ಇ-ಸ್ವತ್ತು ತಾಂತ್ರಿಕ ತೊಂದರೆ
ಡಿ.ಆರ್. ನರೇಂದ್ರಬಾಬು
ಕ.ಪ್ರ.ವಾರ್ತೆ ಹುಳಿಯಾರು ಏ.25
ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಈ ಸ್ವತ್ತುವಿನ ಮೂಲಕ ನೀಡಬೇಕಾದ ಗಣಕೀಕೃತ ದಾಖಲೆಯಾದ 9 ಹಾಗೂ 11
ನಮೂನೆಯನ್ನು ತಾಂತ್ರಿಕ ತೊಂದರೆಯಿಂದ ನೀಡಲಾಗುತ್ತಿಲ್ಲ.
ಇದರಿಂದಾಗಿ ಆಸ್ತಿ ಮಾರಾಟ ನೋಂದಣಿಗೆ ತೊಡಕುಂಟಾಗಿದೆ.
ಗ್ರಾಪಂ ವ್ಯಾಪ್ತಿಯಲ್ಲಿನ ಆಸ್ತಿ ನೋಂದಣಿಗೆ ಸರ್ಕಾರಿ ಆದೇಶದಂತೆ ಇ-ಸ್ವತ್ತು ತಂತ್ರಾಂಶ ದಾಖಲೆಗಳನ್ನು ಆನ್ಲೈನ್ ಮೂಲಕ ವಿತರಿಸುವುದು ಕಡ್ಡಾಯವಾಗಿದ್ದು, ಸದರಿ ದಾಖಲೆಗಳು ತಾಲೂಕಿನ ಯಾವುದೇ
ಗ್ರಾಪಂಗಳಲ್ಲಿ ಲಭ್ಯವಾಗದ ಕಾರಣ ಕಂದಾಯ ಭೂಮಿ ಹೊರತು ಪಡಿಸಿ, ಇನ್ನಾವುದೇ ಆಸ್ತಿ ನೋಂದಣಿ ಸಂಪೂರ್ಣ ಸ್ಥಗಿತಗೊಂಡಿದ್ದು, ಆಸ್ತಿ
ನೋಂದಣಿಗೆ ಪರದಾಡುವಂತಾಗಿದೆ. ಇದುವರೆಗೂ ಆಸ್ತಿ ಹಕ್ಕುಪತ್ರ, ಕಟ್ಟಡ ಮತ್ತು ಜಾಗದ ಖರೀದಿ ದಾಖಲೆಗಳನ್ನು ಅಯಾ ಪಂಚಾಯ್ತಿಗಳಲ್ಲಿ ಕೈಬರಹದ ದಾಖಲೆಗಳ ಮೂಲಕ ನೀಡುತ್ತಿದ್ದರೂ, ಅದೇ ದಾಖಲೆಗಳ ಆಧಾರದಲ್ಲಿ ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ ನೋಂದಣಿಯಾಗುತ್ತಿತ್ತು. ಆದರೆ, ಕಳೆದ ಆ. 28, 2013ರ ಸರ್ಕಾರಿ ಸುತ್ತೋಲೆಯಲ್ಲಿ ಕೈ ಬರಹದ ಬದಲಾಗಿ ಇ-ಸ್ವತ್ತು ತಂತ್ರಾಂಶದಿಂದ ಗಣಕೀಕೃತ ದಾಖಲೆಗಳನ್ನು ನೀಡಬೇಕೆಂಬ ನಿಯಮ ಜಾರಿ ಮಾಡಿ ಆದೇಶ ಹೊರಡಿಸಿದ್ದು, ನೂತನ ನಿಯಮದ ಪ್ರಕಾರ ಕೈ ಬರಹದ ಹಾಗೂ ಹಳೆ ಮಾದರಿ ನಮೂನೆ 9 ಹಾಗೂ 11 ರದ್ಧುಗೊಂಡಿದ್ದು, ಆನ್ಲೈನ್ಲ್ಲಿ ವಿತರಿಸುವ ನಮೂನೆಗಳು ನೋಂದಣಿಗೆ ಕಡ್ಡಾಯವಾಗಿರುವುದೇ ಸಮಸ್ಯೆ ಮೂಲವಾಗಿದೆ.
ಈ ಸಂಬಂಧ ಸಾರ್ವಜನಿಕರು ಸಿಬ್ಬಂದಿಯನ್ನು ಪ್ರಶ್ನಿಸಿದರೆ, ಪಿಡಿಒ
ಕಡೆ ಕೈ ತೋರುತ್ತಾರೆ. ಪಿಡಿಒ ತಾಲೂಕು ಇಒ ಕಡೆ ಬೊಟ್ಟು ಮಾಡಿ ಜಾರಿಕೊಳ್ಳುತ್ತಾರೆ. ತಾಲೂಕು ಪಂಚಾಯ್ತಿ ಅಧ್ಯಕ್ಷರು ಈ ಬಗ್ಗೆ ಆಸಹಾಯಕತೆ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಕಚೇರಿ ವಿಚಾರಿಸುವಂತೆ ತಿಳಿಸುತ್ತಾರೆ.
ದಾಖಲೆಬೇಕೆಂದು ಒತ್ತಡ ಮಾಡಿದವರಿಗೆ ಬೇಕಾದರೆ ಕೈ ಬರಹದ ದಾಖಲೆ ನೀಡುತ್ತರಾದರೂ, ಕೈ ಬರಹ ದಾಖಲೆಗಳನ್ನು ಉಪ ನೋಂದಣಿ ಕಚೇರಿಯಲ್ಲಿ ಮಾನ್ಯ ಮಾಡದ ಕಾರಣ ದಾಖಲೆಗಳಿಗೆ ಬೆಲೆಯಿಲ್ಲದಂತಾಗಿದೆ.
ಇನ್ನು ಮಂಇುದಾದರೂ ಸಂಬಂಧ ಇಲಾಖೆಯ ಉನ್ನತ ಅಧಿಕಾರಿಗಳು ಪಂಚಾಯ್ತಿಯಲ್ಲಿನ ಸಮಸ್ಯೆ ನಿವಾರಿಸಿ ,ಗಣಕೀಕೃತ ದಾಖಲೆ ಕೊಡುವ
ವ್ಯವಸ್ಥೆ ಮಾಡಬೇಕು, ಇಲ್ಲವಾದಲ್ಲಿ ಮುಂಚಿನಹಾಗೆ ಕೈಬರಹದ ದಾಖಲೆಗಳನ್ನು ಸ್ವೀಕರಿಸಿ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸಿಕೊಡಬೇಕೇಂದು ಜನತೆ ಒತ್ತಾಸೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

