2ನೇ ಹಂತದ ಒಳಚರಂಡಿ ಕಾಮಗಾರಿಗೆ ಚಾಲನೆ
ತುಮಕೂರು: ತುಮಕೂರು ನಗರದ ಎರಡನೇ ಹಂತದ ಒಳಚರಂಡಿ ಕಾಮಗಾರಿಗೆ ಸೋಮವಾರ ರಾಜೀವ್ ಗಾಂಧಿ ನಗರದಲ್ಲಿ ಚಾಲನೆ ನೀಡಲಾಯಿತು.
ನಗರದ 35 ವಾರ್ಡ್ಗಳ ಪೂರ್ಣ ವಿಸ್ತೀರ್ಣಕ್ಕೆ ಸಮಗ್ರವಾಗಿ ಒಳಚರಂಡಿ ವ್ಯವಸ್ಥೆ ಅಳವಡಿಸಲು ಎರಡನೇ ಹಂತದ ಒಳಚರಂಡಿ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯನ್ನು 2027 ನೇ ಸಾಲಿನಲ್ಲಿ ಊಹಿಸಲಾದ 4,80,515 ಮತ್ತು 2042 ನೇ ಸಾಲಿನಲ್ಲಿ ಊಹಿಸಲಾದ 7,02,802 ಜನಸಂಖ್ಯೆಗೆ ರೂಪಿಸಲಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು 3 ವರ್ಷ ಗಡುವು ನೀಡಲಾಗಿದೆ.
ಈ ಯೋಜನೆಯಡಿ ತುಮಕೂರು ನಗರ ವ್ಯಾಪ್ತಿಯ 35 ವಾರ್ಡ್ಗಳ ಪ್ರದೇಶವನ್ನು 3 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಒಟ್ಟು 462.51 ಕಿಮೀ ಉದ್ದದ ವಿವಿಧ ವ್ಯಾಸದ ಕೊಳವೆ ಮಾರ್ಗಗಳನ್ನು ಅಳವಡಿಸಲು ಮತ್ತು 14,880 ಸಂಖ್ಯೆಯಲ್ಲಿ ಮ್ಯಾನ್ಹೋಲ್ಗಳು ಹಾಗೂ 48,100 ಸಂಖ್ಯೆಯ ಮನೆಗಳಿಗೆ ಒಳಚರಂಡಿ ಸಂಪರ್ಕಗಳು, ಪ್ರತಿ ವಲಯದಲ್ಲಿ ವೆಟ್ವೆಲ್ಗಳೊಂದಿಗೆ ಪಾರಂಭಿಕ ಶುದ್ಧೀಕರಣ ಘಟಕ, ಡಿಐ ಏರು ಕೊಳವೆ ಮಾರ್ಗ, ಪಂಪುಗಳು, ಡಿಜಿ ಸೆಟ್ ಮತ್ತು ಡಿಜಿ ರೂಂ ನಿರ್ಮಿಸಲು ಉದ್ದೇಶಿಸಲಾಗಿದೆ.
ಯೋಜನೆಯಡಿ ಭೀಮಸಂದ್ರ ಕೆರೆಯಲ್ಲಿರುವ ಹಾಲಿನ ಶುದ್ಧೀಕರಣ ಘಟಕದ ಪಕ್ಕದಲ್ಲಿ 23.30 ಎಂಎಲ್ಡಿ ಸಾಮರ್ಥ್ಯದ ಮಲಿನ ನೀರಿನ ಶುದ್ಧೀಕರಣ ಘಟಕಗಳನ್ನು ಅತ್ಯಾಧುನಿಕ ಎಸ್ಬಿಆರ್ ತಂತ್ರಜ್ಞಾನವನ್ನು ಅಳವಡಿಸಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯ ಅಂದಾಜು ಮೊತ್ತ 175.22 ಕೋಟಿ ರು.ಗಳಾಗಿವೆ. ಈ ಪೈಕಿ ಶೇ. 70 ರಷ್ಟು ಅಂದರೆ 122.65 ಕೋಟಿ ರು. ಸರ್ಕಾರದ ಅನುದಾನವಾಗಿದೆ. ಶೇ. 20 ರಷ್ಟು ಆರ್ಥಿಕ ಸಂಸ್ಥೆಗಳ ಸಾಲ ಅಂದರೆ 35.04 ಕೋಟಿ ರು. ಮಿಕ್ಕ ಶೇ. 10 ರಷ್ಟು ಹಣ 17.53 ಕೋಟಿ ರು. ಸ್ಥಳೀಯ ಸಂಸ್ಥೆಗಳ ಪಾಲು. ಈ ಯೋಜನೆಯ ಕಾಮಗಾರಿಯನ್ನು 36 ತಿಂಗಳೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.
ಭೀಮಸಂದ್ರ ಕೆರೆ ಪರಿಶೀಲನೆಗೆ ಸೂಚನೆ
ಒಳಚರಂಡಿ ನೀರಿನಿಂದಾಗಿ ಕಲುಷಿತಗೊಂಡಿರುವ ಭೀಮಸಂದ್ರ ಕೆರೆ ಪರಿಶೀಲಿಸುವಂತೆ, ಕ್ರಮ ಕೈಗೊಳ್ಳುವಂತೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾವ್ಲಾ ಅವರಿಗೆ ನಗರಾಭಿವೃದ್ಧಿ ಸಚಿವ ವಿನಯ್ಕುಮಾರ್ ಸೊರಕೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

