ತುಮಕೂರು

ಎತ್ತಿನಹೊಳೆ ಯೋಜನೆಯಿಂದ ಕುಡಿವ ನೀರಿನ ಸಮಸ್ಯೆ ಪರಿಹಾರ: ಸಚಿವ ಟಿ.ಬಿ. ಜಯಚಂದ್ರ

Published On :

ಶಿರಾ: ಏತ್ತಿನಹೊಳೆ ಯೋಜನೆಯ ಸಾಧಕ-ಬಾಧಕಗಳನ್ನು ಸಮಗ್ರವಾಗಿ ಚರ್ಚಿಸಿಯೇ  ಅನುಷ್ಠಾನ ಮಾಡುತ್ತಿದ್ದು ಇದರಿಂದ ತುಮಕೂರು, ಹಾಸನ ಜಿಲ್ಲೆಗಳ  ಕುಡಿಯುವ ನೀರಿನ ಸಮಸ್ಯೆ ದೂರವಾಗುವುದರ ಜೊತೆಗೆ ಈ ಭಾಗದ ರೈತರಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಅವರು ಶಿರಾ ತಾಲೂಕಿನ ಗಡಿಗ್ರಾಮ ದ್ವಾರನಕುಂಟೆಯಲ್ಲಿ  ನಿರ್ಮಿಸಿರುವ ನೂತನ  ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ಉದ್ಘಾಟಿಸಿ ಮಾತನಾಡಿದರು.   ಭದ್ರ ಮೇಲ್ದಂಡೆ ಯೋಜನೆ  ಕಾಮಗಾರಿಗೆ ಸರ್ಕಾರ ಮಂಜೂರಾತಿ ನೀಡಿದ್ದು  ಒಂದೆರಡು ತಿಂಗಳಲ್ಲಿ ಕೆಲಸ ಪ್ರಾರಂಭವಾಗಲಿದೆ   ಈ ಯೋಜನೆ ಅನುಷ್ಠಾನದಿಂದ  ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ ಹೊಂದಲಾಗಿದೆ. ಶಿರಾನಗರದ ಸುತ್ತ ಮುತ್ತ  ಹಲವಾರು ಕೈಗಾರಿಕೆಗಳು ಅತಿ ಶೀಘ್ರ ಪ್ರಾರಂಭವಾಗಿ   ಯುವಕ-ಯುವತಿಯರಿಗೆ ಉದ್ಯೋಗ ದೂರೆಯಲಿದ್ದು,  ನಿರುದ್ಯೋಗ ಸಮಸ್ಯೆ ದೂರವಾಗಲಿದೆ ಎಂದರು.
ಮಾದರಿ ಕ್ಷೇತ್ರ: ಶಿರಾ ಕ್ಷೇತ್ರವನ್ನು ಆಭಿವೃದ್ಧಿಯಲ್ಲಿ  ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವಲ್ಲಿ ಉತ್ಸುಕನಾಗಿದ್ದೇನೆ.   ತಾಲೂಕಿನಲ್ಲಿ  ಜನಸಂಖ್ಯೆ ಬೆಳೆಯುತ್ತಿದ್ದು    ಇದಕ್ಕನುಗುಣಾವಾಗಿ  ಈಗಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಅತಿಶೀಘ್ರವಾಗಿ  ನಾಲ್ಕುನೂರು ಹಾಸಿಗೆಯುಳ್ಳ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ ಮಾಡಲಾಗುವುದೆಂದರು. ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ  ಗಡಿ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರೆ ಹೆಚ್ಚಾಗಿದ್ದು  ಜೀವನೋಪಾಯಕ್ಕೆ ವ್ಯವಾಸಾಯವನ್ನೆ ಅವಲಂಬಿಸಿದ್ದಾರೆ. ಇಂತಹ ಹಿಂದುಳಿದ ಗಡಿಗ್ರಾಮದ ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿರುವುದು ಬಡ ರೋಗಿಗಳಿಗೆ ಜೀವನಾಡಿಯಾಗಿದೆ. ಹುಲಿಕುಂಟೆ ಹೋಬಳಿಯಲ್ಲಿ ಅಂತರ್ಜಲ ಹೆಚ್ಚುಮಾಡುವ ಉದ್ದೇಶದಿಂದ ಸುಜಲ ಜಲನಯನ ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿದೆ. ಸಿಕ್ಕಿರುವ ಅವಕಾಶದಲ್ಲಿ  ಜನಸಾಮಾನ್ಯನ ನಿರೀಕ್ಷೆ ಹುಸಿಮಾಡದಂತೆ ಸೇವೆ ಮಾಡುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಾರನಕುಂಟೆ ಗ್ರಾಪಂ ಅಧ್ಯಕ್ಷೆ ಮಂಜಮ್ಮ ವಹಿಸಿದ್ದರು. ಹುಲಿಕುಂಟೆ ಜಿಲ್ಲಾ ಪಂಚಾಯತಿ ಸದಸ್ಯೆ ವಿಶಾಲಾಕ್ಷಿ ಪ್ರಕಾಶ್ ಗೌಡ, ಜಿಪಂ ಸದಸ್ಯರಾದ ಕೆಂಚಮಾರಯ್ಯ, ಅರೇಹಳ್ಳಿ ರಮೇಶ್, ತಾಪಂ ಅಧ್ಯಕ್ಷೆ ಗಂಗಮ್ಮ, ತಾಪಂ ಸದಸ್ಯೆ ಛಾಯಾದೇವಿ ನಾಗಭೂಷಣ್, ಜಿಲ್ಲಾ ಆರೋಗ್ಯಧಿಕಾರ
ಡಾ.ಚನ್ನಮಲ್ಲಯ್ಯ,  ತಹಸೀಲ್ದಾರ್ ಚಂದ್ರಶೇಖರಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮರಾಜು, ಚಂಗಾವರ ಮಾರಣ್ಣ, ಗ್ರಾಪಂ ಉಪಾಧ್ಯಕ್ಷೆ ಲೋಕಮ್ಮ, ಶ್ರೀಧರ್, ದ್ವಾರನಕುಂಟೆ ಲಕ್ಷ್ಮಣ್ ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.