ತುಮಕೂರು

ಭಾರತ ಸಂವಿಧಾನವೇ ಸರ್ವ ಶ್ರೇಷ್ಠ

Published On :

ಶಿರಾ: ವಿವಿಧ ಭಾಷೆ ವೈವಿಧ್ಯ ಸಂಸ್ಕೃತಿಯನ್ನು ಹೊಂದಿರುವ ಅಖಂಡ ಭಾರತದಲ್ಲಿ ಎಲ್ಲಾ ಜಾತಿ-ಧರ್ಮ, ಗ್ರಂಥಗಳಿಗಿಂತ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಭಾರತ ಸಂವಿಧಾನವೇ ಸರ್ವ ಶ್ರೇಷ್ಠ ಎಂದು ಉಪನ್ಯಾಸಕ ಕೊಟ್ಟ ಶಂಕರ್ ಅವರು ತಿಳಿಸಿದರು. ಅವರು ತಾಲೂಕಿನ ಕೊಟ್ಟ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ  ಡಾ.ಬಿ.ಆರ್.ಅಂಬೇಡ್ಕರ್ ಅವರ 123 ನೇ ಜನ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಮನಿತ ಜಾತಿಗಳ ಧ್ವನಿಯಾಗಿ ಸ್ವಾಭಿಮಾನಿ  ಹೋರಾಟಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ಮಹಾನ್ ವ್ಯಕ್ತಿಯಾಗಿದ್ದಾರೆ. ಸ್ವಾಭಿಮಾನಿ ರಾಜಕಾರಣಕ್ಕೆ ನಾಂದಿ ಆಡಿದ ವಿಶ್ವ ಕಂಡ ಅಪರೂಪದ ವ್ಯಕ್ತಿ ಎಂದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಗಿರಿತಿಮ್ಮಪ್ಪ ಮಾತನಾಡಿ, ಇಂದಿನ ಮಕ್ಕಳು ಅಂಬೇಡ್ಕರ್ ಆಶಯವನ್ನು ಈಡೇರಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಶಿಕ್ಷಣಕ್ಕೆ ಮಾತ್ರ ಎಲ್ಲಾ ಸಾಮಾಜಿಕ ಸವಾಲುಗಳಿಗೆ ಉತ್ತರ ಹುಡುಕುವ ಶಕ್ತಿ ಇದೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ನೀಲಕಂಠ, ಭಾರತಿ, ಮಂಜಮ್ಮ, ಯುವಶ್ರೀ, ಶಶಿಕಲಾ, ಜೈಭೀಮ್ ಯುವ ವೇದಿಕೆಯ ರಂಗನಾಥ್, ದೊಡ್ಡರಂಗಪ್ಪ, ಕರಿಯಣ್ಣ, ಕಂಬಣ್ಣ, ರಂಗನಾಥಯ್ಯ, ಸುನಿತಾ ಬಾಯಿ, ದ್ರಾಕ್ಷಾಯಿಣಿ, ಮತ್ತಿತರರು ಹಾಜರಿದ್ದರು. ಶಿಕ್ಷಕಿ ಶಶಿಕಲಾ ಸ್ವಾಗತಿಸಿ ನಿರೂಪಿಸಿದರು, ನೀಲಕಂಠಪ್ಪ ವಂದಿಸಿದರು.

ಮಹಾನ್ ಮಾನವತಾವಾದಿ ಅಂಬೇಡ್ಕರ್
ಪಾವಗಡ: ಅಂಬೇಡ್ಕರ್ ಅವರೊಬ್ಬ ಮಹಾನ್ ಮಾನವತಾವಾದಿ ಎಂದು ತಾ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಿಆರ್‌ಪಿ ಆರ್.ಎಂ. ನರಸಿಂಹ ಅವರು ಬಣ್ಣಿಸಿದರು. ಅಂಬೇಡ್ಕರ್ ಜಯಂತಿ ಅಂಗವಾಗಿ ಶಿಕ್ಷಣ ಇಲಾಖೆ ಮತ್ತು ಕೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಸೋಮವಾರ ಪಟ್ಟಣದ ಬಿಆರ್‌ಸಿ ಕಚೇರಿಯ ಅವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಎಲ್ಲಾ ವರ್ಗಗಳಿಗೆ ಸಂವಿಧಾನದಲ್ಲಿ ಸಮಾನತೆ ಕಲ್ಪಿಸುವ ಮೂಲಕ ದೇಶ ಭಾವೈಕ್ಯತೆಯ ಧಾಮವಾಗಬೇಕೆಂದು ಶ್ರಮಿಸಿದ ದೀಮಂತ ನಾಯಕ ಅಂಬೇಡ್ಕರ್ ಎಂದ ಅವರು ಇತಿಹಾಸ ಸೃಷ್ಟಿ ಮಾಡಿದ ಅಂಬೇಡ್ಕರ್ ಅವರ ಆದರ್ಶ ಮತ್ತು ತತ್ವ ಸಿದ್ಧಾಂತಗಳನ್ನು  ಪ್ರತಿಯೊಬ್ಬರು ಪಾಲಿಸುವಂತೆ ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.