ಶೆಟ್ಟೀಕೆರೆ ಏರಿ ಯಮಪುರಿಗೆ ದಾರಿ!
ಚಿಕ್ಕನಾಯಕನಹಳ್ಳಿ: ಹೋಬಳಿ ಕೇಂದ್ರವಾದ ಶೆಟ್ಟೀಕೆರೆ- ಅಣೇಕಟ್ಟೆಗೆ ಸಂಪರ್ಕ ಕಲ್ಪಿಸುವ ಶೆಟ್ಟೀಕೆರೆ ಕೆರೆ ಏರಿಯ ಮೇಲಿನ ಕಿರಿದಾದ ಮುಖ್ಯ ರಸ್ತೆ ಸರ್ಕಾರದ ನಿರ್ಲಕ್ಷದಿಂದಾಗಿ ಸಾರ್ವಜನಿಕರಿಗೆ ಇದ್ದು ಇಲ್ಲದಂತಾಗಿದೆ.
ಸುಮಾರು ನಾಲ್ಕು ಸಾವಿರ ಜನಸಂಖ್ಯೆಯುಳ್ಳ ಶೆಟ್ಟೀಕೆರೆ, ತಾಲೂಕಿನ ಹೋಬಳಿ ಕೇಂದ್ರಗಳಲ್ಲೊಂದಾಗಿರುವುದಲ್ಲದೆ, ಸಾಂಸ್ಕೃತಿಕವಾಗಿ ಕಾರಹುಣ್ಣಿಮೆ ಹೆಸರುವಾಸಿಯಾಗಿದೆ. ದಕ್ಷಿಣ ಕರ್ನಾಟಕದ ಭಾಗದಲ್ಲಿ ಗ್ರಾಮೀಣ ಭಾಗದ ಜನರು ತಮ್ಮ ಗ್ರಾಮಗಳಲ್ಲಿ ಕಾರಹುಣ್ಣಿಮೆ ಮಾಡುವುದು ಶೆಟ್ಟೀಕೆರೆ ಹಬ್ಬಮುಗಿದನಂತರವೇ.
ಇಂತಹ ಇತಿಹಾಸವುಳ್ಳ ಹೋಬಳಿಕೇಂದ್ರದಿಂದ ವಾಣಿಜ್ಯ ನಗರಿಯಾದ ತಿಪಟೂರಿಗೆ ಮತ್ತು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಕ್ಕೆ ಸಂಪರ್ಕ ಕಲ್ಪಿಸುವ ಸರ್ವವಿಧದಲ್ಲೂ ಅನುಕೂಲಕರವಾದ ರಸ್ತೆಯಾಗಿದೆ. ಶೆಟ್ಟೀಕೆರೆಯಿಂದ ಚಿ.ನಾ.ಹಳ್ಳಿ ಮೂಲಕ ಅಣೇಕಟ್ಟೆಗೆ ತಲುಪಲು16 ಕಿ.ಮೀ.ರಸ್ತೆಯನ್ನು ಬಳಸಬೇಕು. ಆದರೆ ಶೆಟ್ಟೀಕೆರೆಯಿಂದ-ಅಣೇಕಟ್ಟೆಗೆ ಕೇವಲ 4 ಕಿ.ಮೀ.ರಸ್ತೆ ನಿರ್ಮಿಸಿದರೆ ಸಮಯ ಹಾಗೂ ಹಣ ಎರಡು ಉಳಿತಾಯವಾಗುತ್ತದೆ. ಸದರಿ ಮಾರ್ಗದಲ್ಲಿ ಗೌಡನಹಳ್ಳಿ, ಅಣೇಪಾಳ್ಯ, ತೋಟೇಗೌಡನ ಪಾಳ್ಯ, ಕೋಡಿಗುಡ್ಲು, ಹೆಸರಳ್ಳಿ, ಅಣೇಕಟ್ಟೆ ಗ್ರಾಮಗಳ ಜನರಿಗೆ ವರದಾನವಾಗಲಿದೆ. ಇದನ್ನು ಜೋಡಿಸಬಹುದು. ಆದ್ದರಿಂದ ಪ್ರಸ್ತುತ ನೂರಾರು ಜನ ಪ್ರಯಾಣಿಕರು ಈ ಮಾರ್ಗದಲ್ಲೇ ಸಂಚರಿಸುತ್ತಿದ್ದಾರೆ. ಸಮಯದ ಉಳಿತಾಯ ಹಾಗೂ ಕಡಿಮೆ ಅಂತರವಾದ್ದದರಿಂದ ಜನ ಹೆಚ್ಚಾಗಿ ಈ ಮಾರ್ಗವನ್ನು ಬಳಸುತ್ತಿದ್ದಾರೆ. ಆದರೆ ಕೆರೆಯ ಏರಿಯ ಮೇಲೆ ಪ್ರಯಾಣಿಸುವಾಗ ಬಡಪಾಯಿ ಪ್ರಯಾಣಿಕರು ತಮ್ಮ ಜೀವವನ್ನು ಎಡಗೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕಾಗಿದೆ. ಏರಿಯ ಮೇಲಿನ ರಸ್ತೆಯ ಒಂದು ವಾಹನ ಸಂಚರಿಸುವಾಗ ಮತ್ತೊಂದು ವಾಹನ ಎದುರಿಗೆ ಬಂದರೆ ಪಕ್ಕಕ್ಕೆ ಸರಿದು ಜಾಗಮಾಡಿಕೊಡಲು ಸ್ಥಳಾವಕಾಶವಿಲ್ಲ. ಕೇವಲ 5-6 ಅಡಿ ಅಗಲವಾದ ಏರಿಯ ಮೇಲಿನ ರಸ್ತೆಯಲ್ಲಿ ವಾಹನ ಚಲಾಯಿಸುವುದು ಒಂದು ಸವಾಲಾಗಿದೆ.
ನೀರಿನ ಬವಣೆ ನೀಗಿಸಿ
ಕುಣಿಗಲ್ ತಾಲೂಕಿನ ಮಡಿಕೆಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಕೊರಮರಹಟ್ಟಿ ಕಾಲೋನಿಯಲ್ಲಿ 2011-12ನೇ ಸಾಲಿನಲ್ಲಿ ಒಂದೂವರೆ ಲಕ್ಷ ರು.ವೆಚ್ಚದಲ್ಲಿ ಬರ ಪರಿಹಾರ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಸಲಾಗಿತ್ತು.ಉತ್ತಮವಾಗಿ ನೀರು ದೊರೆತಿದ್ದು, ಸಂಬಂಧಪಟ್ಟಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಳವೆಬಾವಿಗೆ ಮೋಟಾರ ಅಳವಡಿಸದೆ, ಬಾವಿಯಲ್ಲಿ ನೀರಿದರೂ ಗ್ರಾಮಸ್ಥರ ಪಾಲಿಗೆ ಇಲ್ಲದಂತಾಗಿದೆ.
ಈಗಾಗಲೆ ಕೊರಮರಹಟ್ಟಿ ಸೇರಿದಂತೆ ರಾಮೇಗೌಡನಪಾಳ್ಯಎಲೆತಿಮ್ಮಯ್ಯನಪಾಳ್ಯ, ಚಿಕ್ಕೇಗೌಡನಪಾಳ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರಿಗೆ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಎಚ್ಚೆತ್ತು, ಈಗಾಗಲೆ ಕೊರೆಸಲಾಗಿರುವ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯ ಇರುವ ಕೊಳವೆಬಾವಿಗೆ ಮೋಟಾರ ಅಳವಡಿಸಿ, ನಾಲ್ಕಾರು ಗ್ರಾಮಗಳ ಜನತೆಯ ಕುಡಿಯುವ ನೀರಿನ ಬವಣೆ ನೀಗಿಸುವಂತೆ ಸಾರ್ವಜನಿಕರ ಆಗ್ರಹ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

