ತುಮಕೂರು

8 ಕುರಿಗಳನ್ನು ಕೊಂದ ಚಿರತೆ, ಆತಂಕದಲ್ಲಿ ಜನತೆ

Published On :

ಗುಬ್ಬಿ: ತೋಟದ ಮನೆಯ ಕುರಿರೊಪ್ಪಕ್ಕೆ ನುಗ್ಗಿರುವ ಚಿರತೆಯೊಂದು 8 ಕುರಿಗಳನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ಕಾಳೇನ ಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ. ತಾಲೂಕಿನ ಸಿ.ಎಸ್.ಪುರ ಹೋಬಳಿಯ ಕಾಳೇನಹಳ್ಳಿ ಗ್ರಾಮದ ರೈತ ಪರ್ವತಯ್ಯ ಎಂಬುವರ ತೋಟದ  ಮನೆಯಲ್ಲಿ ವಾಸವಾಗಿದ್ದು, ಮನೆಯ ಪಕ್ಕದಲ್ಲೇ ಕುರಿ ರೊಪ್ಪವನ್ನು ನಿರ್ಮಿಸಿಕೊಂಡಿದ್ದರು. ಎಂದಿನಂತೆ ರಾತ್ರಿಯೂ ರೊಪ್ಪಕ್ಕೆ 11 ಕುರಿಗಳನ್ನು ಕೂಡಿ ಹಾಕಿದ್ದು ಮಧ್ಯರಾತ್ರಿ ರೊಪ್ಪಕ್ಕೆ ದಾಳಿಯಿಟ್ಟುರುವ ಚಿರತೆ 11 ಕುರಿಗಳ ಪೈಕಿ 8 ಕುರಿಗಳನ್ನು ಕುತ್ತಿಗೆ ಭಾಗದಲ್ಲಿ ಕಚ್ಚಿ ರಕ್ತ ಹೀರಿ ಕೊಂದು ಪರಾರಿಯಾಗಿದೆ. ಉಳಿದ 3 ಕುರಿಗಳಿಗೆ ಮಾತ್ರ ಏನು ಮಾಡಿಲ್ಲ. ಚಿರತೆ ಬಂದಿರುವುದಕ್ಕೆ ಅದರ ಹೆಜ್ಜೆಗಳ ಗುರುತು ರೊಪ್ಪದಲ್ಲಿ ಕಾಣಸಿವೆ ಎಂದು ಅರಣ್ಯ ಇಲಾಖೆ ಆಧಿಕಾರಿ ಗಳು ತಿಳಿಸಿದ್ದಾರೆ. 8 ಕುರಿಗಳನ್ನು ಕಳೆದುಕೊಂಡಿರುವ ರೈತ ಪರ್ವತಯ್ಯ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ತಪ್ಪಿಸಿಕೊಂಡಿರುವ ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಷ್ಟು ದಿನ ಆನೆಗಳ ಹಾವಳಿಯಿಂದ ಬೇಸತ್ತಿದ ಜನತೆ ಈಗ ಚಿರತೆ ದಾಳಿಗೆ ಭಯ ಆವರಿಸಿದೆ.

ದವನಂ ವಿ.ಸತ್ಯ ನಾರಾಯಣ ನಿಧನಕ್ಕೆ ಸಂತಾಪ
ಪಾವಗಡ: ಖ್ಯಾತ ನ್ಯಾಯವಾದಿ ತಾಲೂಕಿನ ಪೊನ್ನಸಮುದ್ರ ಗ್ರಾಮದ ದವನಂ ವಿ.ಸತ್ಯ ನಾರಾಯಣ (65)ಅವರು ಇತ್ತೀಚೆಗೆ ಬೆಂಗಳೂರಿನ ತಮ್ಮ ಸ್ವ ಗ್ರಹದಲ್ಲಿ ನಿಧನರಾಗಿದ್ದು ಅವರ ಸಾವಿನ ಹಿನ್ನೆಲೆಯಲ್ಲಿ ವಾಸವಿ ಯೂನಿಯನ್ ಹಾಗೂ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯಹೋರಾಟಗಾರ ಡಿ.ವಿ.ಅಶ್ವತ್ಥನಾರಾಯಣರಾವ್, ಡಿ.ವಿ.ರಾಜ್‌ಗೋಪಾಲ್,  ಡಿ.ವಿ.ವಿಶ್ವನಾಥ್, ಡಿ.ವಿ. ಕೃಷ್ಣಮೂರ್ತಿ, ಡಿ.ವಿ.ಚಂದ್ರಮೋಹನ್, ಡಿ.ವಿ.ಆದಿಶೇಷ,  ಗಜಲಕ್ಷ್ಮೀ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.