆಡಿ(ಯು) ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಕೆಜಿಎಲ್ ರವಿ ರಾಜಿನಾಮೆ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಪಕ್ಷದ ಅಧ್ಯಕ್ಷನಾಗಿ ಪ್ರಾಮಾಣಿಕ ಸೇವೆಯನ್ನು ಸಂದಾಯ ಮಾಡಿದ್ದೇನೆ. 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಇಲ್ಲದಂತೆ ಮಾಡಿಸಲಾಯಿತು. ರಾಜ್ಯದ ವರಿಷ್ಠರ ಅಸಹಕಾರದಿಂದ ಮತ್ತು ಪ್ರಾಮಾಣಿಕ ಅಧ್ಯಕ್ಷರಿಗೆ ದೊರಕಬೇಕಾದ ಪರಿಪೂರ್ಣವಾದ ಸಹಕಾರ ದೊರಕದ ಕಾರಣ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವುದರೊಂದಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜನಾಮೆ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

