ಉಪತಹಸೀಲ್ದಾರ್ ಮೇಲೆ ಹಲ್ಲೆಗೆ ಯತ್ನ
ಕುಣಿಗಲ್: ಉಪತಹಸೀಲ್ದಾರ್ ಮೇಲೆ ಕೆಲ ಪುಡಾರಿಗಳು ವಿನಾಕಾರಣ ಜಗಳ ತೆಗೆದು, ಹಲ್ಲೆಗೆ ಮುಂದಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಮೃತೂರು ನಾಡಕಚೇರಿಯ ಉಪತಹಸೀಲ್ದಾರ್ ನಟರಾಜ್, ತಮ್ಮ ಕಚೇರಿ ವ್ಯಾಪ್ತಿಯ ಗ್ರಾಮಲೆಕ್ಕಿಗರ ಸಭೆ ನಡೆಸುತ್ತಿದ್ದು, ಸಭೆ ನಡೆಸುವ ವೇಳೆಯಲ್ಲಿ ಸಭಾಂಗಣಕ್ಕೆ ಏಕಾಏಕಿ ನುಗ್ಗಿದ ರಾಜಕೀಯ ಪಕ್ಷವೊಂದರ ಪುಡಾರಿ ಮತ್ತಿತರೆ ನಾಲ್ವರು, ವಿನಾಕಾರಣ ಉಪತಹಸೀಲ್ದಾರ್ ಅವರೊಂದಿಗೆ ಮಾತಿನ ಚಕಮಕಿಗೆ ಇಳಿದು, ಅವಾಚ್ಯ ಶಬ್ದಗಳಿಂದ ನಿಂದಿಸಲು ಮುಂದಾದರು.
ದಿಢೀರ್ ಘಟನೆಯಿಂದ ವಿಚಲಿತರಾದ ಉಪತಹಸೀಲ್ದಾರ್, ಪುಡಾರಿಗಳ ಕ್ರಮವನ್ನು ಖಂಡಿಸಿದರು. ಇದರಿಂದ ಕೋಪಗೊಂಡ ಮುಖಂಡರು ಉಪತಹಸೀಲ್ದಾರ್ ಮೇಲೆ ಹಲ್ಲೆಗೆ ಮುಂದಾದರು. ಸ್ಥಳದಲ್ಲಿದ್ದ ಇತರೆ ಗ್ರಾಮಸ್ಥರು, ಗ್ರಾಮಲೆಕ್ಕಿಗರು ಮರಿಪುಡಾರಿಗೆ ಛೀಮಾರಿ ಹಾಕಿ ಹೊರಕಳಿಸಿದರು. ಘಟನೆ ಬಗ್ಗೆ ಉಪತಹಸೀಲ್ದಾರ್ ನಟರಾಜ್, ಗುರುವಾರ ತಹಸೀಲ್ದಾರ್ ಪುಟ್ಟನರಸಯ್ಯನವರಿಗೆ ದೂರು ನೀಡಿದ ಮೇರೆಗೆ,
ತಹಸೀಲ್ದಾರ್ ಪುಟ್ಟನರಸಯ್ಯ , ಅಮೃತೂರಿಗೆ ಭೇಟಿ ನೀಡಿ ಪರಿಶೀಲಿಸಿದರು. ಪುಡಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಕರ್ತವ್ಯ ನಿರತ ಯಾವುದೇ ಸಿಬ್ಬಂದಿಗಳ ಕರ್ತವ್ಯಕ್ಕೆ ವಿನಾಕಾರಣ ಅಡ್ಡಿಪಡಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿರುವ ಅವರು, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಘಟನೆಯಿಂದ ವಿಚಲಿತರಾಗಿರುವ ಉಪತಹಸೀಲ್ದಾರ್ ನಟರಾಜ್, ತಮಗೆ ಸೂಕ್ತ ರಕ್ಷಣೆ ಕಲ್ಪಿಸುವ ಹೊರತು ತಾವು ಅಮೃತೂರಿನಲ್ಲಿ ಕೆಲಸ ನಿರ್ವಹಿಸಲಾಗದು ಎಂದು ರಜೆ ಮೇಲೆ ತೆರಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

