ತುಮಕೂರು

ಬಿತ್ತನೆ ಬೀಜ: ಸಬ್ಸಿಡಿಗೆ ಆಗ್ರಹ

Published On :

ಹುಳಿಯಾರು: ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ನೀಡಲಾಗಿರುವ ಬಿತ್ತನೆ ಬೀಜಕ್ಕೆ ರಿಯಾಯಿತಿ ದರದಲ್ಲಿ ಪೂರೈಸುವಂತೆ  ತಾಲೂಕು ಕೃಷಿಕ ಸಮಾಜ ಹಾಗೂ ರೈತಸಂಘದ ಪದಾಧಿಕಾರಿಗಳು  ಒತ್ತಾಯಿಸಿದ್ದಾರೆ.
ತಾಲೂಕಿನ ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು ರೈತರು ಪೂರ್ವ ಮುಂಗಾರು ಹಂಗಾಮು ಬಿತ್ತನೆಗೆ ಮುಂದಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.  ಸದ್ಯ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಿಗೆ ಹೆಸರು, ಅಲಸಂದೆ ಹಾಗೂ ತೊಗರಿ ಮತ್ತಿತರ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಲಾಗಿದ್ದು ರೈತಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ಎಂದಿನ ರಿಯಾಯ್ತಿ ದರದ ಬದಲು ಪೂರ್ಣ ಪ್ರಮಾಣದ ದರಕ್ಕೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರದಿಂದ  ಸಬ್ಸಿಡಿ ಸದ್ಯಕ್ಕೆ ಘೋಷಣೆಯಾಗಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಆದೇಶ ಬರುವ ನಿರೀಕ್ಷೆಯಿದೆ. ಈಗ  5 ಕೆಜಿಯ ಚೀಲಕ್ಕೆ 450 ರು. ನಂತೆ ಪೂರಾ ಹಣ ನೀಡಿ ಕೊಂಡುಕೊಂಡಲ್ಲಿ ರಿಯಾಯಿತಿ ಬಂದ ಮೇಲೆ ರಸೀದಿ ತೋರಿಸಿದಲ್ಲಿ ಹಣ ಹಿಂದಿರುಗಿಸುವುದಾಗಿ ರೈತ ಸಂಪರ್ಕಕೇಂದ್ರದ ತಿಪ್ಪೇಸ್ವಾಮಿ ತಿಳಿಸುತ್ತಾರೆ. ಈಗಾಗಲೇ ಕಳೆದ ನಾಲ್ಕೈದು ವರ್ಷಗಳಿಂದ ತೀವ್ರ ಬರಗಾಲದಿಂದ  ರೈತರಲ್ಲಿ ಬಿತ್ತನೆ ಬೀಜಗಳಿಲ್ಲದೆ ಇಲಾಖೆ ನೀಡುವ ರಿಯಾಯಿತಿ ದರದ ಬಿತ್ತನೆ ಬೀಜಗಳನ್ನೇ ಆಶ್ರಯಿಸಬೇಕಾಗಿದೆ. ಪೂರಾ ಹಣ ನೀಡಿ ಕೊಂಡ ಬೀಜಕ್ಕೆ  ರಿಯಾಯಿತಿ ಹಣ ಹಿಂಪಡೆಯಲು ರೈತರು ಕಚೇರಿಗಳಿಗೆ ಕೆಲಸ ಬಿಟ್ಟು ಅಲೆಯುಂತಾಗುತ್ತದೆ. ಕೂಡಲೇ ಬಿತ್ತನೆ ಬೀಜಗಳಿಗೆ ರಿಯಾಯಿತಿ ದರದಲ್ಲೆ ಪೂರೈಸುವಂತೆ ರಾಜ್ಯ ರೈತಸಂಘದ ಸಂಚಾಲಕ ಕೆಂಕೆರೆ ಸತೀಶ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಲ್. ನಟರಾಜು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.