12 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ
ತುರುವೇಕೆರೆ: ಕಾಲುಬಾಯಿ ರೋಗದ ಬಾಧೆಯನ್ನು ತಡೆಗಟ್ಟುವ ಸಲುವಾಗಿ ತಾಲೂಕಿನಾದ್ಯಂತ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈಗಾಗಲೇ 100 ಗ್ರಾಮಗಳಿಗೆ ಭೇಟಿ ನೀಡಿರುವ ಪಶು ವೈದ್ಯಕೀಯ ತಂಡ ಸುಮಾರು 12 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ಹಾಕಿದ್ದಾರೆ.
ತಾಲೂಕಿನಲ್ಲಿ ಕಾಲುಬಾಯಿ ರೋಗದಿಂದ 49 ಹಸುಗಳು, 12 ಎತ್ತು, 10 ಕರುಗಳು ಮೃತಪಟ್ಟಿದ್ದವು. ಸರ್ಕಾರ ಪ್ರತಿ ಎಮ್ಮೆ ಅಥವಾ ಹಸುವಿಗೆ 16,400 ರು.ಗಳನ್ನು ನೀಡಿದರೆ, ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ 8,600 ರು.ಗಳನ್ನು ನೀಡುತ್ತಿದೆ. ತಮ್ಮ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ತಮ್ಮ ಜಾನುವಾರುಗಳನ್ನು ಕಳೆದುಕೊಂಡಿದ್ದಲ್ಲಿ ಪ್ರತಿ ಹಸುವಿಗೆ ಹೆಚ್ಚುವರಿಯಾಗಿ 5 ಸಾವಿರ ರು.ಗಳನ್ನು ನೀಡಲಾಗುವುದು ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 299 ಮಿಶ್ರತಳಿ ಹಸುಗಳು, 30 ಎತ್ತು, 154 ಕರುಗಳು ಕಾಲು ಬಾಯಿ ರೋಗಕ್ಕೆ ಸಿಲುಕಿ
ಮೃತಪಟ್ಟಿವೆ. ಜಿಲ್ಲಾ ಹಾಲು ಒಕ್ಕೂಟದ ನೌಕರರು ತಮ್ಮ 2 ದಿನಗಳ ಸಂಬಳವನ್ನು ಸಹ ದೇಣಿಗೆಯಾಗಿ ನೀಡಿದ್ದಾರೆ ಎಂದು ವಿಭಾಗೀಯ ವ್ಯವಸ್ಥಾಪಕ ಡಾ.ವಿವೇಕಾನಂದ ಶೆಟ್ಟಿ ತಿಳಿಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮುನಿಯೂರಿನಲ್ಲಿ ಕಾಲು ಬಾಯಿ ರೋಗ ನಿವಾರಣೆಗೆ ಮುಂದಾಗಿರುವ ಚುಚ್ಚು ಮದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕಿನಾದ್ಯಂತ ಪಶು ಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ.ಕೆ.ವಿ.ನಾಗರಾಜ್, ಪಶು ವೈದ್ಯಾಧಿಕಾರಿ ಡಾ.ಶಂಕರಪಾಟೀಲ್, ಕೆಎಂಎಫ್ ವಿಭಾಗೀಯ ವ್ಯವಸ್ಥಾಪಕ ಡಾ.ವಿವೇಕಾನಂದ ಶೆಟ್ಟಿ, ಸಹಾಯಕ ವ್ಯವಸ್ಥಾಪಕ ಸಿ.ಚಿಕ್ಕಗಂಗಯ್ಯ, ವಿಸ್ತರಣಾಧಿಕಾರಿ ಕೆ.ಪಿ.ಮಂಜುನಾಥ್, ಪಶು ವೈದ್ಯ ಪರೀಕ್ಷಕ ಚಿಕ್ಕರಾಜು ಅವರ ತಂಡ ಕಾಲು ಬಾಯಿ ರೋಗದ ವಿರುದ್ಧ ಲಸಿಕಾ ಕಾರ್ಯಕ್ರಮವನ್ನು ಸಮಗ್ರವಾಗಿ ಹಮ್ಮಿಕೊಂಡಿದೆ.
ಮುನಿಯೂರಿನಲ್ಲಿ ನಡೆದ ಲಸಿಕಾ ಶಿಬಿರದಲ್ಲಿ ಎಪಿಎಂಸಿಯ ನಿರ್ದೇಶಕ ಕೊಂಡಜ್ಜಿ ವಿಶ್ವನಾಥ್, ಮುನಿಯೂರು ಹಾಲು ಉತ್ರಾದಕರ ಸಂಘದ ಅಧ್ಯಕ್ಷ ದೇವಲಮುನಿ, ಮಾಜಿ ಅಧ್ಯಕ್ಷ ರಾಮೇಗೌಡ, ಮುಖಂಡರಾದ ಎಂ.ಟಿ.ರಮೇಶ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

