ತುಮಕೂರು

ತನ್ನನ್ನು ತಾನು ಅರಿತುಕೊಂಡರೆ ಮಾತ್ರ ಶರಣ, ಮರೆತರೆ ಮಾನವ

Published On :

ತುಮಕೂರು: ಇಂದು ವಿಜ್ಞಾನ ಅಗಾಧವಾಗಿ ಬೆಳೆಯುತ್ತಿದ್ದು, ಭಾರತದ ಶ್ರೀಹರಿಕೋಟದಿಂದ ರಾಕೆಟ್ ಮೂಲಕ ಪ್ರಯಾಣ ಮಾಡಿ ಚಂದ್ರಲೋಕ ಮುಟ್ಟಿ ಅಲ್ಲಿ ಬೇಕಾದರೆ ಸೈಟ್ ಖರೀದಿಸಿ, ಸಾಧ್ಯವಾದರೆ ಮಂಗಳ ಗ್ರಹಕ್ಕೆ ಹೋಗಿ ಭಾರತಕ್ಕೆ ಮರಳಬಹುದಾದಂಥ ಸಾಧನೆಯನ್ನ ವಿಜ್ಞಾನಿಗಳು ಮಾಡಿದ್ದಾರೆ ಎಂದು ಡಾ. ಬಿ.ಕೆ. ಬಸವರಾಜ ರಾಜಋಷಿ ಹೇಳಿದರು.
ನಗರದ ಮೆಳೇಕೋಟೆ ಬಳಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿರುವ ಶರಣರು ಕಂಡ ಶಿವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಆಧುನಿಕ ಜನತೆ, ಬೆಂಗಳೂರಿನಿಂದ ಬೆಳಿಗ್ಗೆ 6 ಕ್ಕೆ ವಿಮಾನದಲ್ಲಿ ಹೊರಟು 7 ಕ್ಕೆ ಚನ್ನೈ ತಲುಪಿ, ಅಲ್ಲಿ ನಾಷ್ಟ ಮಾಡಿ ತಮ್ಮ ಕೆಲಸ ಮುಗಿಸಿ, 3 ಗಂಟೆಗೆ ದೆಹಲಿಗೆ ತೆರಳಿ ಊಟ ಮಾಡಿ ತುರ್ತು ಕೆಲಸಗಳನ್ನು ಮುಗಿಸಿಕೊಂಡು ಮತ್ತೆ ಬೆಂಗಳೂರಿಗೆ ರಾತ್ರಿ 9 ಕ್ಕೆ ವಾಪಸ್ ಮನೆಗೆ ಬಂದು ಊಟ ಮುಗಿಸಿ, ಮನೆಯ ಟಿವಿ ಮುಂದೆ ಕುಳಿತು 150 ಚಾನಲ್ ತಿರುವಾಕಿ ಬೇಕಾದ್ದನ್ನು ನೋಡುವಂಥ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.
ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಎನ್. ವಾಮದೇವ, ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಸಾಗರನಹಳ್ಳಿ ಪ್ರಭು, ಕಾವೇರಿ ಆಟೋ ಸೇಲ್ಸ್ ಮಾಲೀಕ ಟಿ.ಆರ್. ಲೋಕೇಶ್, ಸಮಾಜ ಸೇವಕ ಮೋಹನ್ ಕುಮಾರ್, ಅರ್ಪಿತ ಎಂಟರ್ ಪ್ರೈಸಸ್ನ ಎಂ.ಎನ್. ಕಿಷನ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.