ತುಮಕೂರು

ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಅಲೆ

Published On :

ಕ.ಪ್ರ.ವಾರ್ತೆ ಮಧುಗಿರಿ ಏ. 9
ಕರ್ನಾಟಕದಲ್ಲಿ ಮೋದಿ ಅಲೆ ಇಲ್ಲ, ಸಿಎಂ ಸಿದ್ದರಾಮಯ್ಯ ಅವರ ಅಲೇ ಮಾತ್ರ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಟ ಮುಖ್ಯಮಂತ್ರಿ ಚಂದ್ರು  ತಿಳಿಸಿದರು.
ಇಲ್ಲಿ ನಡೆದ ಮಧುಗಿರಿ ತಾಲೂಕು ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ  ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ತಕ್ಷಣ ಕಾಂಗ್ರೆಸ್ ಪ್ರಣಾಳಿಕೆಯಂತೆ 1 ರು.ಕೆಜಿ ಅಕ್ಕಿ, ರೈತರಿಗೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಹತ್ತು ಹಲವು ಬಡವರ, ದೀನ ದಲಿತರ ಹಾಗೂ ಎಲ್ಲ ವರ್ಗದ ಜನರ ಏಳಿಗೆಗೆ ಜಾರಿಗೊಳಿಸಿದ ಕಾರ್ಯಕ್ರಮಗಳು ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರವನ್ನು ಜನತೆ ಬೆಂಬಲಿಸಬೇಕು. ಆ ಮೂಲಕ  ಮುದ್ದಹನುಮೇಗೌಡ ಅವರಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಸಮಪಾಲು ಕಾಣಲಿಲ್ಲ: ನಾನು ಅಲ್ಲಿ ಅನುಭವಿಸಿದ ನೋವು-ಸಂಕಟ ತಾಳಲಾರದೇ ಬಿಜೆಪಿ ಬಿಟ್ಟು ಎಲ್ಲ ವರ್ಗದ ಜನರನ್ನು ರಕ್ಷಿಸುವ  ಕಾಂಗ್ರೆಸ್ , ಸಿಎಂ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಸರ್ಕಾರ ಎಂಬುದನ್ನು ಮನಗಂಡು ಕಾಂಗ್ರೆಸ್ ಸೇರಿದ್ದೇನೆ. ವಾಜಪೇಯಿ, ಅಡ್ವಾಣಿ ಅವರ ಬಿಜೆಪಿ ಈಗಿಲ್ಲ.   ಇನ್ನು ಜೆಡಿಎಸ್ ಪಕ್ಷ ಅಪ್ಪ-ಮಕ್ಕಳ ಪಕ್ಷ. ಈ ಎರಡು ಪಕ್ಷದಲ್ಲಿ ಬೇರೆ ವರ್ಗದವರಿಗೆ ಅವಕಾಶ ಸಿಗಲ್ಲ, ಎಲ್ಲ ಜನರನ್ನು ಪ್ರೀತಿಸುವ  ಒಟ್ಟಿಗೆ ಕೊಂಡೊಯ್ಯುವ ಮತ್ತು ದೇಶದ ಐಕ್ಯತೆ ಕಾಪಾಡುವ  ಸರ್ವಜನಾಂಗದ ಶಾಂತಿಯ ತೋಟ ಕಾಂಗ್ರೆಸ್ ಎಂದರು. ಮುದ್ದಹನುಮೇಗೌಡರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಪೂರಕ ಕೆಲಸ: ಶಾಸಕ ಕೆ.ಎನ್.ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂಗ್ರೆಸ್‌ನಲ್ಲಿ   ಧ್ವನಿ ಇಲ್ಲದ  ಸಮುದಾಯದವರು ಸಿಎಂ ಆಗಿದ್ದಾರೆ.ಎಲ್ಲ ಜನರ ಹಿತ ಕಾಪಾಡುವ ಮತ್ತು ಸುಭದ್ರ ರಾಷ್ಟ್ರ ನಿಮಾರ್ಣಕ್ಕೆ ಶ್ರಮಿಸುವ ಏಕೈಕ ಪಕ್ಷ ಕಾಂಗ್ರೆಸ್ ಎಂದ ರಾಜಣ್ಣ, ನಾನು ಶಾಸಕನಾದ ನಂತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ  ಕೆಲಸ ಮಾಡುತ್ತಿದ್ದೇನೆ. ಎತ್ತಿನ ಹೊಳೆ ಯೋಜನೆಗೆ 12,912 ಕೋಟಿ ಮೀಸಲಿಟ್ಟಿದ್ದು 4 ವರ್ಷದೊಳಗೆ  ತಾ.45 ಕೆರೆಗಳಿಗೆ ನೀರುಣಿಸುವುದಾಗಿ ಭರವಸೆ ನೀಡಿದರು. ಸೂರಿಲ್ಲದ ಎಲ್ಲ ವರ್ಗದ ಜನರಿಗೆ ಮನೆ ಕಲ್ಪಿಸುವ ಮೂಲಕ ತಾಲೂಕನ್ನು ಗುಡಿಸಲು ರಹಿತ ತಾಲೂಕನ್ನಾಗಿ ನಿರ್ಮಿಸುವುದಾಗಿ ತಿಳಿಸಿ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರಿಗೆ ಮತ ಹಾಕುವ ಮೂಲಕ ನನ್ನ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಪುರಸಭೆ ಅಧ್ಯಕ್ಷ  ಎನ್.ಗಂಗಣ್ಣ, ಉಪಾಧ್ಯಕ್ಷೆ ಜುಬೇದಭಾನು, ಡಿ.ಜಿ.ಎಸ್.ಶೆಟ್ಟಿ, ಶಿವಣ್ಣ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಮಣ್ಣ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ರಾಜ್‌ಗೋಪಾಲ್, ತುಮಲ್ ಅಧ್ಯಕ್ಷ ಚಂದ್ರಶೇಖರ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಎಂ.ವಿ.ಗೋವಿಂದರಾಜು, ಕೆ.ಪ್ರಕಾಶ್, ತಾ.ಪಂ.ಅಧ್ಯಕ್ಷೆ ಸುನಂದ, ಸದಸ್ಯೆ ಯಶೋಧ, ಜಯಣ್ಣ, ಸತ್ಯನಾರಾಯಣ, ರಘು, ಎಂ.ಪಿ.ಗಣೇಶ್, ಎಂ.ಎಸ್. ಚಂದ್ರಶೇಖರ್ ಮುಖಂಡ ಎಸ್.ಡಿ.ಕೃಷ್ಣಪ್ಪ, ಭಾರತಮ್ಮ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.