ತುರುವೇಕೆರೆಯಲ್ಲಿ ಭಾರಿ ಮಳೆ, ಗಾಳಿ
ತುರುವೇಕೆರೆ: ಪಟ್ಟಣದಲ್ಲಿ ಶನಿವಾರ ಸಾಯಂಕಾಲ ಕೆಲಕಾಲ ಬಂದ ಮಳೆ ಹಾಗೂ ಬಿರುಗಾಳಿಗೆ ಪಟ್ಟಣ ಸಂಪೂರ್ಣ ತತ್ತರ ಗೊಂಡಿದೆ.
ದಬ್ಬೇಘಟ್ಟ ರಸ್ತೆಯಲ್ಲಿ ಹಲವಾರು ಮರಗಳು ಧರೆಗುಳಿದವೆ. ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಉದುರಿಹೋಗಿ ವಿದ್ಯುತ್ ವ್ಯತ್ಯಯವಾಗಿದೆ. ಕೇವಲ 20 ನಿಮಿಷಗಳ ಕಾಲ ಬಂದ ಭಾರಿ ಮಳೆಗೆ ದಾರಿ ಬದಿಯ ಮರಗಳು ಉರುಳಿವೆ. ದಬ್ಬೇಘಟ್ಟ ರಸ್ತೆಯ ಮಾಂಸದ ಅಂಗಡಿ ಮುಂದೆ ಇದ್ದ ಭಾರಿ ಮರವೊಂದು ಉರುಳಿದ ಪರಿಣಾಮ ಮರದ ಕೆಳಗೆ ನಿಲ್ಲಿಸಲಾಗಿದ್ದ 2 ದ್ವಿಚಕ್ರ ವಾಹನ, 1 ಆಟೋ, 1 ಟ್ರ್ಯಾಕ್ಟರ್ ಜಖಂ ಗೊಂಡಿದೆ. ಅಲ್ಲದೇ ಮನೆಗೂ ಕೂಡ ಹಾನಿಯಾಗಿದೆ. ಅಯ್ಯಪ್ಪ ಸ್ವಾಮಿ ಕ್ಯಾಂಟೀನ್‌ನ ಮೇಲ್ಛಾವಣಿ, ಹಿಂಬದಿಯಲ್ಲಿದ್ದ ಗೋಡೌನ್‌ನ ಮೇಲ್ಛಾವಣಿ ಹಾರಿಹೋಗಿವೆ. ಸರಸ್ವತಿಪುರಂ, ರಾಘವೇಂದ್ರ ನಗರದ ಕೆಲವು ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿದೆ. ಸರಸ್ವತಿ ಪುರಂನ ಭಾಗ್ಯಮ್ಮ ಎಂಬುವವರ ಮನೆಯ ಮಾಳಿಗೆ ಹಾರಿಹೋಗಿದ್ದು ಭಾಗ್ಯಮ್ಮ ಅವರಿಗೆ ಬಡಿದ ಪರಿಣಾಮ ತೀವ್ರಗಾಯವಾಗಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ. ದಬ್ಬೇಘಟ್ಟ ರಸ್ತೆಯ ಉದ್ದಕ್ಕೂ ಮರಗಳು ಬಿದ್ದಿರುವ ಪರಿಣಾಮ ಬಸ್ ಸಂಚಾರ ನಿಂತು ಹೋಗಿದೆ. ವಿದ್ಯುತ್ ಕಂಬಗಳು ಉದುರಿ ಹೋಗಿರುವ ಕಾರಣ ಪಟ್ಟಣದಲ್ಲಿ ಸಂಪೂರ್ಣ ಕತ್ತಲೆಯಲ್ಲಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

