ಶಿವಕುಮಾರ್ರಿಂದ ಸಾರ್ವಜನಿಕರ ಆಸ್ತಿ ಲೂಟಿ
ಕ.ಪ್ರ.ವಾರ್ತೆ ಕುಣಿಗಲ್ ಏ.14
ಮಂತ್ರಿಯಾದವನು, ಸಾಮಾನ್ಯಜನತೆಯ, ಸಾರ್ವಜನಿಕರಿಗೆ ಸೇರಿದ ಸ್ವತ್ತಿನ ರಕ್ಷಕನಾಗಬೇಕೇ ಹೊರತು ಭಕ್ಷಕನಾಗಬಾರದು. ಆದರೆ ಡಿ.ಕೆ.ಶಿವಕುಮಾರ್ ಮಂತ್ರಿಯಾಗಿದ್ದಾಗ ತಮ್ಮ ಕುಟುಂಬದವರ ಹೆಸರಿನಲ್ಲಿ ಸಾರ್ವಜನಿಕರಿಗೆ ಸೇರಿದ ಆಸ್ತಿಯನ್ನು ಲೂಟಿಮಾಡಿ ಭಕ್ಷಕರಾಗಿದ್ದು ಮತ ಕೇಳುವ ನೈತಿಕಹಕ್ಕನ್ನು ಕಳೆದುಕೊಂಡಿದ್ದಾರೆಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ತಿಳಿಸಿದರು.
ಸೋಮವಾರ ಪಟ್ಟಣದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಅಭ್ಯರ್ಥಿ ರವಿಕೃಷ್ಣ ರೆಡ್ಡಿ ಪರ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿ, ಮಹಾತ್ಮಗಾಂಧಿ ಹೇಳಿದಂತೆ ಎಂದಿಗೆ ಈ ದೇಶದ ಸಾಮಾನ್ಯಜನತೆಯು ಪ್ರಜಾಪ್ರಭುತ್ವದ ವ್ಯವಸ್ಥೆ ಮೇಲೆ ನಂಬಿಕೆ, ವಿಶ್ವಾಸ ಕಳೆದುಕೊಳ್ಳುತ್ತಾರೊ ಅಂದಿಗೆ ಈ ದೇಶಕ್ಕೆ ಭವಿಷ್ಯವಿಲ್ಲ. ಸಾಮಾನ್ಯಜನತೆ ಪರವೆಂದು ಹೇಳಿ ಕೊಳ್ಳುತ್ತಾ ಅಧಿಕಾರಕ್ಕೆ ಬರುವವರು, ಸಾಮಾನ್ಯ ಜನತೆಗೆ ಸೇರಬೇಕಾದ ಸವಲತ್ತುಗಳನ್ನು ಭ್ರಷ್ಟಾಚಾರದ ಮೂಲಕ ಕೊಳ್ಳೆಹೊಡೆಯುತ್ತಾ, ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಾ, ಜನತೆಗೆ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತಿದ್ದು, ಹಲವು ಮಹಾನುಭಾವರ ತ್ಯಾಗ, ಬಲಿದಾನದಿಂದ ದೊರೆತ ಸ್ವರಾಜ್ಯದ ಸಂರಕ್ಷಣೆಗೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯಾವುದೇ ಪಕ್ಷ ಮುಂದಾಗದೆ, ಎಎಪಿ ಮಾತ್ರ ಮುಂದಾಗಿದ್ದರಿಂದ ತಾವು ಎಎಪಿಯನ್ನು ಬೆಂಬಲಿಸುತ್ತಿರುವುದಾಗಿ ತಿಳಿಸಿದರು.
ಈಗಾಗಲೆ ಬಳ್ಳಾರಿ ಗಣಿಹಗರಣದ ಕಿಂಗ್ಪಿನ್ಗಳು ಭ್ರಷ್ಟಾಚಾರ ಬಯಲೆಗೆಳೆದು ಬಳ್ಳಾರಿ ರಿಪಬ್ಲಿಕ್ ಕೊನೆಗೊಳಿಸಲಾಗಿದ್ದು,ಇದೇ ರೀತಿಯಲ್ಲಿ ಡಿ.ಕೆ. ಶಿವಕುಮಾರ್ ಕನಕಪುರ ರಿಪಬ್ಲಿಕ್ನ ಶೀಘ್ರದಲ್ಲೆ ಕೊನೆಗಾಣಲಿದೆ ಎಂದರು. ಇವರು ಮತ್ತು ಇವರ ಸಹೋದರ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಭ್ರಷ್ಟಾಚಾರದಲ್ಲಿ ಭಾಗಿ ಎಂದರು.
ವ್ಯವಹಾರ ಗೊತ್ತಿದೆ: ಎಎಪಿ ಅಭ್ಯರ್ಥಿ ರವಿಕೃಷ್ಣರೆಡ್ಡಿ ಮಾತನಾಡಿ, ಬಿಜೆಪಿ, ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಂತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಮತ್ತು ಅವರ ಸಹೋದರರು ಹೇಳಿಕೊಂಡಿರುವಂತೆ ತಾವು ಬಿಸಿನೆಸ್ಮನ್ಗಳಾಗಿದ್ದು, ವ್ಯವಹಾರ ಮಾಡುವುದು ತಮ್ಮ ಕಾಯಕ ಎಂದಿದ್ದಾರೆ. ಇವರ ವ್ಯವಹಾರ ಏನೆಂದು ಈಗಾಗಲೆ ಜನತೆಗೆ ಗೊತ್ತಾಗಿದೆ. ಸಾರ್ವಜನಿಕರಿಗೆ ಸೇರಿದ ಆಸ್ತಿ, ರಾಜ್ಯದ ಗ್ರಾನೈಟ್ ಮತ್ತು ಗಣಿ ಸಂಪತ್ತನ್ನು ಲೂಟಿ ಹೊಡೆಯುವ ಬಿಸಿನೆಸ್ ಆಗಿದ್ದು, ತಾವು ಮಾಡುವ ಅಕ್ರಮಗಳಿಂದ ರಕ್ಷಣೆ ಪಡೆಯಲು ಜನಪ್ರತಿನಿಧಿಗಳಾಗ ಬಯಸುತ್ತಾ
ಚುನಾವಣೆಗೆ ನಿಂತಿದ್ದಾರೆ. ಮತದಾರರು ಇಂತಹ ಭ್ರಷ್ಟರನ್ನು ತಿರಸ್ಕರಿಸಿ ಎಎಪಿ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು. ಪಕ್ಷದ ಪ್ರಮುಖರಾದ ಹನುಮಂತಗೌಡ, ಬಾಬು, ಪ್ರಕಾಶ್, ಸುನಿತಾ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

