ತುಮಕೂರು

ದೇಶದ ಭದ್ರತೆ: ಕಾಂಗ್ರೆಸ್ ವಿಫಲ

Published On :

ಕುಣಿಗಲ್: ಈ ದೇಶದ ಭದ್ರತೆ ಹಾಗೂ ರಕ್ಷಣೆ ಮಾಡುವಲ್ಲಿ ವಿಫಲವಾದ ಕಾಂಗ್ರೆಸ್ ತಿರಸ್ಕರಿಸಿ, ಸದೃಢ, ಸಮರ್ಥ ಹಾಗೂ ಸ್ವಾಭಿಮಾನ ಭಾರತ ರಾಷ್ಟ್ರ ನಿರ್ಮಾಣಕ್ಕೆ , ಬಿಜೆಪಿ ಬೆಂಬಲಿಸುವಂತೆ ಮಾಜಿ ಸಚಿವ ರಾಮಚಂದ್ರ ಗೌಡ ಕರೆ ನೀಡಿದರು.
ಶನಿವಾರ, ತಾಲೂಕಿನ ಕೊತ್ತಗೆರೆ,ಎಡೆಯೂರು, ಅಮೃತೂರು, ಹುಲಿಯೂರುದುರ್ಗ ಹೋಬಳಿಗಳ ವ್ಯಾಪ್ತಿಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ ಪರ ರೋಡ್ ಶೋ ಮೂಲಕ ಮತಯಾಚನೆ ಮಾಡಿ, ಅಮೃತೂರಿನಲ್ಲಿ ಮಾತನಾಡಿದರು.
ಒಂದೆಡೆ ಪಾಕಿಸ್ತಾನ ಮತ್ತೊಂದೆಡೆ ಚೀನಾ ಭಾರತದ ನೆಲವನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಫಲವಾಗಿದೆ. ಸತತ
ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿ ಜನಸಾಮಾನ್ಯರ ವಿರೋಧಿಯಾಗಿದೆ.
 ದೇಶವನ್ನು ಮುನ್ನಡೆಸಲು ಸಮರ್ಥ ಪ್ರಧಾನಿ ಇರಬೇಕು. ಆದರೆ ಸತತ 10 ವರ್ಷಗಳ ಕಾಲ ಕಾಂಗ್ರೆಸ್ ಪ್ರತಿನಿಧಿಸಿದ ಪ್ರಧಾನಿ ಮನಮೋಹನ್ ಸಿಂಗ್, ರಣರಂಗದಿಂದ ಕಾಲ್ಕಿತ್ತಿದ್ದಾರೆ. ಇನ್ನು ದೇಶದ
ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ವಿಫಲರಾದ ಅರ್ಥಸಚಿವ ಚಿದಂಬರಂ ಚುನಾವಣೆ ಕಣದಿಂದ
ಹಿಂದೆ ಸರಿದಿರುವುದು ನೋಡಿದರೆ ಕಾಂಗ್ರೆಸ್ ಸ್ಥಿತಿ ಹೀನಾಯವಾಗಿದೆ ಎಂದು ತೋರುತ್ತದೆ. ದೇಶವನ್ನು ಎಲ್ಲಾರಂಗದಲ್ಲೂ ಹಿಂದುಳಿಯುವಂತೆ ಮಾಡಿರುವ ಕಾಂಗ್ರೆಸ್ ತಿರಸ್ಕರಿಸಿ, ಸುಭದ್ರ ಹಾಗೂ ಸ್ವಾವಲಂಬಿ ರಾಷ್ಟ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ಕುಡಿವ ನೀರು ಪೂರೈಕೆ: ಅಭ್ಯರ್ಥಿ ಮುನಿರಾಜುಗೌಡ, ತಾವು ಆಯ್ಕೆಯಾದಲ್ಲಿ ಕ್ಷೇತ್ರದ ಪ್ರಮುಖ ಸಮಸ್ಯೆಯಾದ ಕುಡಿಯುವ ನೀರು ಪೂರೈಕೆ ಸೇರಿದಂತೆ, ನೀರಾವರಿ ಸಮಸ್ಯೆ, ರಾಜಧಾನಿಗೆ ಹತ್ತಿರವಿದ್ದರೂ ಕೈಗಾರಿಕೆ ರಂಗ ಅಭಿವೃದ್ಧಿ ಹೀನವಾಗಿದ್ದು ಹಲವು ಕೈಗಾರಿಕೆಗಳ ಸ್ಥಾಪನೆ ಮೂಲಕ ಯುವಜನತೆಗೆ ಉದ್ಯೋಗವಕಾಶ ಸೃಷ್ಟಿಸಿ ಪಟ್ಟಣ ವಲಸೆ ತಪ್ಪಿಸುವುದು ಸೇರಿದಂತೆ ಹಲವು ಜನಪರ ಅಭಿವೃದ್ಧಿ ಕಾರ್ಯ ಮಾಡಲಾಗುವುದೆಂದರು.   ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಕೆಲ ಪಕ್ಷಗಳು ಬಿಜೆಪಿ ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿವೆ. ಆದರೆ ಇದೆ ಕಾಂಗ್ರೆಸ್ ಅಗಲಿ ಜೆಡಿಎಸ್ ಆಗಲಿ ಕೇವಲ ಮುಸ್ಲಿಮರನ್ನು ಮತಬ್ಯಾಂಕ್ ಅಗಿ ಮಾಡಿಕೊಂಡು  ಅಭಿವೃದ್ಧಿಗೆ ಶ್ರಮಿಸಿಲ್ಲ. ಬಿಜೆಪಿ ಮಾತ್ರ ಮುಸ್ಲಿಮರ ಸಮಗ್ರ ಅಭಿವೃದ್ಧಿಗೆ ಹಲವು ಪರಿಣಾಮಕಾರಿ ಕಾರ್ಯಕ್ರಮ ರೂಪಿಸಿವೆ ಎಂದರು.
 ಮುಖಂಡರಾದ ಕೆ.ಎಂ. ತಿಮ್ಮಪ್ಪ, ನಟರಾಜು, ಬಲರಾಮ, ಕೃಷ್ಮ, ಸುರೇಶ, ಚಿಕ್ಕರಾಮಯ್ಯ, ರಂಗನಾಥ, ಮಂಜುನಾಥ, ಕುಮಾರಗೌಡ, ರೇಣುಕಪ್ಪ, ರಾಮಕೃಷ್ಣಯ್ಯ ಇತರರು ಪಾಲ್ಗೊಂಡಿದ್ದು, ನೂರಾರು ಕಾರ್ಯಕರ್ತರಕು ಬೈಕ್ ರ್ಯಾಲಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.