ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ
ಶಿರಾ: ಶೀರಾಸೀಮೆ ವೇದಿಕೆಯಿಂದ ಫೆ.27ರ ಶಿವರಾತ್ರಿ ಪ್ರಯುಕ್ತ ಪ್ರಸಿದ್ಧ ಜನಪದ ದೈವ ಜುಂಜಪ್ಪನ ಮೂಲನೆಲೆ ಕಳುವರಹಳ್ಳಿ ಸಮೀಪದ ಜುಂಜಪ್ಪನ ದೇವಸ್ಥಾನದ ಬಳಿ ಶಿವೋತ್ಸವ ಜುಂಜಪ್ಪನ ಕಥಾ ಗಾಯನ-ಕವಿಗೋಷ್ಠಿ-ತತ್ವಪದ-ಭಜನಾ ಮೇಳ ಸಂಜೆ 6ರಿಂದ ಮುಂಜಾನೆ 6ಗಂಟೆವರೆಗೆ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಸಂಜೆ ಈ ಕಾರ್ಯಕ್ರಮ ನಡೆಯಲಿದ್ದು ಪ್ರಸ್ತಾವನೆಯನ್ನು ಶಿರಾಸೀಮೆ ವೇದಿಕೆಯ ಪಿ.ಮಂಜುನಾಥ್ ನೆರವೇರಿಸುವರು. ಉದ್ಘಾಟನೆಯನ್ನು ತುಮಕೂರು ವಿವಿಕುಲಪತಿಗಳಾದ ಡಾ.ರಾಜಾಸಾಬ್ ನೆರವೇರಿಸುವರು. ಅಧ್ಯಕ್ಷತೆಯನ್ನು ಶಿಕ್ಷಣ ಚಿಂತಕರು,ಪ್ರೆಸಿಡೆನ್ಸಿ ವಿದ್ಯಾಸಂಸ್ಥೆ ಸಂಸ್ಥಾಪಕರಾದ ಎಂ.ಚಿದಾನಂದ್ ವಹಿಸುವರು. ಶಿವನ ಕುರಿತು ಉಪನ್ಯಾಸವನ್ನು ಪ್ರಾಂಶುಪಾಲರು, ಮಹೇಂದ್ರಪ್ಪ ನೀಡುವರು. ಶಿವವಸ್ತ್ರ, ವಿಭೂತಿ ವಿತರಣೆಯನ್ನು ಅಂಕಸಂದ್ರ ಪ್ರೇಮಕುಮಾರ್ ಮತ್ತು ಸಾಂಸ್ಕೃತಿಕ ಸಂಘಟಕರು ನೀಡುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

