ಶಾಲಾ ಬಸ್ ಕೊಡುಗೆ
ತುಮಕೂರು: ತುಮಕೂರು ಗ್ರೈನ್ ಮರ್ಚಂಟ್ಸ್ ಅಸೋಸಿಯೇಷನ್ ವತಿಯಿಂದ ಜಿ.ಎಂ.ಎ. ಎಜುಕೇಷನ್ ಶಾಲೆಗೆ ಶಾಲಾಬಸ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಗ್ರೈನ್ ಮರ್ಚಂಟ್ಸ್ ಅಸೊಸಿಯೇಷನ್ ಅಧ್ಯಕ್ಷ ಜಿ.ಹೆಚ್. ಪರಮಶಿವಯ್ಯ, ಕಾರ್ಯದರ್ಶಿ ಟಿ.ಎಸ್. ಚಂದ್ರಶೇಖರ್, ಸಹಕಾರ್ಯದರ್ಶಿ ಸಿ.ಜೆ. ಧರಣೇಂದ್ರಕುಮಾರ್, ಖಜಾಂಚಿ ಕೆ.ವಿ. ಬೆಟ್ಟಯ್ಯ, ಹಾಗೂ ಜಿ.ಎಂ.ಎ. ಎಜುಕೇಷನ್ ಟ್ರಸ್ಟಿನ ಅಧ್ಯಕ್ಷ ಎನ್.ಆರ್. ವಿಶ್ವಾರಾಧ್ಯ, ಕಾರ್ಯದರ್ಶಿ ಅಬ್ದುಲ್ ಜಲೀಲ್ ಇತರೆ ಸದಸ್ಯರು ಇದ್ದರು.
ಮಹಾತ್ಮ ಗಾಂಧಿಯವರ
ಹುತಾತ್ಮ ದಿನಾಚರಣೆ
ಮಂಡ್ಯ: ಬ್ರಿಟೀಷರ ದಾಸ ಸಂಕೋಲೆಯಿಂದ ಭಾರತೀಯರನ್ನು ಬಿಡುಗಡೆಗೊಳಿಸಿದ ಮಹಾತ್ಮಗಾಂಧೀಜಿ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಸ್. ಆತ್ಮಾನಂದ ಗುರುವಾರ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಜೀವವನ್ನು ಮುಡುಪಾಗಿಟ್ಟಿದ್ದ ಗಾಂಧೀಜಿ ಅವರ ಧ್ಯೇಯೋದ್ದೇಶಗಳು, ಆದರ್ಶಗಳು ವಿಶ್ವದಾದ್ಯಂತ ಜನಮಾನಸದಲ್ಲಿ ಚಿರಸ್ಥಾಯಿಯಾಗಿವೆ ಎಂದು ತಿಳಿಸಿದರು. ಅಹಿಂಸೆ ಮೂಲಕ ಹೋರಾಟ ನಡೆಸಿದ ಅವರ ಆದರ್ಶಗಳು ಅನುಕರಣೀಯ. ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿ ರಾಷ್ಟ್ರದಲ್ಲಿ ಪಕ್ಷವನ್ನು ಸಕ್ರಿಯವಾಗಿಸಿದ ಕೀರ್ತಿ ಗಾಂಧೀಜಿ ಅವರಿಗೆ ಸಲ್ಲುತ್ತದೆ ಎಂದು ಆತ್ಮಾನಂದ ಹೇಳಿದರು. ಮಹಾಲಿಂಗು, ಸಂಪತ್, ಹೊಸಹಳ್ಳಿ ಬೋರೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

