ತುಮಕೂರು

ಶಿಕ್ಷಣದಲ್ಲಿ ತಾರತಮ್ಯ: ಶ್ರೀಗಳ ವಿಷಾದ

Published On :

ಚಿಕ್ಕನಾಯಕನಹಳ್ಳಿ: ಶಿಕ್ಷಣವೆಂದರೆ ಹುಟ್ಟಿನಿಂದಲೇ ಮನುಷ್ಯನಲ್ಲಿರುವ ಜ್ಞಾನಭಂಡಾರವನ್ನು ಹೊರಪ್ರಪಂಚಕ್ಕೆ  ತೆರೆದಿಡುವುದು ಎಂದು ತಮ್ಮಡೀಹಳ್ಳಿ ವಿರಕ್ತ ಮಠಾಧೀಶರಾದ ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ ನುಡಿದರು. ಅವರು ತಾಲೂಕಿನ ತರಬೇನಹಳ್ಳಿಯಲ್ಲಿರುವ ಆಕ್ಸ್ಫರ್ಡ್ ಇಂಟರ್ ನ್ಯಾಷನಲ್ ಆಂಗ್ಲಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಯಾವ ಶಿಕ್ಷಣ ಜನಸಾಮಾನ್ಯರನ್ನು ಜೀವನ ಸಂಗ್ರಾಮಕ್ಕೆ ಸಮರ್ಥರನ್ನಾಗಿ ಮಾಡುವುದಕ್ಕಾಗುವುದಿಲ್ಲವೋ, ಯಾವುದು ಮನುಷ್ಯನಿಗೆ  ಚಾರಿತ್ಯಬಲ, ಆತ್ಮಬಲ, ಸೇವಾತತ್ಪರತೆ ಇವುಗಳನ್ನು ಒದಗಿಸುವುದಿಲ್ಲವೋ ಅದು ಶಿಕ್ಷಣವಾಗುವುದಿಲ್ಲ. ವಿದ್ಯಾಭ್ಯಾಸವೆಂದರೆ ಮಕ್ಕಳ ತಲೆಗೆ ತುಂಬುವ ಮಾಹಿತಿಗಳ ಮೊತ್ತವಲ್ಲ. ಜ್ಞಾನವೆಂಬುದು ಮನುಷ್ಯನಲ್ಲಿಯೇ ಅಡಗಿರುವುದು ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.