ಟ್ರಾನ್ಸ್ಫಾರ್ಮರ್ ಅಳವಡಿಸಲು ಆಗ್ರಹಿಸಿ ಕಚೇರಿಗೆ ಮುತ್ತಿಗೆ
ಭಾರತೀನಗರ: ಪಂಪ್ ಸೆಟ್ಗಳಿಗೆ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲು ಒತ್ತಾಯಿಸಿ ಆಲಭುಜನಹಳ್ಳಿ ಗ್ರಾಮಸ್ಥರು ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅಕ್ರಮ-ಸಕ್ರಮ ಅಡಿಯಲ್ಲಿ ಮಂಜುರಾತಿ ಪಡೆದಿರುವ ಟ್ರಾನ್ಸ್ಫಾರ್ಮರ್ಗಳನ್ನು ಒಂದು ವರ್ಷ ಕಳೆದರೂ ಅಳವಡಿಸಿಲ್ಲ. ಗುತ್ತಿಗೆದಾರರು ಲಂಚ ಕೇಳುತ್ತಾರೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಟಿ.ಸಿ. ರಾಮೇಗೌಡ ಮಾತನಾಡಿ, ಟ್ರಾನ್ಸ್ಫಾರ್ಮರ್ ಅಳವಡಿಕೆಗೆ ಅರ್ಜಿ ಹಾಕಿ ಒಂದು ವರ್ಷ ಕಳೆದರೂ ಕ್ರಮ ಕೈಗೊಂಡಿಲ್ಲ. ಇದರಿಂದ ಬೆಳೆಗಳಿಗೆ ನೀರಿಲ್ಲದೇ ಒಣಗುತ್ತಿವೆ ಎಂದರು. ಜಯರಾಮು, ರಾಮೇಗೌಡ, ಯೋಗೇಶ್, ಅಪ್ಪಾಜಿಗೌಡ, ಬಾಸ್ಕರ್, ಪಾಪಣ್ಣ, ಸಿದ್ದೇಗೌಡ, ಮಹೇಶ್, ಬೋರೇಗೌಡ, ಎ.ಬಿ. ಸತೀಶ್ ಇದ್ದರು.
ಕಾಂಗ್ರೆಸ್ಗೆ ಮೋದಿ ಭೀತಿ: ಶೆಟ್ಟರ್
ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ನ ಅನೇಕ ನಾಯಕರು, ಮೋದಿ ಅಲೆ ಇಲ್ಲ ಎಂದು ಹೇಳುತ್ತಲೇ ಮೋದಿ ಅಲೆ ಇದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ನಾಯಕರಿಗೆ ಮೋದಿ ಅಲೆಯಿಂದ ಭಯ ಆವರಿಸಿದ್ದು, ಹಾಗಾಗಿಯೇ ಮೋದಿ ಅಲೆ ಇಲ್ಲ ಎಂದು ಪದೇಪದೇ ಹೇಳುತ್ತಿದ್ದಾರೆ. ಮೋದಿ ಆಲೆ ಇಲ್ಲದಿದ್ದರೆ ಅವರ ಬಗ್ಗೆ ಕಾಂಗ್ರೆಸ್ ಮುಖಂಡರು ಮಾತನಾಡುತ್ತಲೇ ಇರಲಿಲ್ಲ ಎಂದರು. ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಚುನಾವಣೆಗೂ ಮುನ್ನವೇ ಬಿಂಬಿಸುತ್ತಿರುವುದರಲ್ಲಿ ತಪ್ಪಿಲ್ಲ. ಈ ಹಿಂದೆ ಇಂದಿರಾಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದ್ದ ಉದಾಹರಣೆ ಇದೆ ಎಂದರು.
ಎನ್ಡಿಎ ಬಹುಮತ: ರಾಷ್ಟ್ರದಲ್ಲಿ ಎನ್ಡಿಎಗೆ ಬಹುಮತ ಬರುವುದರಲ್ಲಿ ಅನುಮಾನ ಇಲ್ಲ ಎಂದ ಶೆಟ್ಟರ್, ಎಲ್.ಕೆ. ಆಡ್ವಾಣಿ ಕೂಡ ಬಿಜೆಪಿಗೆ ಬಹುಮತ ಬರದಿದ್ದರೂ, ಎನ್ಡಿಎಗೆ ಬಹುಮತ ಬರುವುದು ನಿಶ್ವಿತ ಎಂದಿದ್ದಾರೆ. ರಾಜ್ಯದಲ್ಲಿ ಹಾಸನ ಕ್ಷೇತ್ರ ಸೇರಿದಂತೆ 20ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಪಾಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಭಿವೃದ್ಧಿಯ ಅಜೆಂಡಾ: ಬಿಜೆಪಿ ಅಭ್ಯರ್ಥಿಗಳನ್ನು ಪಕ್ಷ ಆಯ್ಕೆ ಮಾಡುತ್ತದೆಯೇ ಹೊರತು, ಆರ್ಎಸ್ಎಸ್ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಶೆಟ್ಟರ್ ಉತ್ತರಿಸಿದ ಅವರು, ಬಿಜೆಪಿ ಪ್ರಣಾಳಿಕೆ ಮೋದಿ ಅಜೆಂಡಾ ಅಲ್ಲ, ಅದು ಅಭಿವೃದ್ಧಿಯ ಅಜೆಂಡ ಎಂದು ಪ್ರತಿಕ್ರಿಯಿಸಿದರು.
ಜೆಡಿಎಸ್ ಮುಳುತ್ತಿರುವ ಹಡಗು: ರಾಜ್ಯದಲ್ಲಿ ಜೆಡಿಎಸ್ ಮುಳುಗುತ್ತಿರುವ ಹಡಗಾದರೆ, ತೃತೀಯ ರಂಗಕ್ಕೆ ಇನ್ನೂ ಚಾಲನೆಯೇ ಸಿಕ್ಕಿಲ್ಲ. ರಾಜ್ಯದಲ್ಲಿ ದೇವೆಗೌಡರ ಜೊತೆ ಯಾವ ಪಕ್ಷಗಳು ಕೈಜೋಡಿಸಿವೆ ಎಂದು ಪ್ರಶ್ನಿಸಿದ ಶೆಟ್ಟರ್, ದೇಶದಲ್ಲಿ ತೃತೀಯ ರಂಗ ಹುಟ್ಟುವುದಿಲ್ಲ ಎಂದರು.ರಾಜ್ಯದಲ್ಲಿ ಜೆಡಿಎಸ್ ಮುಳುಗುತ್ತಿದೆ. ಕೆಲವು ಕಡೆ ಜೆಡಿಎಸ್ಗೆ ಅಭ್ಯರ್ಥಿಯೇ ಸಿಕ್ಕಿಲ್ಲ. ಇನ್ನೂ ಕೆಲವು ಕಡೆ ಅಭ್ಯರ್ಥಿಗಳೇ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಪಕ್ಷದ ಅಸ್ತಿತ್ವವೇ ಇಲ್ಲವಾಗಲಿದೆ ಎಂದರು.
ದೇವನೂರು ಮಹಾದೇವಗೆ ಟೀಕೆ
ತುಮಕೂರು: ಸರ್ವೋದಯ ಪಕ್ಷದ ಅಧ್ಯಕ್ಷರೂ ಆಗಿರುವ ದೇವನೂರು ಮಹಾದೇವ ಅವರು ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿಗೆ ಬೆಂಬಲ ನೀಡುತ್ತಿರುವುದಕ್ಕೆ ಸಾಹಿತಿ ಕೆ.ಬಿ. ಸಿದ್ದಯ್ಯ ಆಕ್ರೋಶ ವ್ಯಕ್ತಪಡಿಸಿದರು.ಒಂದು ಕಡೆ ಕಾಂಗ್ರೆಸ್ಗೆ ಮತ್ತೊಂದು ಕಡೆ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸುತ್ತಿರುವ ದೇವನೂರು ಅವರ ನಿಲುವು ಪ್ರಶ್ನಾರ್ಹವಾಗಿದೆ ಎಂದರು.
ಕೊರಟಗೆರೆಗೆ ಸಿಎಂ ಭೇಟಿ ಇಂದು
ಕೊರಟಗೆರೆ: ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರ ಪರವಾಗಿ ಚುನಾವಣಾ ಪ್ರಚಾರ ಭಾಷಣ ಮಾಡಲು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ರೊಂದಿಗೆ ಕೊರಟಗೆರೆಗೆ ಆಗಮಿಸಲಿದ್ದಾರೆ. ಕೊರಟಗೆರೆ ಸರ್ಕಾರಿ ಜೂನಿಯರ್ ಮೈದಾನದಲ್ಲಿ 2.30 ಕ್ಕೆ ಏರ್ಪಡಿಸಿರುವ ಸಮಾರಂಭದಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹ್ಮದ್, ಶಾಸಕ ರಾಜಣ್ಣ, ಡಾ. ರಫೀಕ್ ಅಹಮದ್ ಕಾಂಗ್ರೆಸ್ ಪಕ್ಷದ ಸಚಿವರು ಸೇರಿದಂತೆ ರಾಜ್ಯ ಮಟ್ಟದ ಮುಖಂಡರು ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಗೆಲುವು ನಿಶ್ಚಿತ: ಪುಟ್ಟಸ್ವಾಮಿ
ಅರಕಲಗೂಡು: ಈ ಬಾರಿಯಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರ ಗೆಲುವು ನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡಡಿ. ಸಿ.ಪುಟ್ಟಸ್ವಾಮಿ ತಿಳಿಸಿದ್ದಾರೆ.
ಪ್ರಚಾರಕ್ಕೆ ಸಿಎಂ: ಏ. 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಳೆನರಸೀಪುರಕ್ಕೆ ಮತಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.
ಡಿಕ್ಕಿ: ಬೈಕ್
ಸವಾರ ಸಾವು
ಕುಣಿಗಲ್: ಬೈಕ್ ಮತ್ತು ಆಟೋ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಪಟ್ಟಣದ ಆಶ್ರಯಕಾಲೋನಿಯ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಆಶ್ರಯ ಕಾಲೋನಿ ವಾಸಿ ಗಾರೆ ಕಾರ್ಮಿಕ ಜಯಕಾಂತ್ (24) ಎಂದು ಅವರನ್ನು ಗುರುತಿಸಲಾಗಿದೆ. ಈತ ತನ್ನ ಬೈಕ್ನಲ್ಲಿ ಮುಖ್ಯರಸ್ತೆಗೆ ಆಗಮಿಸಿದಾಗ ಆಟೋರಿಕ್ಷಾ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಪರಿಚಿತ ಶವ ಪತ್ತೆ
ತಿಪಟೂರು: ತಾಲೂಕಿನ ಹೊನ್ನವಳ್ಳಿ-ತಿಪಟೂರು ರೈಲು ನಿಲ್ದಾಣಗಳ ಮಧ್ಯೆ ರೈಲೊಂದಕ್ಕೆ ಸುಮಾರು 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಸಿಕ್ಕಿ ಮೃತಪಟ್ಟಿದ್ದಾರೆ. ವ್ಯಕ್ತಿಯು 5.5 ಅಡಿ ಎತ್ತರ, ಅಗಲಮುಖ, ಸಾಧಾರಣಾಮೈಕಟ್ಟು, ಸಾದಾ ಕಪ್ಪುಮೈ ಬಣ್ಣ, ಕೋಲು ಮುಖ, ಚಪ್ಪಟೆ ಮೂಗು ತಲೆಯಲ್ಲಿ 3 ಇಂಚು ಕೂದಲು ಇದ್ದು ಆಕಾಶ ಬಣ್ಣದ ತುಂಬು ತೋಳಿನ ಶರ್ಟು, ಬಿಳಿ ಬಣ್ಣದ ಬನಿಯನ್, ಬಿಳಿ ಬಣ್ಣದ ಕಾಟನ್ ಪ್ಯಾಂಟ್ ಧರಿಸಿದ್ದಾನೆ. ವಿವರಕ್ಕೆ ದೂರವಾಣಿ 08174-232244 ಸಂಪರ್ಕಿಸಿ.
ಇಂದು ಕಳಸ, ಉಯ್ಯಾಲೋತ್ಸವ
ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಶ್ರೀಕಾಳಿಕಾಂಬ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಬೆಳಿಗ್ಗೆ ಗ್ರಾಮದೇವತೆ ಕಾಳಮ್ಮ, ಈರಬೊಮ್ಮಕ್ಕದೇವಿ, ಗೌಡಗೆರೆ ದುರ್ಗಮ್ಮ, ಹುಳಿಯಾರು ದುರ್ಗಮ್ಮ ದೇವರ ನೇತೃತ್ವದಲ್ಲಿ ಕಳಸ ಮಹೋತ್ಸವ ನಡೆಯಲಿದೆ. ರಾತ್ರಿ 9 ಗಂಟೆಗೆ ಅಮ್ಮನವರ ವೈಭವದ ಹೂವಿನ ಉಯ್ಯಾಲೋತ್ಸವ ಜರುಗಲಿದೆ. ಶುಕ್ರವಾರ ಬೆಳಿಗ್ಗೆ ಅಮ್ಮನವರ ಉತ್ಸವ ಹಾಗೂ ಸಿಡಿ ಕಾರ್ಯಕ್ರಮ ನಡೆಯಲಿದೆ.
ಅದ್ಧೂರಿ ಶ್ರೀರಾಮೋತ್ಸವ
ತಿಪಟೂರು: ಪಟ್ಟಣದ ಕೆ.ಇ.ಬಿ ಕಾಲೋನಿಯಲ್ಲಿರುವ ಶ್ರೀ ರಾಮಮಂದಿರದಲ್ಲಿ ಶ್ರೀ ರಾಮನವಮಿ ಅಂಗವಾಗಿ ಶ್ರೀ ರಾಮೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು. ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾದರು. ಹಬ್ಬದ ಪ್ರಯುಕ್ತ ಶ್ರೀರಾಮ ಸೀತಾ ಕಲ್ಯಾಣ, ಭರತ ಪಾದುಕಾ ಸೇವೆ, ಶಬರಿ ಸಂದರ್ಶನ, ಪುಷ್ಪಕಾರೋಹಣ ಮತ್ತಿತರ ಪೂಜಾ ಕಾರ್ಯಕ್ರಮಗಳು ಸೇರಿದಂತೆ ಶಾಂತಿ ಹೋಮಾದಿಗಳು ನಡೆದವು. ನಂತರ ಭಕ್ತಾದಿಗಳಿಗೆ ಪಾನಕ, ಪಲಹಾರಗಳನ್ನು ವಿತರಿಸಲಾಯಿತು. ಅಧ್ಯಕ್ಷರು ಲಿಂಗದೇವರು, ಮರಿಯಪ್ಪ, ಎಇಇ ಮಲ್ಲಪ್ಪಾಚಾರ್ ಸೇರಿದಂತೆ ಪದಾಧಿಕಾರಿಗಳು, ಸಮಿತಿ ಸದಸ್ಯರುಗಳು ಹಾಗೂ ಬೆಸ್ಕಾಂ ಅಧಿಕಾರಿಗಳು, ನೌಕರರು, ಗುತ್ತಿಗೆದಾರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

