ಪಾವಗಡ ಪಟ್ಟಣದ ವಿವಿಧೆಡೆ ಅದ್ಧೂರಿ ಶ್ರೀರಾಮ ನವಮಿ
Published On :
ಪಾವಗಡ: ಶ್ರೀ ರಾಮನವಮಿ ಪ್ರಯುಕ್ತ ಮಂಗಳವಾರ ಪಟ್ಟಣದ ಸಾರ್ವಜನಿಕರು ವಿವಿಧ ಕಡೆ ಬೆಲ್ಲದ ಪಾನಕ ಮತ್ತು ಹೆಸರು ಬೆಳೆ ಹಂಚುವ ಮೂಲಕ ಸಡಗರ ಸಂಭ್ರಮದಿಂದ ಹಬ್ಬ ಆಚರಿಸಿದರು.
ಶ್ರೀ ರಾಮನವಮಿ ಪ್ರಯುಕ್ತ ಪಟ್ಟಣದ ಶ್ರೀ ಶಿರಾಡಿ ಸಾಯಿ ಬಾಬಾ ಟ್ರಸ್ಟ್ ವತಿಯಿಂದ ಪ್ರಮುಖ ರಸ್ತೆಗಳಲ್ಲಿ ವಿವಿಧ ವಾದ್ಯಗೋಷ್ಠಿಗಳ ಮೂಲಕ ಭಜನೆ ಮತ್ತು ಇತರೆ ಕಾರ್ಯಕ್ರಮಗಳೊಂದಿಗೆ ತೆರದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀರಾಮ್ ಮತ್ತು ಶಿರಾಡಿ ಸಾಯಿ ಬಾಬಾ ಅವರ ಹೆಸರಿನಲ್ಲಿ ಪಾನಕ ಮತ್ತು ಇತರೆ ಸಿಹಿಯನ್ನು ಸಾರ್ವಜನಿಕರಿಗೆ ಹಂಚಿದರು.
ಟ್ರಸ್ಟ್ನ ಮುಖಂಡರಾದ ಹನುಮಂತರಾಯಪ್ಪ, ಎಸ್.ಸಿ.ಕರಿಯಣ್ಣ ಮತ್ತು ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಟ್ರಸ್ಟ್ನ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ಪಟ್ಟಣದ 20ನೇ ವಾರ್ಡಿನ ಬೋವಿ ಕಾಲೋನಿಯ ಯುವ ಮುಖಂಡರಾದ ಗಂಗಾಧರ್, ಮಧು,ಅನಿಲ್ಕುಮಾರ್, ರಾಮು ನಾರಾಯಣ, ರಘು, ನರೇಶ್ ನೇತೃತ್ವದಲ್ಲಿ ಭೋವಿ ಸಮುದಾಯದ ಅನೇಕ ಯುವಕರು ಪಟ್ಟಣದ ಶಿರಾ ರಸ್ತೆಯಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ರಾಮ ದೇವರಿಗೆ ವಿವಿಧ ಪೂಜೆ ಪುನಸ್ಕಾರಗಳನ್ನು ನೆರೆವೇರಿಸಿ ಪಾನಕ ಹೆಸರು ಬೆಳೆ ಹಂಚಿ ಸಂಭ್ರಮಿಸಿದರು. ಶ್ರೀರಾಮ ನವಮಿ ವಿಶ್ವ ಪ್ರಕೃತಿ ಪ್ರೊಜೆಕ್ಷನ್ ವತಿಯಿಂದ ಪಟ್ಟಣದ ತಾ. ಕಚೇರಿಯ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಪಾನಕ ಹೆಸರುಬೆಳೆ ಹಂಚಿ ಶುಭ ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

