ಎಲ್ಲೆಡೆ ಕಲುಷಿತ ವಾತಾವರಣ: ಶೆಟ್ಟರ್
ತುಮಕೂರು: ವಿಧಾನಸಭೆ, ಸಂಸತ್ ಮಾತ್ರವಲ್ಲ, ಎಲ್ಲೆಡೆ ಕಲುಷಿತ ವಾತಾವರಣ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್ ವಿಷಾದಿಸಿದರು.
ಅವರು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಏರ್ಪಾಟಾಗಿದ್ದ ಸಿದ್ಧಗಂಗಾ ಶ್ರೀಗಳ 106 ನೇ ಜನ್ಮದಿನೋತ್ಸವದಲ್ಲಿ ನೂತನ ದಾಸೋಹ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಠಗಳಿಗೆ ಹಣ ನೀಡಿದ ಸಂದರ್ಭದಲ್ಲಿ ಟೀಕೆ ಮಾಡಿದವರಿದ್ದಾರೆ. ಆದರೆ ಮಠಗಳ ಸೇವೆ, ಉತ್ತಮ ಕೆಲಸದ ಹಿನ್ನೆಲೆಯಲ್ಲಿ ಅನುದಾನ ನೀಡಲಾಗಿದೆ. ಮಠಾಧೀಶರಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಪ್ರತಿಪಾದಿಸಿದರು. ಸಿದ್ಧಗಂಗಾ ಶ್ರೀಗಳ 107 ನೇ ಜನ್ಮದಿನೋತ್ಸವವನ್ನು ಮುಂದಿನ ಜೂನ್ - ಜುಲೈನಲ್ಲಿ ಏರ್ಪಾಟು ಮಾಡಲಾಗುವುದು. ಶ್ರೀಗಳ ಸೇವೆಗೆ ಯಾವೊಂದು ಪ್ರಶಸ್ತಿ ಬೇಕಿಲ್ಲ. ಆದರೆ ಭಕ್ತರ ಬೇಡಿಕೆ ಭಾರತರತ್ನ ಪ್ರಶಸ್ತಿ ನೀಡಬೇಕೆಂಬುದಾಗಿದೆ ಎಂದರು.
ಸಿದ್ಧಗಂಗಾ ಶ್ರೀಗಳು ಇಳಿವಯಸ್ಸಿನಲ್ಲೂ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಸೇವೆ ಮಾಡುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ನ, ಶಿಕ್ಷಣ ದಾಸೋಹ ನೀಡುತ್ತಿದ್ದಾರೆ. ಸರ್ಕಾರ, ಸಾರ್ವಜನಿಕರು ಎಲ್ಲ ರೀತಿಯಲ್ಲೂ ಮಠಕ್ಕೆ ಸಹಾಯ ಮಾಡಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

