ತುಮಕೂರು

ಕೋಮುವಾದಿ ಶಕ್ತಿಗಳನ್ನು ತಿರಸ್ಕರಿಸಿ: ಶ್ರೀನಿವಾಸಯ್ಯ

Published On :

ತುಮಕೂರು: ಸಂವಿಧಾನ ಆಶಯ ಈಡೇರಿಸುವ ಜಾತ್ಯತೀತ ಶಕ್ತಿಗಳನ್ನು ಬೆಂಬಲಿಸಿ, ಕೋಮುವಾದಿಗಳನ್ನು ತಿರಸ್ಕರಿಸುವುದು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿ ಎಂದು ಪ್ರಗತಿಪರ ಚಿಂತಕ ಪ್ರೊ.ಜಿ.ಎಂ. ಶ್ರೀನಿವಾಸಯ್ಯ ಅಭಿಪ್ರಾಯಪಟ್ಟರು.
ಇಲ್ಲಿನ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತಾರಕ್ಷಣಾ ಸಮಿತಿ ವತಿಯಿಂದ ನಡೆದ 'ನಗರ ವಂಚಿತ ಸಮುದಾಯಗಳ ಮತ್ತು ಸ್ಲಂ ನಿವಾಸಿಗಳ ರಾಜಕೀಯ ಜಾಗೃತಿಗಾಗಿ ನಗರದ ಹೊಸಳ್ಳಯ್ಯನ ತೋಟದ ಸ್ಲಂನಲ್ಲಿ ಸ್ಲಂ ನಿವಾಸಿಗಳ ಪ್ರಣಾಳಿಕೆ ಮತ್ತು ಸ್ಲಂ ಜನರ ಮತ ಮಾರಾಟಕ್ಕಿಲ್ಲ' ಎಂಬ ಕಿರು ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು. ಏ.14 ರವರೆಗೆ ತುಮಕೂರು ನಗರದ 42 ಸ್ಲಂಗಳಲ್ಲಿ ಮತ್ತು ಗುಬ್ಬಿ. ಚಿನಾ.ಹಳ್ಳಿ, ಕೊರಟಗೆರೆ ಮತ್ತು ಮಧುಗಿರಿ ತಾಲೂಕುಗಳ 50 ಸ್ಲಂಗಳಲ್ಲಿ ಪ್ರಚಾರಾಂದೋಲನಾ ಹಮ್ಮಿಕೊಂಡಿದ್ದು, ಸಮಾನತೆಯ ಭಾರತ ನಿರ್ಮಾಣಕ್ಕೆ ಬೆಂಬಲಿಸಲೂ ರಾಜ್ಯದ 16 ಲೋಕಸಭಾ ಕ್ಷೇತ್ರಗಳಲ್ಲಿ ಎಚ್ಚೆತ್ತ ಸ್ಲಂ ನಿವಾಸಿಗಳಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು. ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷೆ ರಾಮಕ್ಕ, ಕೊಳಗೇರಿ ಸಮಿತಿ ಸೈಯದ್ ಅಲ್ತಾಪ್, ಶೆಟ್ಟಾಳಯ್ಯ, ರಾಮಯ್ಯ, ಅರುಣ್, ಕೋಮಲ, ಶೃತಿ ಮತ್ತು ರಾಜಣ್ಣ, ಕೆಂಪೇಗೌಡ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.