101 ವಿಭೂತಿ ಪುರುಷರ ಪ್ರತಿಮೆ ಸ್ಥಾಪನೆಗೆ ಶಿಲಾಪೂಜೆ
ಚಿಕ್ಕನಾಯಕನಹಳ್ಳಿ: ಪ್ರಪಂಚದ ಜನತೆಗೆ ಉಪಯುಕ್ತವಾದ ಕಾರ್ಯ ಮಾಡಿರುವ 101 ವಿಭೂತಿ ಪುರುಷರ ಪ್ರತಿಮೆಗಳನ್ನು ಸ್ಥಾಪಿಸುವ ಮಹಾತ್ಕಾಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಪ್ರೊ. ಸಿ.ಎಚ್.ಮರಿದೇವರು ತಿಳಿಸಿದರು.
ಅವರು ಪಟ್ಟಣದಲ್ಲಿ ಶಿಲಾಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಮಾನವ ಬದುಕಿನುದ್ದಕ್ಕೂ ದುಡಿದದ್ದನ್ನು ಸಮಾಜ ಸೇವೆಗಾಗಿ ಕೆಲ ಅಂಶವನ್ನು ವಿನಿಯೋಗಿಸ ಬೇಕಾಗುತ್ತದೆ. ಭಗವಂತ ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ಕೊಡುವವನು ಅವನೆ, ವಾಪಸ್ ಪಡೆಯುವವನು ಅವನೆ. ಆದ್ದರಿಂದ ಅವನ ರೂಪದಲ್ಲಿ ಸಮಾಜಕ್ಕೆ
ಅನುಕೂಲವಾಗುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ರವಿಕುಮಾರ್, ರಾಜಶೇಖರ್, ಸಿದ್ದರಾಮಯ್ಯ, ಶಿಲ್ಪಿ ಗಿರೀಶ್ ಮುಂತಾದವರಿದ್ದರು.
ಅಭ್ಯರ್ಥಿ ಗೆಲವಿಗೆ ಪ್ರಾಮಾಣಿಕ ಯತ್ನ ನಡೆಸಿ: ನಂದೀಶ್
ಗುಬ್ಬಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲವಿಗೆ ಕಾರ್ಯಕರ್ತರು ಮತ್ತು ಮುಖಂಡರು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಎಂ.ಬಿ. ನಂದೀಶ್ ಕರೆ ನೀಡಿದರು.
ಪಟ್ಟಣದ ಶ್ರೀಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಬಿಜೆಪಿ ವಿಶೇಷ ಮಂಡಲ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು ರಾಜ್ಯದ ಜನತೆ ಮುಂಬರುವ ಲೋಕಸಬಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ತಿಳಿಸಿದ ಅವರು ರಾಜ್ಯದಲ್ಲಿ ಹಲವಾರು ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಸಮಸ್ಯೆಗಳ ಸುಧಾರಣೆಗೆ ರಾಜ್ಯ ಸರಕಾರ ಯಾವುದೇ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
ಈಗಾಗಲೇ ಶಕ್ತಿ ಕೇಂದ್ರ, ಬೂತ್ ಮಟ್ಟದ ಸಮಿತಿ ಹಾಗೂ ಸ್ಥಾನೀಯ ಸಮಿತಿಗಳನ್ನು ರಚಿಸುವ ಮೂಲಕ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಗೊಳಿಸಲು ಮುಂದಾಗಿದ್ದು ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ಯುವಕರು ಅಭ್ಯರ್ಥಿಯ ಗೆಲವಿಗೆ ಶ್ರಮಿಸುವಂತೆ ಕರೆ ನೀಡಿದರು.
ಕಡಿವಾಣ ಹಾಕುತ್ತಿಲ್ಲ: ತಾಲೂಕು ಬಿಜೆಪಿ ಅಧ್ಯಕ್ಷ ಎಚ್.ಟಿ.ಬೈರಪ್ಪ ಮಾತನಾಡಿ ತಾಲೂಕಿನಾಧ್ಯಂತ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ನೀಡುವಲ್ಲಿ ಆಹಾರ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಮೂಲಭೂತ ಸಮಸ್ಯೆಗೆ ಸಮರ್ಪಕವಾಗಿ ಸ್ಫಂದಿಸುತ್ತಿಲ್ಲ. ಅಲ್ಲದೆ ರೈತರು ಕೊರೆಸುವ ಕೊಳವೆ ಬಾವಿಗಳಿಗೆ ಕೊಳವೆ ಬಾವಿ ಕೊರೆಯುವ
ಬೋರ್ವೆಲ್ ಮಾಲೀಕರು ರೈತರಿಂದ ಮನಬಂದಂತೆ ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕಡಿವಾಣ ಹಾಕುತ್ತಿಲ್ಲ ಎಂದು ಆರೋಪಿಸಿದರು. ಸಭೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನಾಗರತ್ನಮ್ಮ, ತಾಲೂಕು ಬಿಜೆಪಿ ಘಟಕದ ಮಾಜಿ ಅಧ್ಯಕ್ಷರಾದ ಎಸ್. ವಿಜಯಕುಮಾರ್, ಜಗದೀಶ್ ಗೌಡ, ಜಿಲ್ಲಾ ಎಸ್.ಸಿ ಮೋರ್ಚಾ ಉಪಾಧ್ಯಕ್ಷ ಲೋಕೇಶ್, ತಾಲೂಕು ಕಾರ್ಯದರ್ಶಿ ಉಮೇಶ್, ಮುಖಂಡರಾದ ವೆಂಕಟೇಶ್, ಎಸ್. ನಂಜೇಗೌಡ, ಹರೀಶ್ ಮುಂತಾದವರು ಭಾಗವಹಿಸಿದ್ದರು.
ಕರಿಬಸಯ್ಯನವರ ಜನ್ಮ ದಿನಾಚರಣೆ
ತಿಪಟೂರು: ಬೆಂಗಳೂರಿನ ಕಂಠೀರವ ಸ್ಪುಡಿಯೋ ಸ್ಥಾಪಕರಾದ, ತಿಪಟೂರಿನ ಕಲಾಕಂಠೀರವ ಟಿ.ಎಸ್. ಕರಿಬಸವಯ್ಯನವರ 100ನೇ ಜನ್ಮ ದಿನಾಚರಣೆಯನ್ನು ಸ್ಟುಡಿಯೋದ ನೌಕರರು ಇತ್ತೀಚೆಗೆ ಆಚರಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡರು, ಜಯಕರ್ನಾಟಕದ ಎನ್.ಮುತ್ತಪ್ಪ ರೈ, ಹಿರಿಯ ನಟಿ ಗಿರಿಜಾ ಲೋಕೇಶ್, ಕಿರುತೆರೆ ನಟ ದಯಾನಂದಸಾಗರ್ ಸೇರಿದಂತೆ ಟಿ.ಎಸ್. ಕರಿಬಸಯ್ಯನವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ಸಮಾಲೋಚನಾ ಸಭೆ
ತಿಪಟೂರು: ನಗರಸಭೆಯ 2014-15ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿ ತಯಾರಿಸಲು ನಗರಸಭಾ ವ್ಯಾಪ್ತಿಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹೊಟೇಲ್ ಅಸೋಸಿಯೇಷನ್, ಛತ್ರಗಳ ಮಾಲೀಕರ ಸಂಘ, ಸಿನಿಮಾ ಮಂದಿರಗಳ ಮಾಲೀಕರ ಸಂಘ, ನರ್ಸಿಂಗ್ ಹೋಮ್ ಸಂಘ, ಶಿಕ್ಷಣ ಸಂಸ್ಥೆಯ ಸಂಘಗಳ ಪದಾಧಿಕಾರಿಗಳು, ವಕೀಲರ ಅಸೋಸಿಯೇಷನ್, ನಾಗರಿಕ ಹಿತರಕ್ಷಣಾ ಸೇವಾ ಸಮಿತಿ, ಸರ್ಕಾರೇತರ ಸಂಘ ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕಾಕೋದ್ಯಮ ಸಂಸ್ಥೆಗಳ ಪದಾಧಿಕಾರಿಗಳ ಹಾಗೂ ಸಾರ್ವಜನಿಕರ ಎರಡನೇ ಸುತ್ತಿನ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ನಗರಸಭೆಯ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಳಿಗ್ಗೆ 11ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

