ತುಮಕೂರು

ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಆಗ್ರಹ

Published On :

ತುಮಕೂರು: ಗ್ಯಾಸ್ ಮತ್ತು ಇತರೆ ವಸ್ತುಗಳ ದರ ಹೆಚ್ಚಳದ ಹಿನ್ನೆಲೆಯಲ್ಲಿ ಆಟೋ ಪ್ರಯಾಣದರ ಹೆಚ್ಚಿಸುವಂತೆ ಅಖಿಲ ಕರ್ನಾಟಕ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯಗೆ ಮನವಿ ಸಲ್ಲಿಸಿತು.
1 ತಿಂಗಳ ಅವಧಿಯಲ್ಲಿ ಏಕಾಏಕಿ 2 ಬಾರಿ ಗ್ಯಾಸ್‌ದರ ಹೆಚ್ಚಳವಾಗಿದೆ. 1 ಲೀಟರ್‌ಗೆ 20 ರು. ನಷ್ಟು ಹೆಚ್ಚಾಗಿದ್ದು ಆಟೋ ಚಾಲಕರು ಆತಂಕಗೊಂಡಿದ್ದಾರೆ ಎಂದು ಜಿಲ್ಲಾಧ್ಯಕ್ಷ ವಿ. ಪ್ರತಾಪ್ ತಿಳಿಸಿದ್ದಾರೆ.
ಗ್ಯಾಸ್ ಜತೆಗೆ ಆಯಿಲ್ ಮತ್ತು ಆಟೋದ ಬಿಡಿಭಾಗಗಳು, ಆಹಾರ ಪದಾರ್ಥಗಳು ದಿನೇ ದಿನೇ ಗಗನಕ್ಕೇರಿದ್ದು ಆಟೋ ಚಾಲಕರ ಜೀವನ ದುಸ್ತರಗೊಳ್ಳುತ್ತಿದೆ. ಮನೆ ಬಾಡಿಗೆ, ದಿನ ಬಳಕೆ ವಸ್ತುಗಳು ಸಹ ಮೂರು ಪಟ್ಟು ಹೆಚ್ಚಳಗೊಂಡಿದೆ. ಇದೇ ರೀತಿ ಮುಂದುವರೆದರೆ ಆಟೋ ಚಾಲಕರ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಬಂದೊದಗುತ್ತದೆ. ಆದ್ದರಿಂದ ಸಾರಿಗೆ ಪ್ರಾಧಿಕಾರ ತುರ್ತು ಸಭೆ ಕರೆದು ಆಟೋ ಪ್ರಯಾಣದರ ಕನಿಷ್ಠ 1.8 ಮೀಟರ್‌ಗೆ 30 ರು. ಹಾಗೂ ಪ್ರತಿ ಕಿ.ಮೀಗೆ 15 ರು. ನಂತೆ ಹೆಚ್ಚಳಗೊಳಿಸಿ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದ್ದಾರೆ.
ಒಂದು ವೇಳೆ ಹೆಚ್ಚಳ ಮಾಡದೇ ಇದ್ದರೆ ಬೃಹತ್ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಖಂಡನೆ: ದಿನೇ ದಿನೇ ಆಯಿಲ್ ಮತ್ತು ಗ್ಯಾಸ್ ದರ ಹೆಚ್ಚಳ ಮಾಡುತ್ತಿರುವುದಕ್ಕೆ ಸಂಘಟನೆ ಖಂಡಿಸುತ್ತದೆ ಎಂದು ನಗರಾಧ್ಯಕ್ಷ ಹನುಮಂತಪುರ ಬಾಬು ತಿಳಿಸಿದ್ದಾರೆ.
ಸಾರಿಗೆ ಇಲಾಖೆ ಆಟೋರಿಕ್ಷಾಗಳಿಗೆ ಗ್ಯಾಸ್ ಕಿಟ್ ಅಳವಡಿಸುವುದನ್ನು ಕಡ್ಡಾಯ ಮಾಡಿರುವುದಕ್ಕೂ ವಿರೋಧ ವ್ಯಕ್ತವಾಗಿದೆ. ಸಭೆಯ ನೇತೃತ್ವವನ್ನು ವಿ. ಪ್ರತಾಪ್, ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ನಗರಾಧ್ಯಕ್ಷ ಬಾಬು ಹನುಮಂತಪುರ, ಜಿಲ್ಲಾ ಉಪಾಧ್ಯಕ್ಷ ಇಮ್ತಿಯಾಜ್ ಪಾಷ, ಉಪಾಧ್ಯಕ್ಷ ಲಿಂಗಣ್ಣ, ಪ್ರಕಾಶ್, ತಿಪ್ಪೇಸ್ವಾಮಿ, ರಾಮಸ್ವಾಮಿ, ಪರಮೇಶ್, ಅಕ್ರಂ, ಜಗದೀಶ್, ವೆಂಕಟೇಶ್ ಮುಂತಾದವರು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.