ಬೋರನಕಣಿಯಲ್ಲಿ 2 ಕಾಡಾನೆ ಪ್ರತ್ಯಕ್ಷ
ಹುಳಿಯಾರು: ಸಮೀಪದ ಬೋರನಕಣಿವೆ ಜಲಾಶಯದಲ್ಲಿ ಬುಧವಾರ ಮುಂಜಾನೆ ಎರಡು ಕಾಡಾನೆಗಳು ಕಾಣಿಸಿಕೊಂಡು ನಂತರ ಜಲಾಶಯದ ಪಕ್ಕದ ಗುಡ್ಡದಲ್ಲಿ ಠೀಕಾಣಿ ಹೂಡಿವೆ.
ಮುಂಜಾನೆ ಜಲಾಶಯದ ಹಿನ್ನಿರೀನ ಅಂಗಳದಲ್ಲಿ ಮಧ್ಯವಯಸ್ಸಿನ ಗಂಡಾನೆಗಳು ಕಾಣಿಸಿಕೊಂಡಿವೆ. ಆನೆಗಳನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಮುಗಿಬಿದ್ದಿದ್ದರಿಂದ ಗಾಬರಿಗೊಂಡು ಜಲಾಶಯದ ಪಕ್ಕದ ಗುಡ್ಡಕ್ಕೆ ಸಾಗಿವೆ ಹಾಗೂ ಗುಡ್ಡದ ಮೂಲಕ ಮುಂದಕ್ಕೆ ಹೋದ ಆನೆಗಳು ಪುನಃ ಸಂಜೆ ವೇಳೆಗೆ ವಾಪಸಾಗಿದ್ದು, ಈ ಆನೆಗಳು ಗುಬ್ಬಿ ಅರಣ್ಯಭಾಗದಿಂದ ಬಂದವಾಗಿದ್ದು, ಈಗ ಬೋರನಕಣಿವೆ ಗುಡ್ಡದಲ್ಲಿವೆ. ರಾತ್ರಿ ವೇಳೆಗೆ ಹಿಂದಿರುಗುವ ಸಂಭವ ಹೆಚ್ಚಾಗಿದೆ ಎಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಶಾಂತರಾಜಪ್ಪ ತಿಳಿಸಿದ್ದಾರೆ.
ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಗೋವಿಂದಪ್ಪ, ಬಸವರಾಜು ಹಾಗೂ ಇತರರು ಮೊಕ್ಕಾಂ ಹೂಡಿದ್ದು ಅವುಗಳ ಚಲನವಲನವನ್ನು ಗಮನಿಸುತ್ತಿದ್ದಾರೆ.
ಅಂಬೇಡ್ಕರ್ ಜಯಂತಿ
ತುಮಕೂರು: ಇಲ್ಲಿನ ಮಾದಿಗ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಮಾದಿಗ ವಿದ್ಯಾರ್ಥಿ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಪಾವಗಡ ನರೇಶ್ ಮಾತನಾಡಿ ದೀನದಲಿತರ ಉದ್ಧಾರಕ್ಕಾಗಿ ದೇಶ ವಿದೇಶಗಳಲ್ಲಿ ಪದವಿ ಪಡೆದು ದಲಿತರ ನೋವುಗಳಿಗೆ ಆಶಾಕಿರಣವಾದಂತಹ ಸಾಧನೆಯ ಈ ಮಹಾಪುರುಷನ ಜನ್ಮ ಜಯಂತಿ ಬಗ್ಗೆ ಹಬ್ಬದ ಸಡಗರದಂತೆ ಆಚರಿಸಲಾಗುವುದು ಎಂದರು. ಜಿಲ್ಲಾ ಕಾರ್ಯಾಧ್ಯಕ್ಷ ಡಿ.ಸಿ. ನರಸಿಂಹ ಮಾತನಾಡಿ ಅಂಬೇಡ್ಕರ್ ಸಮಾಜದ ಅಭಿವೃದ್ಧಿಗೆ ಶಿಕ್ಷಣವೊಂದೇ ಮಾರ್ಗ ಎಂಬುದು ಅವರ ನಿಲುವಾಗಿತ್ತು. ಅಂದು ಗಾಂಧೀಜಿಯವರು ಅಸ್ಪೃಶ್ಯರನ್ನು ಹರಿಜನರು ಎಂದು ಕರೆದರೆ ಅದನ್ನು ಬಾಬಾ ಸಾಹೇಬರು ಒಪ್ಪಿರಲಿಲ್ಲ. ಅಸ್ಪೃಶ್ಯರನ್ನು ಹರಿಜನ ಎನ್ನಬೇಡಿ. ದಲಿತರೆಂದೇ ಸಂಭೋದಿಸಿ ಎಂದಿದ್ದರು. ಹಾಗೂ ದಲಿತರ ಉದ್ಧಾರಕ್ಕಾಗಿ ಹಗಲಿರುಳು ಎನ್ನದೇ ವಿದ್ಯಾಭ್ಯಾಸ ಮಾಡಿ ದಲಿತರ ಏಳಿಗೆಗೆ ಹೋರಾಡಿದರು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

