ತುಮಕೂರು

ಗೋವಾ ಕನ್ನಡಿಗರ ನೆರವಿಗೆ ಧಾವಿಸಿದ ಜಿಲ್ಲಾ ಯುವ ಕಾಂಗ್ರೆಸ್

Published On :

ತುಮಕೂರು: ಗೋವಾ ಸರ್ಕಾರದಿಂದ ತೊಂದರೆಗೀಡಾಗಿ ನೆಲೆ ಕಳೆದುಕೊಂಡಿರುವ ಗೋವಾ ಕನ್ನಡಿಗರನ್ನು ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಭೇಟಿ ಮಾಡಿ, ಅಕ್ಕಿ, ಬೇಳೆ, ಎಣ್ಣೆ-ಕಾಳುಗಳು, ಹೊದಿಕೆ ಹಾಗೂ ಇನ್ನಿತರೆ ಆಹಾರ ಪದಾರ್ಥಗಳನ್ನು ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿತು.
ಕಳೆದ ಸುಮಾರು 40-50 ವರ್ಷಗಳಿಂದ ಗೋವಾ ರಾಜ್ಯದಲ್ಲಿ ಕನ್ನಡಿಗರು ವಿವಿಧ ಉದ್ಯೋಗಗಳಲ್ಲಿ ತೊಡಗಿ, ಅಲ್ಲಿಯೇ ನೆಲೆಸಿದ್ದಾರೆ. ಗೋವಾ ರಾಜ್ಯದ ಅಭಿವೃದ್ಧಿಯಲ್ಲಿ ಗೋವಾ ಕನ್ನಡಿಗರ ಪಾತ್ರವೂ ಇದೆ. ಆದರೆ ಗೋವಾ ಸರ್ಕಾರ ಕನ್ನಡಿಗರ ಮೇಲೆ ಪದೇ ಪದೇ ದಬ್ಬಾಳಿಕೆ ನಡೆಸುತ್ತಾ ಬಂದಿದ್ದು, ಇಲ್ಲಿನ ವಾಸ್ಕೊ ಬೈನಾ ಬೀಚ್ನಲ್ಲಿದ್ದ ಸುಮಾರು 75 ಮನೆಗಳನ್ನು ತೆರವುಗೊಳಿಸಿ, ಕನ್ನಡಿಗರನ್ನು ಬೀದಿಗೆ ತಳ್ಳಲಾಗಿತ್ತು. ಪುನರ್ವಸತಿ ಕಲ್ಪಿಸಿ ಎಂದು ಅಂಗಲಾಚಿದರೂ ಯಾರೊಬ್ಬರೂ ಕನ್ನಡಿಗರ ನೆರವಿಗೆ ಬರುತ್ತಿಲ್ಲ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ತಿಳಿಸಿದ್ದಾರೆ.
ಗೋವಾ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕನ್ನಡಿಗರ ಶ್ರಮವೂ ಅಡಗಿದೆ. ಇಲ್ಲಿನ ಕನ್ನಡಿಗರು ಒಂದು ದಿನ ಮನೆಯಿಂದ ಹೊರಬರದಿದ್ದರೆ ಇಡೀ ಗೋವಾದ ಚಿತ್ರಣವೇ ಬದಲಾಗುತ್ತದೆ. ಗೋವಾದ ಎಲ್ಲ ಹೋಟೆಲ್, ರಸ್ತೆ ಸೇರಿದಂತೆ ಸ್ವಚ್ಛತಾ ಕಾರ್ಯ, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರು ಹೆಚ್ಚಾಗಿ ಕನ್ನಡಿಗರೇ ಆಗಿದ್ದಾರೆ. ಇಡೀ ಗೋವಾದಲ್ಲಿ ಮೂರೂವರೆ ಲಕ್ಷ ಜನರು ಕನ್ನಡಿಗರೇ ಇದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ತಿಳಿಸಿದರು.
ಇನ್ನು ಬೀದಿಗೆ ಬಿದ್ದ ಕನ್ನಡಿಗರ ಸಹಾಯಕ್ಕೆ ಹೋಗುವ ಕನ್ನಡಿಗರನ್ನು ಹಾಗೂ ಕನ್ನಡ ಮಾಧ್ಯಮದವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದು ಕನ್ನಡಿಗರ ಧ್ವನಿ ಮುಚ್ಚಿಸುವ ಕೆಲಸವನ್ನು ಗೋವಾ ಪೊಲೀಸರು ಮಾಡುತ್ತಿದ್ದಾರೆ ಎಂಬ ಹಲವು ಅಂಶಗಳನ್ನು ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು ಮನಗಂಡು ಅವರ ನೆರವಿಗೆ ಗೋವಾ ಸರ್ಕಾರ ಹಾಗೂ ಸಚಿವರನ್ನು ಭೇಟಿ ಮಾಡಿ ಕನ್ನಡಿಗರ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಅಲ್ಲದೆ ಈ ಸಂಬಂಧ ಕರ್ನಾಟಕದ ಸಿಎಂ, ಕೆಪಿಸಿಸಿ ಅಧ್ಯಕ್ಷರು ಹಾಗೂ ಸಚಿವರಿಗೂ ವಿಪಯ ತಿಳಿಸುವ ಮೂಲಕ ಕನ್ನಡಿಗರಿಗೆ ನೆರವಾಗುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಮುಂದಾಗಿದೆ.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆರ್. ರಾಜೇಂದ್ರ, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀನಿವಾಸ್, ಕೆಎಂಎಫ್ ನಿರ್ದೇಶಕ ಚಂದ್ರಶೇಖರಗೌಡ, ಪರಶುರಾಮ್, ಶರತ್ಕುಮಾರ್, ರಾಕೇಶ್, ಸುರೇಶ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.