ಇಂದು ಕಾನೂನು ಸಂವಾದ ಕಾರ್ಯಕ್ರಮ
ಕುಣಿಗಲ್: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಫೆ. 15ರ ಶನಿವಾರ ಹನ್ನೆರಡು ಗಂಟೆಯಿಂದ ಎರಡು ಗಂಟೆವರೆಗೂ ಕಾನೂನು ಸಂವಾದ ಕಾರ್ಯಕ್ರಮವನ್ನು ಪಟ್ಟಣದ ಸೂರ್ಯಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಕಾನೂನಿನ ವಿಷಯಗಳಿಗೆ ಸೇರಿದಂತೆ ಅರಿವನ್ನು ಹೊಂದಲು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿವಿಧ ಕಾನೂನು ವಿಷಯಗಳ ಬಗ್ಗೆ ನುರಿತ ವಕೀಲರಿಂದ, ನ್ಯಾಯಾಧೀಶರ ಸಮ್ಮುಖದಲ್ಲಿ ಅಗತ್ಯ ಕಾನೂನುಗಳ ತಿಳಿವಳಿಕೆ ಪಡೆಯಬಹುದಾಗಿದೆ. ಸಾರ್ವಜನಿಕರು ಸಂವಾದ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ವಕೀಲರ ಸಂಘದ ಅಧ್ಯಕ್ಷ ದಯಾನಂದ್ ಮನವಿ ಮಾಡಿದ್ದಾರೆ.
ಇಂದಿನಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ
ತಿಪಟೂರು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ 2013-14ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಶನಿವಾರದಿಂದ ಫೆ.21ರವರೆಗೆ ಹಮ್ಮಿಕೊಳ್ಳಲಾಗಿದೆ.
ಶಿಬಿರದ ಉದ್ಘಾಟನೆಯನ್ನು ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಮಾಡಲಿದ್ದು, ಶಾಸಕ ಕೆ.ಷಡಕ್ಷರಿ ಪಾಲ್ಗೊಳ್ಳಲಿದ್ದಾರೆ.ಅಧ್ಯಕ್ಷತೆ ಪ್ರಾಂಶುಪಾಲರಾದ ಡಾ.ಜಯದೇವಪ್ಪ ವಹಿಸಲಿದ್ದು, ಎಸ್.ಪಿ.ಎಸ್. ಆಡಳಿತಾಧಿಕಾರಿ ಭದ್ರಪ್ಪ, ಎಸ್.ಪಿ.ಎಂ.ಎಸ್. ಕಾಲೇಜಿನ ಪ್ರಾಂಶುಪಾಲ ಕೆ.ಆರ್. ಶಂಕರಪ್ಪ, ಸಂಸ್ಕೃತ ಪಾಠಶಾಲೆಯ ಮುಖ್ಯೋಪಾಧ್ಯಾಯ ಡಿ.ಎಚ್.ಗಂಗಣ್ಣ, ಎಸ್.ಪಿ.ಎಸ್. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಿವಾಕರ್, ಗ್ರಾ.ಪಂ.ಅಧ್ಯಕ್ಷೆ ಬಿ.ಅನುಸೂಯ, ಶಿಬಿರಾಧಿಕಾರಿಗಳಾದ ಕೆ.ವಿ. ನಾಗರಾಜು, ಡಾ.ಡಿ.ಆರ್. ಹೊನ್ನಾಂಜನಯ್ಯ, ಉಪನ್ಯಾಸಕರಾದ ಪ್ರೊ.ರಾಮಚಂದ್ರ, ಪ್ರೊ.ಈರಯ್ಯ, ಡಾ.ವೆಂಕಟೇಶ್, ಡಾ.ಕೆ.ಬಿ. ಸರಸ್ವತಿ ಮತ್ತಿತರರು ಭಾಗವಹಿಸಲಿದ್ದಾರೆ.
ಈಶ್ವರ ದೇವಸ್ಥಾನದ ಅಭಿವೃದ್ಧಿಗೆ ರು. 7 ಲಕ್ಷ ಅನುದಾನ ಬಿಡುಗಡೆ
ಪಾವಗಡ: ಜೂಲಪ್ಪನ ಪಾಳ್ಯ ಗ್ರಾಮದ ಸಮೀಪ ವನಂತ್ರದಲ್ಲಿರುವ ವೀರಶೈವ ಸಮುದಾಯದ ಈಶ್ವರ ದೇವಸ್ಥಾನದ ಅಭಿವೃದ್ಧಿಗೆ ಶಾಸಕ ಕೆ.ಎಂ.ತಿಮ್ಮರಾಯಪ್ಪ 7ಲಕ್ಷ ರು. ಅನುದಾನ ಬಿಡುಗಡೆ ಮಾಡಿರುವುದಾಗಿ ವೀರಶೈವ ಮುಖಂಡ ವಾಗೀಶ್ ತಿಳಿಸಿದ್ದಾರೆ. ತಾಲೂಕಿನ ಲಿಂಗದಹಳ್ಳಿ ವ್ಯಾಪ್ತಿಯ ಜೂಲಪ್ಪನ ಪಾಳ್ಯದ ಸಮೀಪ ವನಂತ್ರದಲ್ಲಿ ಬೆಟ್ಟವಿದ್ದು ಇಲ್ಲಿ ಪುರಾತನ ಕಾಲದ ವೀರಶೈವ ಜನಾಂಗದ ಕುಲ ಮತ್ತು ಆರಾಧ್ಯ ದೈವ ಈಶ್ವರ ದೇವಸ್ಥಾನ ನೆಲೆಯಾಗಿದೆ. ಜೂಲಪ್ಪನ ಪಾಳ್ಯದಿಂದ ದೇವಸ್ಥಾನ ಸುಮಾರು 2ಕಿಮೀ ದೂರವಿದ್ದು ಅಂಕುಡೊಂಕಿನಿಂದ ಕೂಡಿದ ಮಣ್ಣಿನ ರಸ್ತೆ ಇರುವುದನ್ನು ಗಮನಿಸಿದ ಶಾಸಕರು ಸ್ಥಳೀಯ ಪ್ರದೇಶಭಿವೃದ್ಧಿ ಯೋಜನೆಯಲ್ಲಿ 2ಲಕ್ಷ ಅನುದಾನ ಬಿಡುಗಡೆ ಮಾಡಿ ಈಶ್ವರ ದೇವಸ್ಥಾನದ ದುರಸ್ತಿ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ 5ಲಕ್ಷ ರು. ಬಿಡುಗಡೆ ಮಾಡಿದ್ದಾರೆಂದು ತಿಳಿಸಿದ್ದಾರೆ.
5 ಸೀಟು ನೀಡಿ: ರಾಣಿಸತೀಶ್
ತುಮಕೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ 5 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಮಾಜಿ ಸಚಿವೆ ರಾಣಿಸತೀಶ್ ಹೈಕಮಾಂಡ್ಗೆ ಮನವಿ ಮಾಡಿದ್ದಾರೆ. ಹಾಲಿ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಮ್ಯ ಅವರಿಗೆ ಮತ್ತೆ ಟಿಕೆಟ್ ನೀಡಲು ನಿರ್ಣಯ ಕೈಗೊಂಡಿದ್ದು ಇನ್ನು 4 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ದೇವೇಗೌಡರು ಎಂದು ಒಪ್ಪಿಕೊಂಡ ರಾಣಿಸತೀಶ್ ಆದರೆ ಮೀಸಲಾತಿಯನ್ನು ಜಾರಿಗೆ ತಂದದ್ದು ರಾಜೀವ್ಗಾಂಧಿ ಎಂದರು. ಮಹಿಳೆಯರು ಈಗ ಶೇ. 52 ರಷ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಿಗಮ, ಮಂಡಳಿಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹಿಸಿದರು.
ಇಂದು ವ್ಯಕ್ತಿತ್ವ ವಿಕಸನ: ಸಂವಾದ ಕಾರ್ಯಕ್ರಮ
ಕುಣಿಗಲ್: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಮತ್ತು ಪರೀಕ್ಷಾ ಭಯ ಹೋಗಲಾಡಿಸಿ ಮನಸ್ಥೈರ್ಯ ತುಂಬಲು ಅರವಿಂದ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ವ್ಯಕ್ತಿತ್ವ ವಿಕಸನ ಅಂತರಾಷ್ಟ್ರೀಯ ತರಬೇತುದಾರರಾದ ಚೇತನ್ ರಾಮ್ರಾವ್ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಫೆ. 15ರಂದು ಹಮ್ಮಿಕೊಳ್ಳಲಾಗಿದೆ.
ಮಲ್ಲ ಗಿರೀಶ್ ನೇಮಕ
ಪಾವಗಡ: ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅಭಿಮಾನಿ ಬಳಗ, ಜಿಲ್ಲಾ ಸಮಿತಿ (ವಿಆರ್ಸಿ) ವತಿಯಿಂದ ಗುರುವಾರ ತುಮಕೂರಿನಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಜಿಲ್ಲಾ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಪಾವಗಡ ತಾ.ಓಬಳಾಪುರ ಗ್ರಾಮದ ಹೊಟೇಲ್ ಮಲ್ಲ ಗಿರೀಶ್ ನೇಮಕಗೊಂಡಿದ್ದಾರೆ.
ಇಂದಿನಿಂದ ಚಿಲಿಪಿಲಿ ಮೇಳ-2014
ಗುಬ್ಬಿ: ಪಟ್ಟಣದ ವಿವೇಕಾನಂದ ವಿದ್ಯಾಪೀಠ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಚಿಲಿಪಿಲಿ ಮೇಳ-2014 ಕಾರ್ಯಕ್ರಮವು ಫೆ. 15 ಮತ್ತು 16 ರಂದು ನಡೆಯಲಿದ್ದು ವಿವೇಕ ಮಿನುಗುತಾರೆಗಳ ಪ್ರಥಮ ಮೇಳ ಫೆ.15 ರಂದು ಸಂಜೆ ನಡೆಯಲಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಬಸವರಾಜು ಮೇಳವನ್ನು ಉದ್ಘಾಟಿಲಿದ್ದಾರೆ. ಮುಖ್ಯ ಅಥಿತಿಗಳಾಗಿ ಎಂ.ಎಸ್. ನರಸಿಂಹಮೂರ್ತಿ ಭಾಗವಹಿಸಲಿದ್ದಾರೆ. ಖ್ಯಾತ ಸಾಹಿತಿ ಜರಗನಹಳ್ಳಿ ಶಿವಶಂಕರ್ ಮೇಳದ ಅಧ್ಯಕ್ಷತೆ ವಹಿಸಲಿದ್ದಾರೆಂದು ಕಾರ್ಯದರ್ಶಿ ಜಿ.ಎಸ್. ಅರುಣ್ ಕುಮಾರ್ ತಿಳಿಸಿದ್ದಾರೆ. ಶಾಲಾ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಫೆ.16 ರಂದು ವಿವೇಕ ಧ್ರುವ ತಾರೆಗಳ ದ್ವಿತೀಯ ಹೆಜ್ಜೆ ಕಾರ್ಯಕ್ರಮ ನಡೆಯಲಿದ್ದು ಕರ್ನಾಟಕ ರಾಜ್ಯ ಆರೋಗ್ಯ ಸುಧಾರಣಾ ಮತ್ತು ವ್ಯವಸ್ಥೆ ಮುಖ್ಯ ಆಡಳಿತಾಧಿಕಾರಿ ಹೆಚ್. ಜ್ಞಾನೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು ಮುಖ್ಯ ಅಥಿತಿಗಳಾಗಿ ವ್ಯಕ್ತಿತ್ವ ವಿಕಸನ ಅಂತರಾಷ್ಟ್ರೀಯ ತರಬೇತುದಾರರಾದ ಆರ್.ವಿ. ಚೇತನ್ ರಾಮ್ ಭಾಗಹಿಸಲಿದ್ದಾರೆ.
ತೆರವಾಗಿರುವ ಗ್ರಾಪಂ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ
ತುಮಕೂರು: ರಾಜ್ಯ ಚುನಾವಣಾ ಆಯೋಗದ ಆದೇಶದನ್ವಯ ತುಮಕೂರು ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮಪಂಚಾಯತಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆಯನ್ನು ನಡೆಸಲು ಈ ಕೆಳಕಂಡಂತೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಗ್ರಾಮಪಂಚಾಯತಿ ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ ಮಾತ್ರ ಚುನಾವಣಾ ನೀತಿ ಸಂಹಿತೆಯು ಫೆಬ್ರವರಿ 12 ರಿಂದ ಮಾರ್ಚ್ 5 ರವರೆಗೆ ಜಾರಿಯಲ್ಲಿದ್ದು, ಬರ ಕಾಮಗಾರಿ, ಪ್ರವಾಹ ಇತ್ಯಾದಿ ವಿಕೋಪ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

