ನನ್ನ ಧೋರಣೆಯನ್ನೇ ಆಶ್ರಮ ಬದಲಿಸಿತು
ಕ.ಪ್ರ. ವಾರ್ತೆ,ತುಮಕೂರು,ಏ.26
ತುಮಕೂರಿನ ರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ವೀರೇಶಾನಂದರು, ನನಗೆ ಬದುಕಿನ ಪಾಠವನ್ನು ಕಲಿಸಿದ್ದಾರಲ್ಲದೆ ನಾನು ನನ್ನ ಧೋರಣೆ ಬದಲಾಯಿಸಿಕೊಳ್ಳುವಲ್ಲಿ ಪ್ರೇರೇಪಿಸಿದ್ದಾರೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
ಅವರು ತುಮಕೂರು ರಾಮಕೃಷ್ಣ ಆಶ್ರಮದ ಮಾರ್ಗದರ್ಶನದಲ್ಲಿ ಕನಕಪುರ ಸಮೀಪದ ತುಂಗಣಿ ಗ್ರಾಮದ ಶ್ರೀ ಚಿಕ್ಕಮ್ಮದೇವಿ ದೇವಾಲಯದಲ್ಲಿ ನೆರವೇರಿದ ಜೀವಂತ ದುರ್ಗಾ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಲ್ಲಿಯವರೆಗೆ ಬಸವಣ್ಣನ ಕಲ್ಯಾಣದಲ್ಲಿ ಸ್ತ್ರೀಯರನ್ನು ಗೌರವಿಸುವ ಪರಿಪಾಠದ ಬಗ್ಗೆ ಕೇಳಿದ್ದೆವು. ಆದರೆ ತುಮಕೂರಿನ ರಾಮಕೃಷ್ಣ ಆಶ್ರಮವು ಜೀವಂತ ದುರ್ಗಾ ಪೂಜಾ ಕಾರ್ಯಕ್ರಮದಲ್ಲಿ ದೀನದಲಿತ ಹಾಗೂ ಅಶಕ್ತ ತಾಯಂದಿರನ್ನು ಸಾಕ್ಷಾತ್ ದುರ್ಗಾ ಮಾತೆ ಎಂದೇ ವೇದೋಕ್ತವಾಗಿ ಪೂಜಿಸಿ ಅವರನ್ನು ಅನ್ನದಾನ, ವಸ್ತ್ರದಾನ ಹಾಗು ಧಾನ್ಯದಾನಗಳಿಂದ ಸತ್ಕರಿಸಿದ ವಿಧಾನವು ಮತ್ತಷ್ಟು ಭಿನ್ನವೂ, ಉಪಯುಕ್ತವೂ ಹಾಗೂದೇಶಕ್ಕೆ ಹಿತಕಾರಿಯಾಗಿರುವುದನ್ನು ಪ್ರತ್ಯಕ್ಷಕಂಡು ಆನಂದಿಸಿದ್ದೇನೆ ಎಂದರು.
ಪ್ರೇರೇಪಣೆ: ರಾಮಕೃಷ್ಣ ಆಶ್ರಮದ ಈ ಸೇವಾಕಾರ್ಯ ಇತರ ಸ್ವಾಮೀಜಿಗಳಿಗೂ ಮಾದರಿಯಾಗಬೇಕು. ಇಂತಹ ಕಾರ್ಯಕ್ರಮದ ಮೂಲಕ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ವೀರೇಶಾನಂದರು ನಮಗೆ ಬದುಕಿನ ಪಾಠವನ್ನು ಕಲಿಸಿದ್ದಾರಲ್ಲದೆ ನಾನು ನನ್ನ ಧೋರಣೆಯನ್ನೇ ಬದಲಾಯಿಸಿಕೊಳ್ಳುವಲ್ಲಿ ಪ್ರೇರೇಪಿಸಿದ್ದಾರೆ ಎಂದರು.
ಇಂತಹ ವಿಶಿಷ್ಟವೂ ಹಾಗು ಅತ್ಯುಪಯುಕ್ತವು ಆದ ವಿನೂತನ ಪ್ರಯೋಗನ್ನು ಪ್ರತ್ಯಕ್ಷವಾಗಿ ಕಂಡು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆನಂದಿಸಿದ್ದುದನ್ನು ಜೀವನದ ಭಾಗ್ಯವೆಂದು ಕೃತಜ್ಞತೆಯಿಂದ ಹೇಳಬಯಸುತ್ತೇನೆ ಎಂದರು.
ನನ್ನ ಜೀವನದಲ್ಲಿ ನಾನೆಂದೂ ಕಂಡರಿಯದ ಮತ್ತು ಕೇಳರಿಯದ ಇಂತಹ ಕಾರ್ಯವು ನನ್ನ ಹೃದಯವನ್ನು ತಟ್ಟಿದೆ ಎಂದು ಅಭಿಪ್ರಾಯಪಟ್ಟರು.
ತುಂಗಣಿ ಗ್ರಾಮದ ಸುಮಾರು 36 ದೀನ ದಲಿತ ಅಶಕ್ತ ತಾಯಂದಿರಿಗೆ ಜೀವಂತ ದುರ್ಗಾಪೂಜೆ ನೆರವೇರಿಸಿ ಮಾತನಾಡಿದ ಆಶ್ರಮದಮುಖ್ಯಸ್ಥರಾದ ಸ್ವಾಮಿ ವೀರೇಶಾನಂದರು, ಸಮಾಜದಲ್ಲಿ ಸರ್ವ ರೀತಿಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಮೇಲೆತ್ತಲು ಸ್ವಾಮಿ ವಿವೇಕಾನಂದರು ಆಶಿಸಿ ಸೇವೆಯನ್ನು ಜೀವನ ವಿಧಾನವಾಗಿಸಿಕೊಳ್ಳಬೇಕೆಂದು ಮಾರ್ಗದರ್ಶನವಿತ್ತರು. ಸಹಮಾನವರ ಆಂತರ್ಯದಲ್ಲಿನ ದಿವ್ಯತೆ ಗುರುತಿಸಿ ಗೌರವಿಸುವುದೇ ಆಧ್ಯಾತ್ಮ ಎಂದರು.
ಸಾರಿಗೆ ಇಲಾಖೆಯ ಕಾರ್ಯದರ್ಶಿ ಶ್ರೀನಿವಾಸಾಚಾರಿ, ವಾಣಿಜ್ಯ ಇಲಾಖೆಯ ಆಯುಕ್ತ ದೇವರಾಜು ಮುಂತಾದವರಿದ್ದರು. ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

