ಅಂಬೇಡ್ಕರ್ ಜಯಂತಿ ಆಚರಣೆಗೆ ಅಸಡ್ಡೆ: ಕಾರ್ಯದರ್ಶಿಗೆ ಛೀಮಾರಿ
ಪಾವಗಡ: ಅಂಬೇಡ್ಕರ್ ಜಯಂತಿ ಆಚರಣೆ ಮಾಡುವಲ್ಲಿ ಅಸಡ್ಡೆ ತೋರಿದ್ದ ಗ್ರಾಪಂ ಕಾರ್ಯದರ್ಶಿಯೊಬ್ಬರನ್ನು ಛೀಮಾರಿ ಹಾಕಿ ಪ್ರತಿಭಟನೆ ನಡೆಸಿದ ಘಟನೆ ತಾ.ಬೂದಿಬೆಟ್ಟ ಗ್ರಾಮದಲ್ಲಿ ನಡೆದಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವನ್ನು ಎಲ್ಲಾ ಇಲಾಖೆಗಳಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಬೇಕು ಎಂದು ಸರ್ಕಾರದ ನಿಯಮವಿದ್ದರೂ ನಿಯಮ ಉಲ್ಲಂಘಿಸಿ ತಾಲೂಕಿನ ಬೂದಿಬಟ್ಟ ಗ್ರಾಪಂನಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಿದೇ ಗ್ರಾಪಂ ಬಾಗಿಲು ತೆರೆಯದೇ ಕಾರ್ಯದರ್ಶಿ ನಾಪತ್ತೆ ಆಗಿದ್ದರು. ಇದರಿಂದ ಆಕ್ರೋಶಗೊಂಡ ಬೂದಿಬೆಟ್ಟ ಗ್ರಾಪಂನ ದಲಿತರು ಮತ್ತು ಸಾರ್ವಜನಿಕರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ದಂಡೋರ ಅಧ್ಯಕ್ಷ ನಾಗೇಶ್ ಮಾತನಾಡಿ ಕಾರ್ಯದರ್ಶಿ ಮುತ್ತುರಾಜ್ ಎಂಬುವವರು ಜಯಂತಿಯನ್ನು ದಿಕ್ಕರಿಸುವ ಮೂಲಕ ಸಂವಿಧಾನ ಶಿಲ್ಪಿ ಮತ್ತು ಧೀಮಂತ ನಾಯಕ ಅಂಬೇಡ್ಕರ್ ಅವರನ್ನು ಅವಮಾನಪಡಿಸಿದ್ದು, ಇದು ಅವರಿಗೆ ಮಾಡಿದ ಅವಮಾನವಲ್ಲ, ದೇಶದ ಸ್ವಾಭಿಮಾನಿ ದಲಿತರಿಗೆ ಮಾಡಿದ ಅವಮಾನವೆಂದು ಆರೋಪಿಸಿದರು.
ಗ್ರಾಪಂ ಕಾರ್ಯದರ್ಶಿ ಮುತ್ತುರಾಜ್ ಅವರು ಇಲ್ಲಿನ ದಲಿತರನ್ನು ಕಡೆಗಾಣಿಸಿದ್ದು ಸರ್ಕಾರದಿಂದ ಸಿಗುವ ಗ್ರಾಪಂ ಸೌಲಭ್ಯಗಳು ಕಲ್ಪಿಸುವಲ್ಲಿ ದಲಿತರಿಗೆ ವಂಚಿಸುತ್ತಿದ್ದಾರೆ ಎಂದು ದೂರಿ ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ನಿರ್ಲಕ್ಷ್ಯ ಮತ್ತು ಕಾರ್ಯದರ್ಶಿಯ ವೈಖರಿಯ ಬಗ್ಗೆ ತಾಪಂ ಇಒ ತಿಪ್ಪೇಸ್ವಾಮಿ ಅವರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು.
ಸಮಸ್ಯೆಯನ್ನು ಅಲಿಸಿದ ತಾಪಂ ಇಒ ತಿಪ್ಪೇಸ್ವಾಮಿ, ಗ್ರಾಪಂ ಕಾರ್ಯದರ್ಶಿ ಮುತ್ತುರಾಜ್ ಅವರಿಗೆ ಛೀಮಾರಿ ಹಾಕಿ ನೊಟೀಸ್ ಜಾರಿ ಮಾಡಿದ್ದು ಇಒ ಆದೇಶದ ಮೇರೆಗೆ ಮಂಗಳವಾರ ಗ್ರಾಮದ ಗ್ರಾಪಂ ಬಳಿ ಆಗಮಿಸಿದ ಕಾರ್ಯದರ್ಶಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಿದರು.
ಟಿ.ಶ್ರೀನಿವಾಸ್, ಕೆ.ವೆಂಕಟೇಶ್, ನಾಗೇಶ್, ಜಿ.ಆರ್.ಲಿಂಗಣ್ಣ, ರಾಮಾಂಜಿನಪ್ಪ, ಹರಿಕೃಷ್ಣ, ಮಹೇಶ್, ಲೋಕೇಶ್ ಸೇರಿದಂತೆ ಗ್ರಾಮದ ಅನೇಕ ಮಂದಿ ದಲಿತರು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

