ಅಂಬೇಡ್ಕರ್ ಆದರ್ಶ ಪಾಲನೆ ಅಗತ್ಯ
ತುಮಕೂರು: ಅಂಬೇಡ್ಕರ್ ಆದರ್ಶಗಳು, ಸಮಾನತೆ ಸಾಧಿಸುವಲ್ಲಿ ಪ್ರಯತ್ನಗಳು ಮುಂದೆ ಸಾಗಲು ತಾತ್ವಿಕ ಬದ್ಧತೆಯೊಂದಿಗೆ ಹೋರಾಟ ಮುನ್ನಡೆಸಬೇಕಾದುದ್ದು ಅತ್ಯಗತ್ಯವೆಂದು ಚಿಂತಕ ಕೆ. ದೊರೈರಾಜು ಅವರು ಅಭಿಪ್ರಾಯಪಟ್ಟರು.
ಅವರು ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘ ಸಿಐಟಿಯು ನಗರದ ರಂಗತಾಲೀಮು ಕೇಂದ್ರದಲ್ಲಿ ಸಂಘಟಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್, ಬಾಬುಜಗಜೀವನರಾಮ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ವಿರೋಧಿಗಳ ಅರ್ಭಟವನ್ನು ಜನತೆ ಅರಿತು ಪಾಠಕಲಿಸಬೇಕಾಗಿದೆ ಎಂದರು. ಮಲಹೊರುವುದರಿಂದ ಸ್ವರ್ಗ ಸಿಗುತ್ತದೆ ಎಂದು ಪ್ರತಿಪಾದಿಸುತ್ತಿರುವ ರೋಗಗ್ರಸ್ಥ ಮನುವಾದಿಗಳ ಸಮಾಜ ತಿರಸ್ಕರಿಸಲೇಬೇಕಾಗಿದೆ ಎಂದರು.
ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣ್ದಾಸ್ ಅವರು ಮಾತನಾಡುತ್ತಾ ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಂ ಅವರು ದೇಶಕ್ಕಾಗಿ ಮಾಡಿದ ಸಾಧನೆ ಸ್ಮರಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಿದ್ಧಾಂತವಾದ ಸಂಘಟನೆ ಶಿಕ್ಷಣ ಮತ್ತು ಹೋರಾಟವನ್ನು ಮುಂದುವರಿಸಿಸಬೇಕಾಗಿದೆ ಎಂದ ಅವರು ಸಮಾನತೆಯ ಬದುಕಿಗಾಗಿ ಕನಸನ್ನು ನನಾಸಾಗಿಸಬೇಕಾದರೆ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ ಎಂದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಎಸ್.ಡಿ. ಪಾರ್ವತಮ್ಮ ಮಾತನಾಡಿ ಈ ಶತಮಾನದಲ್ಲಿ ದಲಿತರಿಗೆ ಬಹಿಷ್ಕಾರ ಹಾಕುವುದು ಜೀವಂತವಾಗಿ ಇರುವುದನ್ನು ತೊಲಗಿಸಲು ಎಲ್ಲರನ್ನೊಳಗೊಂಡು ಸಂಘಟನೆಯನ್ನು ಕಟ್ಟಿ ಧೈರ್ಯ ತುಂಬಬೇಕಾಗಿದೆ ಎಂದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಮಾತನಾಡಿದರು
ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಸಿ. ವೆಂಕಟೇಶ್, ಖಜಾಂಚಿ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ, ರಾಜ್ಯ ಉಪಾಧ್ಯಕ್ಷ ಚಂದ್ರಪ್ಪ, ತಿಪಟೂರು
ತಾಲೂಕಿನ ಪೌರಕಾರ್ಮಿಕರ ಸಂಘದ ಮುಖಂಡ ಶಿವಣ್ಣ, ಶಿರಾ ತಾಲೂಕಿನ ಜಗನ್ನಾಥ್, ತುಮಕೂರು ಪೌರಕಾರ್ಮಿಕ ಸಂಘಟನೆಯ ಉಪಾಧ್ಯಕ್ಷ ಸಂತೆಪೇಟೆ ವೆಂಕಟೇಶ್, ಕುಣಿಗಲಲ್ತಾಲೂಕಿನ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ತುಮಕೂರಿನ ಕಲಾವಿದ ಮೋಹನ್ ಅವರು ಕ್ರಾಂತಿಗೀತೆಗಳನ್ನು ಹಾಡಿದರು. ದೇವರಾಜು ಸ್ವಾಗತಿಸಿ, ವೆಂಕಟೇಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

