ತುಮಕೂರು

ಜೀವ, ಜೀವನ ಎರಡಕ್ಕೂ ಹೆಚ್ಚಿನ ಬೆಲೆ

Published On :

ಕನ್ನಡಪ್ರಭ ವಾರ್ತೆ, ತುಮಕೂರು, ಜ.1
ಜೀವ ಮತ್ತು ಜೀವನ ಎರಡಕ್ಕೂ ಹೆಚ್ಚಿನ ಬೆಲೆಯಿದ್ದು, ಅವುಗಳನ್ನು ಉಳಿಸಿಕೊಳ್ಳಲು ನಾವುಗಳು ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ತಿಳಿಸಿದ್ದಾರೆ. ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ತ್ಯಾಗಟೂರು ಗ್ರಾಮದಲ್ಲಿ ಏರ್ಪಡಿಸಿದ್ದ 59ನೇ ವರ್ಷದ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಇಂದಿನ ಯುವಜನತೆ ಸಣ್ಣ ಪುಟ್ಟ ವಿಷಯಗಳಿಗೆ ಜೀವಕ್ಕೆ ಹಾನಿ ಮಾಡಿಕೊಳ್ಳುತ್ತಾರೆ.ಇದು ತಪ್ಪಬೇಕು ಎಂದರು. ಅನಾದಿ ಕಾಲದಿಂದಲೂ ಈ ಗ್ರಾಮದಲ್ಲಿ ಉತ್ಸವಗಳನ್ನು ಊರಿನ ಎಲ್ಲಾ ವರ್ಗಗಳ ಜನರು ಒಗ್ಗೂಡಿ ಆಚರಿಸಿಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ. ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತೀಕಗಳಾಗಿವೆ. ಜನರಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಲು ಸಾಧ್ಯವಾಗುತ್ತದೆ. ಸಂಸದರು ಮುಂದಿನ ದಿನಗಳಲ್ಲಿ ನಿರಂತರ ವಿದ್ಯುತ್ ಅನ್ನು ಜಿಲ್ಲೆಗೆ ದೊರೆಯಲಿದೆ ಎಂಬುದಾಗಿ ತಿಳಿಸಿದ್ದು, ನಿಜಕ್ಕೂ ಇದು ಸಂತಸ ಪಡುವ ವಿಚಾರವಾಗಿದೆ ಎಂದು ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಹೇಮಾವತಿ ನೀರು ಈ ಭಾಗದಲ್ಲಿ ಹರಿಯುವುದರಿಂದ ಬೇರೆ ಕಡೆಗಳಿಗೆ ಹೊಲಿಕೆ ಮಾಡಿದರೆ ಈ ಭಾಗದ ರೈತರು ತೋಟ, ತುಡಿಕೆಗಳನ್ನು ಮಾಡಿ ಸಂವೃದ್ದಿಯಾಗಿದ್ದಾರೆ.ಕಳೆದ ನಲವತ್ತು ವರ್ಷಗಳಿಂದ ಈ ಗ್ರಾಮದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು ಅತ್ಯಂತ ಸಂಪ್ರದಾಯ ಬದ್ಧವಾಗಿ ದೇವರ ಉತ್ಸವ, ಹಬ್ಬ ಹರಿದಿನಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.
ಗ್ರಾಮದ ದೇವರಾದ ಗಣೇಶ್ ಮತ್ತು ಅಂಜನೇಯ ಇಬ್ಬರು ಬ್ರಹ್ಮಚಾರಿಗಳು. ಈರ್ವರಿಗೂ ಸಮಾನವಾದ ಪೂಜೆ ಇಲ್ಲಿ ನಡೆಯುತ್ತಿದೆ. ಗಣೇಶ್ ಉತ್ತರಭಾರತದಲ್ಲಿ ದೇವರಾದರೂ ದಕ್ಷಿಣ ಭಾರತದಲ್ಲಿ ಅಗ್ರಪೂಜೆಯಿದೆ. ಅದೇ ರೀತಿ ಹನುಮ ದಕ್ಷಿಣಭಾರತದಲ್ಲಿ ಹುಟ್ಟಿದರೂ ಆತನಿಗೆ ಉತ್ತರಭಾರತದಲ್ಲಿ ವಿಶೇಷ ಸ್ಥಾನಮಾನವಿದೆ.ಇದು ಭಾವೈಕ್ಯತೆಯ ಪ್ರತೀಕ ಎಂದು  ನುಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಶತಾಯುಷಿ ಪಟೇಲ್ ಚನ್ನಬಸವೇಗೌಡ ಮತ್ತು ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ನಟರಾಜು ಅವರನ್ನು ಸನ್ಮಾನಿಸಲಾಯಿತು. ಗ್ರಾಮದ ಪ್ರತಿಭಾವಂತ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ನಂತರ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.
ಟಿ.ಎಸ್. ಕಿಡಿಗಣ್ಣಪ್ಪ, ಜಿ.ಎನ್. ಬೆಟ್ಟಸ್ವಾಮಿ, ಜಿ.ಪಂ.ಸದಸ್ಯ ಚಂದ್ರಶೇಖರ ಬಾಬು, ಚೇಳೂರು ಪಿ.ಎಸ್.ಐ ರವಿಕುಮಾರ್, ಗುಬ್ಬಿ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ವಿಜಯಕುಮಾರ್,ಮುಖಂಡರಾದ ವಿ.ಆರ್. ಶಿವಕುಮಾರ್, ಚಂದ್ರಶೇಖರ್ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.