ಕೃಷ್ಣಪ್ಪ ಬೆಂಬಲಿಸಲು ಶಾಸಕರ ಮನವಿ
ಕೊರಟಗೆರೆ: ನಿಮ್ಮಲ್ಲರ ಬೆಂಬಲದಿಂದ ನಾನು ಶಾಸಕನಾಗಿದ್ದೇನೆ. ನನಗೆ ನೀಡಿದ ರೀತಿಯ ಬೆಂಬಲವನ್ನು ಈ ಬಾರಿ ಲೋಕಸಭಾ ಅಭ್ಯರ್ಥಿ ಎ. ಕೃಷ್ಣಪ್ಪನವರಿಗೆ ನೀಡುವ ಮೂಲಕ ಗೆಲ್ಲಿಸಬೇಕು ಎಂದು ಶಾಸಕ ಪಿ.ಆರ್ ಸುಧಾಕರ್ ಲಾಲ್ ತಿಳಿಸಿದರು.
ಅವರು ಕಸಬಾ ಹೋಬಳಿಯ ಜೆಡಿಎಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲ್ಲಿಯವರೆಗೆ ಲೋಕಸಭಾ ವ್ಯಾಪ್ತಿಯಲಿ ನೀರಿಗಾಗಿ ಹಾಹಾಕಾರವಾಗುತ್ತಿದ್ದು ನಮಗೆ ಶಾಶ್ವತ ನೀರಿನ ಯೋಜನೆಯ ಜಾರಿಗಾಗಿ ಹೋರಾಡುವಂತಹ ಅಭ್ಯರ್ಥಿಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ರಾಜ್ಯವ್ಯಾಪ್ತಿಯಾಗಿ ಬೆಂಬಲಿಸಲು ಹಾಗೂ ಹೋರಾಟಕ್ಕೆ ಮುನ್ನುಡಿಯಾಗಿ ನಮ್ಮ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಗೆ ಉತ್ತಮ ಬೆಂಬಲವನ್ನು ನೀಡಬೇಕು ಎಂದರು. ಜೆಡಿಎಸ್ ತಾಲೂಕು ಅಧ್ಯಕ್ಷ ರಂಗಮುತ್ತಯ್ಯ ಮಾತನಾಡಿ ಪ್ರತಿಯೊಬ್ಬ ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ಕನಿಷ್ಠ ಪಕ್ಷ ಬೂತ್ಗೆ ನೂರು ಮತ ಮುಂದಿರುವಂತೆ ಪ್ರಚಾರ ಮಾಡಿದರೆ ಅಭ್ಯರ್ಥಿಯ ಗೆಲವು ಸುಲಭವಾಗಿದ್ದು ಪ್ರತಿಯೊಬ್ಬ ಕಾರ್ಯಕರ್ತರೂ ಪ್ರಜ್ಞಾವಂತರಾಗಿ ವರ್ತಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕಾರ್ಯಾಧ್ಯಕ್ಷ ನರಸಿಂಹರಾಜು, ಮುಖಂಡ ಮಹಾಲಿಂಗಪ್ಪ, ಎಲ್. ರಾಜಣ್ಣ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ್ ಮಾತನಾಡಿದರು. ತಾ.ಪಂ ಸದಸ್ಯರಾದ ಎಲ್.ವಿ. ಪ್ರಕಾಶ್, ಲೋಕೇಶ್, ಮುಖಂಡರಾದ ಅಶ್ವಥ್, ಬುರುಗನಹಳ್ಳಿ ನಾಗಭೂಷಣ್, ಗುಂಡಿನಪಾಳ್ಯ ಈಶ್ವರಪ್ಪ, ಮರೇನಾಯ್ಕನಹಳ್ಳಿ ಪುಟ್ಟನರಸಪ್ಪ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

