ತುಮಕೂರು

ಸಿದ್ಧರಾಮರ ಆದರ್ಶ ಸಮಾಜಕ್ಕೆ ಅಗತ್ಯ: ಸಿದ್ಧರಾಮಯ್ಯ

Published On :

ಕ.ಪ್ರ. ವಾರ್ತೆ    ತಿಪಟೂರು    ಫೆ.19
ಗುರುಸಿದ್ದರಾಮರು ಕರ್ಮಯೋಗಿಗಳು. ಸಾರ್ವಜನಿಕ ಜೀವನ ಹಸನುಗೊಳಿಸಿ, ನೆಮ್ಮದಿ ನೆಲೆಗೊಳಿಸಲೆಂದು ಕೆರೆ, ಕಟ್ಟೆ, ಕಲ್ಯಾಣಿಗಳನ್ನು ನಿರ್ಮಿಸಿದರು.  ಜ್ಞಾನದಲ್ಲಿ ಶುರುವಾಗಿ ಕಾಯಕದಲ್ಲಿ ಸಿದ್ಧರಾಗಿ, ತ್ಯಾಗದಲ್ಲಿ ರಾಮರಾಗಿ, ದಾಸೋಹದಲ್ಲಿ ದೇವರಾಗಿ ಲೋಕದಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಅಂತಹ ಸಿದ್ಧರಾಮರ ಆದರ್ಶಗಳು ಸಮಾಜಕ್ಕೆ ಅಗತ್ಯ ಎಂದು ವಿದ್ವಾನ್ ಎಂ.ಜಿ. ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದ ತಾಲೂಕು ವಿಶ್ರಾಂತ ಸರ್ಕಾರಿ ಉದ್ಯೋಗಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 841ನೇ
ಶ್ರೀ ಸಿದ್ಧರಾಮರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾನವನ ಬಾಹ್ಯಾಕಾರವನ್ನು ನೋಡದೆ ಅಂತರಂಗದ ನಡೆ ನುಡಿಗಳನ್ನು ನೋಡಬೇಕು. ಮಾತೆಯರಿಗೆ ಪೂಜ್ಯ ಭಾವನೆ ಸ್ಥಾನಮಾನಗಳನ್ನು ನೀಡಬೇಕು. ಒಬ್ಬರ ಮನನೋಯಿಸಿ ಗಂಗೆಯಲ್ಲಿ ಮಿಂದರೆ ಫಲವಿಲ್ಲ. ಪ್ರೀತಿಯಿಂದ ಜನರೊಂದಿಗೆ ಯಾವುದೇ ಭೇದಭಾವವಿಲ್ಲದೆ ಬಾಳಬೇಕು ಎಂಬುದಾಗಿ ಸಿದ್ಧರಾಮರು ಬೋಧಿಸುತ್ತ ಆಚರಣೆಗೆ ತಂದರು ಎಂದರು.
ವೇದಾಂತಿ ಆರೋಗ್ಯಧಾಮದ ಶೋಭಾ ಮತ್ತು ಗಿರೀಶ್ ಪ್ರಾತ್ಯಕ್ಷಿಕೆಗಳ ಮೂಲಕ ಉಪನ್ಯಾಸ ನೀಡಿದರು.   ಸಂಘದ ಅಧ್ಯಕ್ಷ ಜಿ.ಟಿ. ಶಂಕರೇಗೌಡರು ವಹಿಸಿ ಸಂಘಗಳ ಬಲವರ್ಧನೆ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ಹಿರಿಯ ಅಧ್ಯಾಪಕರಾದ ಎನ್.ಎಲ್. ವಿಶ್ವೇಶ್ವರಯ್ಯ, ಕೆ.ಜಿ. ಶಿವಬಸವಯ್ಯ ಮತ್ತು ಜಿ.ಟಿ.ಶಂಕರೇಗೌಡರನ್ನು ಸನ್ಮಾನಿಸಲಾಯಿತು. ಸದಸ್ಯರುಗಳಿಂದ ಸ್ವರಚಿತ ಕವನ ವಾಚನ, ಹಾಡುಗಾರಿಕೆ ನಡೆದವು. ವಿ.ಎನ್. ಮಹದೇವಯ್ಯನವರು ನಿವೃತ್ತ ನೌಕರರ ಸಹಕಾರ ಸಂಘದ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಬಾಲಕೃಷ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು.
 ಸಂಘದ ಪದಾಧಿಕಾರಿಗಳಾದ ಜಿ.ಗಂಗಪ್ಪ, ಪರಶುರಾಮನಾಯಕ್, ಬಸವರಾಜು,ಫಾಲಾಕ್ಷಮೂರ್ತಿ, ಜಿ.ಗಂಗಾಧರ್, ಡಿ.ಎಚ್.ರಾಜಣ್ಣ, ಚನ್ನಬಸವಣ್ಣ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.