ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸದೃಢರಾಗಿ
ಕೊರಟಗೆರೆ: ಗ್ರಾಮೀಣ ಪ್ರದೇಶದ ಮಹಿಳೆಯರು ಸ್ತ್ರೀ ಶಕ್ತಿ ಸಂಘಗಳ ಮೂಲಕ ಸಬಲೀಕರಣಗೊಂಡಂತೆ ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸದೃಢಗೊಳ್ಳುವಂತೆ ಜಿಲ್ಲಾ ಹಾಲು ಒಕ್ಕೂಟದ ತಾಲೂಕು ನಿರ್ದೇಶಕ ವಿಜಯಶಂಕರ್ ತಿಳಿಸಿದರು.
ಅವರು ತಾಲೂಕಿನ ಶಕುನಿತಿಮ್ಮನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದನಾ ಸಹಕಾರ ಸಂಘದ ವತಿಯಿಂದ ನೂತನವಾಗಿ ಪ್ರಾರಂಭವಾಗಿರುವ ಹಾಲು ಶೇಖರಣಾ ಕೇಂದ್ರವನ್ನು ರೈತರಿಂದ ಹಾಲು ಪಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸಾಯದೊಂದಿಗೆ ರೈತರ ಜೀವನಾಡಿಯಾದ ಹೈನುಗಾರಿಕೆಯಿಂದ ನೆಮ್ಮದಿಯ ಬದುಕು ರೂಪಿಸಿಕೊಳ್ಳಬಹುದು ಪ್ರತಿಯೊಬ್ಬರೂ ವ್ಯವಸಾಯದೊಂದಿಗೆ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುವಂತೆ ಕೋರಿದರು.
ಹಾಲು ಒಕ್ಕೂಟದ ಜಿಲ್ಲಾ ಪ್ರಭಾರ ಉಪ ವ್ಯವಸ್ಥಾಪಕ ಹನುಮಂತರಾಜು ಮಾತನಾಡಿ ಆಹಾರ ಕಲಬೆರೆಕೆಯಾಗದಂತೆ ಯಾವ ರೀತಿ ಎಚ್ಚರ ವಹಿಸುತ್ತೇವೆಯೋ ಅದೇ ರೀತಿ ಹಾಲು ಕಲಬೆರಕೆಯಾಗದಂತೆ ಎಚ್ಚರವಹಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ ಅವರು ರೈತರು ತಮ್ಮ ರಾಸುಗಳಿಗೆ ಕಾಲ ಕಾಲಕ್ಕೆ ವ್ಯಾಕ್ಸನ್ ಹಾಕಿಸುವ ಮೂಲಕ ರಾಸುಗಳನ್ನು ಕಾಪಾಡಿಕೊಳ್ಳ ಬೇಕು ಹಾಗೂ ಎಲ್ಲಾ ಹೈನೋದ್ಯಮಿಗಳು ತಮ್ಮ ರಾಸುಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಕುನಿತಿಮ್ಮನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರಂಗಧಾಮಯ್ಯ, ಹಾಲು ಒಕ್ಕೂಟದ ತಾಲೂಕು ವಿಸ್ತರಣಾಧಿಕಾರಿ ಟಿ.ಆರ್. ಪುಷ್ಪಲತಾ ಮಾತನಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವಿಜಯಶಂಕರ್, ಗ್ರಾ.ಪಂ.ಅಧ್ಯಕ್ಷ ನಾಗಮಣಿ, ಉಪಾಧ್ಯಕ್ಷ ಕಾಳಿಚರಣ್, ಮಾಜಿ ಗ್ರಾ.ಪಂ.ಅಧ್ಯಕ್ಷ ರಾಜಮ್ಮ ಕೆಂಪರಾಮಯ್ಯ, ಅರುಣ್ ಸೇರಿದಂತೆ ಹಾಲು ಉತ್ಪದನಾ ಕೇಂದ್ರದ ನಿರ್ದೇಶಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

