ಶ್ರೀಕೋಡಿ ರಂಗ ಸ್ಮರಣ ಸಂಚಿಕೆ ಬಿಡುಗಡೆ
ತುಮಕೂರು: ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಮುದಿಗೆರೆ ಮಜರೆಯ ಶ್ರೀ ಕೋಡಿ ರಂಗನಾಥ ದೇವಾಲಯ ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ ಶ್ರೀರಾಮನವಮಿ ಪ್ರಯುಕ್ತ ಶ್ರೀ ಕೋಡಿ ರಂಗನಾಥ ಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ನಡೆಯಿತು. ಈ ವೇಳೆ ಶಿಥಿಲವಾಗುತ್ತಿದ್ದ ದೇವಾಲಯವನ್ನು ಸುಂದರ ವಿನ್ಯಾಸದಲ್ಲಿ ಪುನರ್ ನಿರ್ಮಾಣ ಮಾಡಿದ ಸವಿ ನೆನಪಿಗಾಗಿ ಟ್ರಸ್ಟ್ ವತಿಯಿಂದ ಶ್ರೀಕೋಡಿರಂಗ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಿಮ್ಮಾಚಾರ್ ಮಾತನಾಡಿ, ಶ್ರೀಕೋಡಿ ರಂಗ ಎಂಬ ಈ ಸ್ಮರಣ ಸಂಚಿಕೆವಿಶ್ವಕರ್ಮ ಜನಾಂಗದ ಪ್ರತಿಯೊಬ್ಬರ ಮನೆಯಲ್ಲಿ ಇಟ್ಟುಕೊಳ್ಳಲೇಬೇಕಾದ ಅತ್ಯಮೂಲ್ಯ ಗ್ರಂಥ. ಇದರಲ್ಲಿ ನಮ್ಮ ಜನಾಂಗದ ಸಂಸ್ಕೃತಿ, ನಡೆ ನುಡಿಗಳ ಬಗ್ಗೆ ವಿವರವಾಗಿ ಬರೆಯಲಾಗಿದೆ. ಎಲ್ಲರೂ ಇದನ್ನು ಕೊಂಡು ಓದುವಂತೆ ಸಲಹೆ ನೀಡಿದರು.
ಸ್ಮರಣ ಸಂಚಿಕೆಯ ಸಂಪಾದಕರಾದ ಪತ್ರಕರ್ತ ಈಚನೂರು ಕುಮಾರ್ ಮಾತನಾಡಿ, ಬಹಳ ಶ್ರಮಪಟ್ಟು ಈ ಸ್ಮರಣ ಸಂಚಿಕೆಯನ್ನು ಸಿದ್ಧಪಡಿಸಲಾಗಿದೆ.
ನಮ್ಮ ಜನಾಂಗದ ಸಂಸ್ಕೃತಿ, ಅಚಾರ ವಿಚಾರಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದ್ದು, ಮೈಸೂರು ಸಂಸ್ಥಾನದಲ್ಲಿದ್ದ ಹಿರಿಯರಿಂದ ಮಾಹಿತಿ ಕಲೆಹಾಕಲಾಗಿದೆ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಕೊಂಡು ಓದುವ ಮೂಲಕ ಪ್ರೋತ್ಸಾಹಿಸಬೇಕೆಂದರು.
ಅಧ್ಯಕ್ಷತೆಯನ್ನು ಕೋಡಿ ರಂಗನಾಥಸ್ವಾಮಿ ಟ್ರಸ್ಟ್ನ ಅಧ್ಯಕ್ಷ ಕಾಳಹಸ್ತಾಚಾರ್, ಉಪಾಧ್ಯಕ್ಷ ಕೆ.ಶಂಕರಾಚಾರ್ಯ, ಕಾರ್ಯದರ್ಶಿ ಆರ್.ರಾಮುಸ್ವಾಮಿ, ಜಂಟಿ ಕಾರ್ಯದರ್ಶಿ ಸಿ. ಕಾಳಸ್ತಾಚಾರ್, ಪಿ.ನಾಗರಾಜ್ ಭಾಗವಹಿಸಿದ್ದರು.
ಆರ್. ಅಶೋಕ ಭೇಟಿ ಇಂದು
ಕೊರಟಗೆರೆ: ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರ ಪರವಾಗಿ ಮತಯಾಚನೆ ಮಾಡಲು ಕೊರಟಗೆರೆ ಪಟ್ಟಣಕ್ಕೆ ಗುರುವಾರ ಬೆಳಿಗ್ಗೆ 11 ಕ್ಕೆ ಮಾಜಿ ಉಪಮುಖ್ಯಮಂತ್ರಿ ಆರ್. ಆಶೋಕ್, ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ, ಬಿ.ಸೋಮಣ್ಣ, ಸೊಗಡು ಶಿವಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಪವನ್ಕುಮಾರ್ ಸೇರಿದಂತೆ ಇನ್ನಿತರ ಮುಖಂಡರು ಆಗಮನಿಸುತ್ತಿರುವುದಾಗಿ ತಾಲೂಕು ಬಿಜೆಪಿ ಮುಖಂಡ ವಿಜಯ್ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

