ಬಾಬಾ ರಾಮದೇವ್ ವಿರುದ್ಧ ಆಕ್ರೋಶ
ಕ.ಪ್ರ.ವಾರ್ತೆ ಕುಣಿಗಲ್ ಏ.30
ಬಾಬಾ ರಾಮದೇವ್ ನೀಡಿರುವ ದಲಿತ ವಿರೋಧಿ ಹೇಳಿಕೆ ಖಂಡಿಸಿ, ತಾಲೂಕಿನ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ದಲಿತ ಸಂಘಟನೆಗಳ ಒಕ್ಕೂಟ ವೇದಿಕೆಯಡಿ ಪ್ರತಿಭಟನೆ ನಡೆಸಿ, ರಾಮ್ದೇವ್ ಪ್ರತಿಕೃತಿ ದಹಿಸಿ, ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ಪೊಲೀಸರಿಗೆ ದೂರು ನೀಡಿದರು.
ಬುಧವಾರ ಪಟ್ಟಣದ ಶಿಕ್ಷಕರ ಭವನದ ಅವರಣದಲ್ಲಿ ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ, ಮುಖಂಡರಾದ ದಲಿತನಾರಾಯಣ, ಶಿವಶಂಕರ, ಎಸ್. ಆರ್. ಚಿಕ್ಕಣ್ಣ, ವೆಂಕಟೇಶ್, ವರದರಾಜು ನೇತೃತ್ವದಲ್ಲಿ ಸಂಘಟಿತ ರಾದ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹುಚ್ಚಮಾಸ್ತಿಗೌಡ ವೃತ್ತದವರೆಗೂ ಆಗಮಿಸಿ, ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆತಡೆ ನಡೆಸಿ, ಬಾಬಾರಾಮದೇವ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ, ಸಾಮೀಜಿಗಳೆಂದರೆ ಎಲ್ಲಾ ವರ್ಗದ ಜನತೆಯಲ್ಲಿ, ಎಲ್ಲಾ ಜಾತಿಯ ಜನತೆಯಲ್ಲಿ ಸಮಾನ ಮನೋಭಾವ ಹೊಂದಿದವರಾಗಿರಬೇಕಿದೆ.
ಕಾವಿ ಧರಿಸಿ, ಸಮಾಜಕ್ಕೆ ಉತ್ತಮ ಮಾರ್ಗದರ್ಶಕರಾಗಬೇಕಿದ್ದ ರಾಮದೇವ್ ಅವರಂತ ವ್ಯಕ್ತಿಗಳು,ಕೇವಲ ಒಂದು ರಾಜಕೀಯ ಪಕ್ಷದ ಪರಪ್ರಚಾರಕ್ಕಾಗಿ ದಲಿತ ಜನಾಂಗದ ಬಗ್ಗೆ ಅದರಲ್ಲೂ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದಲಿತರ ಮನೆಯಲ್ಲಿ ಹನಿಮೂನ್ ಮಾಡಲು ಹೋಗುತ್ತಾರೆಂಬ ಬೇಜವಾಬ್ದಾರಿ ಹೇಳಿಕೆ ದಲಿತರ ಮನೆಯ ಹೆಣ್ಣುಮಕ್ಕಳ ಅವಹೇಳನ ಮಾಡಿದಂತಾಗಿದೆ. ಇಂತಹ ವ್ಯಕ್ತಿಗಳಿಂದ ಸಮಾಜದಲ್ಲಿ ವರ್ಗ, ವರ್ಗಗಳ ನಡುವೆ ಕಂದಕ ಉಂಟುಮಾಡಿ ಸಮಾಜದ ಸಾಮರಸ್ಯ ಕದಡುವಂತಾಗುವ ಸಾಧ್ಯತೆದಟ್ಟವಾಗಿರುವ ಕಾರಣ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕೂಡಲೆ ಕಠಿಣಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಖಂಡ ಶಿವಶಂಕರ, ರಾಮದೇವ್ ಅವರನ್ನು ಕೂಡಲೇ ದೇಶದಿಂದಲೇ ಗಡಿಪಾರು ಮಾಡುವಂತೆ ಒತ್ತಾಯಿಸಿದರು. ತಾಪಂ ಮಾಜಿ ಅಧ್ಯಕ್ಷೆ ಲೀಲಾವತಿ, ಎಸ್.ಆರ್. ಚಿಕ್ಕಣ್ಣ, ಮುಖಂಡ ವೆಂಕಟಸುಬ್ಬಯ್ಯ,ನಾಗಣ್ಣ ಇತರರು ಮಾತನಾಡಿದರು. ತಹಸೀಲ್ದಾರ್ ಶಂಭುಲಿಂಗಯ್ಯನವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಶಂಕರ್, ನರಸಿಂಹಮೂರ್ತಿ, ರಾಮಚಂದ್ರ, ಈರಣ್ಣ, ಧನರಾಜ್, ಭಕ್ತರಹಳ್ಳಿ ಕುಮಾರ್, ಗಂಗಾಧರ, ಕುಮಾರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಜಿಪಂ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀನಾರಾಯಣ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

