ತಂದೆ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಮಗ, ದೂರು
ಪಾವಗಡ: ತಂದೆ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಯುವಕನೊಬ್ಬ ಇಲ್ಲಿನ ಕಾವೇರಿ ಕಲ್ಪತರು ಬ್ಯಾಂಕಿನಲ್ಲಿ ಸುಮಾರು 9ಲಕ್ಷ ರು. ಪಡೆದು ವಂಚಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಆದರ್ಶ ನಗರದ ವಾಸಿ ಹರಿಪ್ರಸಾದ್ ಎಂಬ ಯುವಕನೇ ತಂದೆಯ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿನಲ್ಲಿ 9ಲಕ್ಷ ಪಡೆದುವಂಚಿಸಿದ ಭೂಪ.
ಅದರ್ಶ ನಗರದ ವಾಸಿ ಅಂಜಿನಪ್ಪ ಎಂಬುವವರ ಮಗ ಹರೀ ಪ್ರಸಾದ್ ಕೋಳಿ ಸಾಗಣಿಕೆಗೆಂದು ಕಾವೇರಿ ಕಲ್ಪತರು ಬ್ಯಾಂಕಿನಲ್ಲಿ ಸಾಲ ಪಡೆಯುವ ಹಿನ್ನೆಲೆಯಲ್ಲಿ ತನ್ನ ತಂದೆ ಅಂಜಿನಪ್ಪ ಹೆಸರಿನಲ್ಲಿ ಪಾವಗಡ ಸಮೀಪವಿರುವ ಬೊಮ್ಮತನಹಳ್ಳಿಯಲ್ಲಿ ಇರುವ 4ಎಕರೆ 20ಗುಂಟೆ ಜಮೀನನ್ನು 14-11- 2013ರಂದು ತನ್ನ ತಂದೆಯ ಬದಲಿಗೆ ತಾ, ಬೊಮ್ಮತನಹಳ್ಳಿ ಗ್ರಾಮದ ಬಸಪ್ಪ ಎಂಬುವರನ್ನು ಕರೆ ತಂದು ಪಾವಗಡ ಉಪ ನೋಂದಣಿ ಕಚೇರಿಯಲ್ಲಿ ಹೆಬೆಟ್ಟಿನ ಗುರುತು, ಫೋಟೋ ಹಾಗೂ ಇನ್ನಿತರೆ ದಾಖಲಾತಿಗಳ ಪ್ರಕ್ರಿಯೆ ಪೂರೈಸಿದ. ಬಸಪ್ಪ ಅವರೇ ನಮ್ಮ ತಂದೆ ಎಂದು ಹೇಳಿ ಕೋಳಿ ಸಾಗಣಿಕೆ ಹೆಸರಿನಲ್ಲಿ ಪಟ್ಟಣದ ಕಾವೇರಿ ಕಲ್ಪತರು ಬ್ಯಾಂಕಿನಲ್ಲಿ 9ಲಕ್ಷ ಸಾಲ ಪಡೆದು ವಂಚಿಸಿದ.
ಯಶಸ್ವಿನಿ ಕಾರ್ಡ್ಗಾಗಿ ಆತನ ತಂದೆ ಅಂಜಿನಪ್ಪ ಕಂದಾಯ ಇಲಾಖೆಯಲ್ಲಿ ಪಹಣಿ ಪಡೆದುಕೊಂಡಾಗ ತನ್ನ ಹೆಸರಿನ ಪಹಣಿಯಲ್ಲಿ ಕಾವೇರಿ ಕಲ್ಪತರು ಬ್ಯಾಂಕಿನಲ್ಲಿ 9ಲಕ್ಷ ಸಾಲ ಪಡೆದಿರುವುದಾಗಿ ನಮೂದಾಗಿರುವುದನ್ನು ಕಂಡು ಕಂಗಾಲದ. ವಂಚನೆ ಬಗ್ಗೆ ಪಟ್ಟಣದ ಸಬ್ ರಿಜಿಸ್ಟಾರ್ ಕಚೇರಿಗೆ ಹೋಗಿ ದಾಖಲೆಗಳನ್ನು ಪರಿಶೀಲಿಸದಾಗ ದಾಖಲೆಗಳಲ್ಲಿ ತನ್ನ ಜಮೀನು ಅಡವಿಟ್ಟು ಅಂಜಿನಪ್ಪ ಎಂದು ಸಹಿ ಮಾಡಿ ಕೋಳಿ ಸಾಗಣಿಕೆ ಹೆಸರಿನಲ್ಲಿ 9ಲಕ್ಷ ಹಣ ಪಡೆದು ವಂಚಿಸಿದ ಬಗ್ಗೆ ತಿಳಿಯಿತು. ತನ್ನ ಮಗ ಮೋಸವೆಸಗಿದ ಬಗ್ಗೆ ಅಂಜಿನಪ್ಪ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯ ಕಲ್ಪಿಸಲು ಒತ್ತಾಯಿಸಿದ. ಘಟನೆ ಬಗ್ಗೆ ಲೋಕಯುಕ್ತರಿಗೆ ದೂರು ನೀಡುವುದಾಗಿಯೂ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

