ತುಮಕೂರು

ಗಾರ್ಮೆಂಟ್ಸ್ಗಳಲ್ಲಿ 'ರಮ್ಯ' ಪ್ರಚಾರ!

Published On :

ಮದ್ದೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಗೆ ಶುಕ್ರವಾರ ಸಂಜೆ ಭೇಟಿ ನೀಡಿ 2 ನೇ ಹಂತದ ಪ್ರಚಾರ ನಡೆಸಿದರು.
ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಕ್ಲೀನ್ ಪ್ಯಾಕ್ಸ್, ಶಾಹಿ ಗಾರ್ಮೆಂಟ್ಸ್ ಸೇರಿರಿದಂತೆ ಹಲವು ಕಾರ್ಖಾನೆಗಳಿಗೆ ಭೇಟಿ ನೀಡಿ, ಕಾರ್ಮಿಕರಲ್ಲಿ ಮತಯಾಚಿಸಿದರು. ಕ್ವೀನ್ಪ್ಯಾಕ್ ಕಾರ್ಖಾನೆಯಲ್ಲಿ ಕಾರ್ಮಿಕರಕಾರ್ಮಿಕರ ಸಭೆ ನಡೆಸಿದ ರಮ್ಯಾ ಕುಂದು-ಕೊರತೆ ಅಲಿಸಿದರು. ನಂತರ ಸಾಯಿ ಗಾರ್ಮೆಂಟ್ಸ್ ಕಾರ್ಖಾನೆಗೆ ಮತಯಾಚಿಸಲು ಆಗಮಿಸಿದ ರಮ್ಯಾಗೆ ಕಾರ್ಮಿಕರು ಹಸ್ತಲಾಘವ ನೀಡಿದರು. ನಂತರ ಶಾಹಿ ಗಾರ್ಮೆಂಟ್ಸ್ ಕಾರ್ಮಿಕರು ವೇತನ ಹೆಚ್ಚಳ ಹಾಗೂ ಸಾರಿಗೆ ಸೌಲಭ್ಯ ಕುರಿತಂತೆ ಮನವಿ ಸಲ್ಲಿಸಿದರು.
ಬಸ್ ಸೌಲಭ್ಯ ಕೊಡಿಸಿ: ಕಾರ್ಖಾನೆಗೆ ಕೆಲಸಕ್ಕಾಗಿ ಮಂಡ್ಯ, ಮಳವಳ್ಳಿ ಹಾಗೂ ಮದ್ದೂರು ತಾಲೂಕುಗಳಿಂದ ಹೆಚ್ಚಾಗಿ ಮಹಿಳಾ ಕಾರ್ಮಿಕರೇ ಬರುತ್ತಿದ್ದಾರೆ. ಇಂಥ ಕಾರ್ಮಿಕರುಗಳಿಗೆ ಕಾರ್ಖಾನೆ ಆಡಳಿತ ಮಂಡಳಿ ಕಡೆಮೆ ಪ್ರಮಾಣದಲ್ಲಿ ವೇತನ ನೀಡುತ್ತಿರುವುದರಿಂದ ಕಾರ್ಮಿಕರು ದುಬಾರಿ ಹಣ ತೆತ್ತು ಸಾರಿಗೆ ಬಸ್ನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾರ್ಖಾನೆ ವತಿಯಿಂದ ಉಚಿತ ಸಾರಿಗೆ ಸೌಲಭ್ಯ ದೊರಕಿಸಿ ಕೊಡುವಂತೆ ಮನವಿ ಮಾಡಿದರು. ಮನವಿಗೆ ಸ್ವಂದಿಸಿದ ರಮ್ಯಾ ಚುನಾವಣೆ ನಂತರ ಕಾರ್ಮಿಕ ಸಮಸ್ಯೆ ಕುರಿತಂತೆ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಐಸಿಸಿ ಚುನಾವಣಾ ವೀಕ್ಷಕ ಸತ್ಯನ್, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಕೆಪಿಸಿಸಿ ಸದಸ್ಯರಾದ ಎಸ್.ಗುರುಚರಣ್, ಟಿ.ಎಸ್.ಸತ್ಯಾನಂದ, ತಾಪಂ ಸದಸ್ಯ ಪಿ.ಸಂದರ್, ಜೋಗಿಗೌಡ, ಅಜ್ಜಹಳ್ಳಿ ರಾಮಕೃಷ್ಣ, ಡಾಬಕಿಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.