ಯುವ ಪೀಳಿಗೆ ಶರಣರ ತತ್ವ ಅನುಸರಿಸಲಿ
ಕ.ಪ್ರ. ವಾರ್ತೆ ತಿಪಟೂರು ಫೆ.19
ಯುವ ಸಮೂಹ ಇಂದು ಕೇವಲ ಯಾಂತ್ರೀಕೃತ ಮಾಧ್ಯಮಗಳ ಆಕರ್ಷಣೆಗೊಳಗಾಗಿ ಗ್ರಾಮೀಣ ಬದುಕಿನಿಂದ ದೂರವಾಗುತ್ತಿದೆ. ಆದರೆ ನೈಜ ಕಲೆ, ಸಂಸ್ಕೃತಿ ಇರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ಆದ್ದರಿಂದ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಜೊತೆ ಬೆರೆತು ಬೆಳೆಯುವಂತಾಗಬೇಕೆಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸವನ್ನಷ್ಟೆ ಮುಖ್ಯವಾಗಿರಿಸಿಕೊಳ್ಳದೆ ಜನಪರ ಕಾಳಜಿ, ಹಿರಿಯರ ಹಾದಿಯಲ್ಲಿ ನಡೆಯುವಂತಾಗಬೇಕು. ಶರಣರ ತತ್ವಗಳನ್ನು ಯುವಸಮುದಾಯ ಅನುಸರಿಬೇಕಲ್ಲದೆ ಕಾಯಕ ಮತ್ತು ದಾಸೋಹವನ್ನೇ ಬದುಕಾಗಿಸಿಕೊಂಡ ಶ್ರೀ ಸಿದ್ದರಾಮೇಶ್ವರರ ದಾರಿಯಲ್ಲಿನಡೆಯಬೇಕೆಂದರು.
ಅನುಷ್ಠಾನ: ಶಿಬಿರ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ತಾಲೂಕಿನ ಕೊಬ್ಬರಿ ಬೆಳೆಗಾರರು ಇ-ಟೆಂಡರ್ ಮುಖಾಂತರ ತಮ್ಮ ಉತ್ಪನ್ನ ಬೆಲೆಯನ್ನ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುವಂತ ವಿನೂತನ ಯೋಜನೆಯನ್ನು ಸರ್ಕಾರ ಕೆಲ ದಿನಗಳಲ್ಲೇ ಅನುಷ್ಠಾನಕ್ಕೆ ತರಲಿದೆ.
ತಿಪಟೂರು ರಾಜ್ಯದಲ್ಲೇ ಹೆಚ್ಚು ಕೊಬ್ಬರಿ ಬೆಳೆಯುವ ತಾಲೂಕಾಗಿದ್ದು, ಆದರೆ ಇಲ್ಲಿ ರೈತರು ತಾವು ಬೆಳೆದ ಕೊಬ್ಬರಿ ಮಧ್ಯವರ್ತಿಗಳ ಹಾವಳಿಯಿಂದ ನೇರ ಬೆಲೆ ಕೈ ಸೇರುತ್ತಿಲ್ಲ. ಆದ್ದರಿಂದ ಉತ್ಪನ್ನಗಳ ದಾಸ್ತಾನು ವಿಲೇವಾರಿಗೆ ಸಂಬಂಧಪಟ್ಟ ಮಾಹಿತಿಯೊಳಗೊಂಡ ಇ-ಟೆಂಡರ್ ವ್ಯವಸ್ಥೆಯಲ್ಲಿ ಮಾರುವ ಮತ್ತು ಕೊಳ್ಳುವವನ ವಿವರ ಸಂಪೂರ್ಣವಾಗಿ ದೊರೆಯಲ್ಲಿದ್ದು, ಮಾರುಕಟ್ಟೆಯ ಸರಿಯಾದ ದರ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದರು.
ಉಪಯುಕ್ತ: ಶಿಬಿರ ಕುರಿತು ಮಾತನಾಡುತ್ತಾ ವಿದ್ಯಾರ್ಥಿ ದೆಸೆಯಲ್ಲಿ ಪ್ರಶಾಂತವಾದ ವಾತಾವರಣ ಹಾಗೂ ದೈವಿಕ ಪುಣ್ಯಕ್ಷೇತ್ರದಲ್ಲಿ ಒಂದಾದ ರಂಗಾಪುರದಲ್ಲಿ ಆಯೋಜಿಸಿರುವುದು ತುಂಬಾ ಉಪಯುಕ್ತವಾಗಿದ್ದು ಇದರಿಂದ ಪಾಠಗಳಿಂದ ಆಚೆಗಿನ ವಿದ್ಯಾರ್ಥಿಗಳಿಗೆ ಮಾನಸಿಕ ಶಾಂತಿ ಆಧ್ಯಾತ್ಮಿಕ ಚಿಂತನೆಯಡೆಗೆ ಕೊಂಡೊಯ್ಯುತ್ತದೆ ಎಂದರು. 400 ದಾಖಲಾತಿ ಗಳಿಸಿ ರಾಜ್ಯದಲ್ಲೇ ದಾಖಲೆಯಲ್ಲಿ ಪ್ರಥಮ ಸ್ಥಾನಗಳಿಸಿರುವ ಕಾಲೇಜಿನ ಪ್ರಾಂಶುಪಾಲರ ಕರ್ತವ್ಯನಿಷ್ಠೆ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಜಯದೇವಪ್ಪ ಶಿಬಿರ ಕೇವಲ ದೈಹಿಕ ಶ್ರಮವನ್ನಷ್ಟೇ ವ್ಯಯಿಸುವುದಾಗಿರದೆ ವಿದ್ಯಾರ್ಥಿಗಳಲ್ಲಿ ಬೌದ್ಧಿಕ, ಸಾಂಸ್ಕೃತಿಕ ಶಿಕ್ಷಣವನ್ನು ಪಡೆಯುವಂತಾಗಿರಬೇಕು ಎಂದರು.
ಶಿಬಿರದ ಸಂಯೋಜನಾಧಿಕಾರಿ ಡಾ.ಡಿ.ಆರ್.ಹೊನ್ನಾಂಜಿನೇಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಬಿರಾಧಿಕಾರಿಗಳಾದ ಪ್ರೊ.ಕೆ.ವಿ.ನಾಗರಾಜು, ಪ್ರೊ. ಜ್ಯೋತಿಕಿರಣ, ಪ್ರೊ.ನೀಲಕಂಠಸ್ವಾಮಿ, ಸಹಶಿಬಿರಾಧಿಕಾರಿಗಳಾದ ಡಾ.ಎಲ್.ಎಂ. ವೆಂಕಟೇಶ್, ಜೆ.ಕೆ.ಮಹೇಶ್, ವಾತ್ಸಲ್ಯ, ಕ್ಷೇತ್ರದ ಆಡಳಿತಾಧಿಕಾರಿಗಳಾದ ಭದ್ರಪ್ಪ, ಸಂಸ್ಕೃತ ಪಾಠಶಾಲೆ ಮುಖ್ಯೋಪಾಧ್ಯಾಯರಾದ ಡಿ.ಎಚ್. ಗಂಗಣ್ಣ, ಕಾಲೇಜು ಪೋಷಕ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ಬಿಲ್ಲೇಮನೆ, ಶಂಕರೇಶ್ವರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಜಿ.ಆರ್. ಲಕ್ಷ್ಮಿನಾರಾಯಣ್, ವಕೀಲರಾದ ಬಸವರಾಜು, ಸಮಾಜ ಸೇವಕ ಗುರುಪ್ರಸಾದ್ ಮತ್ತಿತರರಿದ್ದರು. ಅಂಕುಶ ಪ್ರಾರ್ಥಿಸಿ, ಭೈರೇಶ್ ನಿರೂಪಿಸಿ, ಜ್ಯೋತಿಕಿರಣ್ ಸ್ವಾಗತಿಸಿ, ಕೆ.ವಿ.ನಾಗರಾಜು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

