ತುಮಕೂರು

ತುರುವೇಕೆರೆಯಲ್ಲಿ ಆಮ್ ಆದ್ಮಿ ಹವಾ...

Published On :

ತುರುವೇಕೆರೆ: ಎಎಪಿ ದೆಹಲಿ ಗದ್ದುಗೆ ಹಿಡಿಯುತ್ತಲೇ ರಾಜ್ಯದಲ್ಲೂ ಆಮ್ ಆದ್ಮಿ ಪಕ್ಷಕ್ಕೆ ಜನ ಬೆಂಬಲ ಪ್ರಾರಂಭವಾಗಿದೆ. ಕಳೆದ ಐದಾರು ದಿನಗಳ ಹಿಂದೆಯಷ್ಟೇ ತುಮಕೂರಿನಲ್ಲಿ ಸಭೆ ಸೇರಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಅಲ್ಲಿ ಸಂಘಟನೆ ಮಾಡಿ ಈಗ ತುರುವೇಕೆರೆಗೂ ಆಗಮಿಸಿದ್ದಾರೆ. ಎಎಪಿ ಜಿಲ್ಲಾ ಸಂಚಾಲಕ ನಾಗೇಶ್ ಸಭೆ ಸೇರಿದ ಕಾರ್ಯಕರ್ತರು ಎಎಪಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪಕ್ಷ ಸೇರುವ ಸಂಕಲ್ಪ ಮಾಡಿದರು. ಪಕ್ಷದ ಸಿದ್ಧಾಂತದಂತೆ ತಾವೆಲ್ಲರೂ ಭ್ರಷ್ಟಾಚಾರರ ವಿರುದ್ಧ ಸಮರ ಸಾರುವ ಮಾತುಗಳನಾಡಿದರು.  
ಗೂರಲ ಮಠದ ಕೃಷ್ಣಮೂರ್ತಿ, ನಾಯ್ಕನಘಟ್ಟದ ವಸಂತಕುಮಾರ್, ಮಂಜೇಶ್, ಗಿರೀಶ್, ಛಾಯಾಕುಮಾರ್, ರೇಣುಕಾ ಸ್ವಾಮಿ, ಕೃಷ್ಣಪ್ಪ, ಸೋಮೇನಹಳ್ಳಿ ವಸಂತ್, ಆಲ್ಬೂರಿನ ಪುಟ್ಟೇಗೌಡ, ಸೋಮೇನಹಳ್ಳಿ ಸುರೇಶ್, ರಾಜೇಂದ್ರ, ಧರಣೀಶ್, ಮಾಚೇನಹಳ್ಳಿ ದೇವರಾಜು ಭಾಗವಹಿಸಿದ್ದರು.
ಇಂದಿನಿಂದ ಸದಸ್ಯತ್ವ ನೋಂದಣಿ: ಇದೇ 10 ರಿಂದ 16 ರ ವರೆಗೆ ಉಚಿತವಾಗಿ ಸದಸ್ಯತ್ವ ನೋಂದಣಿ ಕಾರ್ಯಕ್ರಮವನ್ನು ಎಎಪಿ ಪಕ್ಷ ಹಮ್ಮಿಕೊಂಡಿದ್ದು, ತಾಲೂಕಿನ ಯುವಕರು ಹಾಗೂ ಸಾರ್ವಜನಿಕರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಭ್ರಷ್ಟಚಾರ ಮುಕ್ತ ತಾಲ್ಲೂಕನ್ನು ಮಾಡಲು ಸಹಕರಿಸಬೇಕು ಎಂದು ತಾಲೂಕು ಸಂಚಾಲಕ ಸೋಮೇನಹಳ್ಳಿ ಬಿ.ರಮೇಶ್ ತಿಳಿಸಿದ್ದಾರೆ. ಪ್ರಥಮ ದಿನವೇ 10 ಶುಲ್ಕ ನೀಡಿ ನೂರಾರು ಮಂದಿ ಸದಸ್ಯತ್ವ ಪಡೆದುಕೊಂಡರು. ತಾಲೂಕಿನಲ್ಲಿ ಕನಿಷ್ಠ 20 ಸಾವಿರ ಸದಸ್ಯತ್ವ ಮಾಡುವ ಮೂಲಕ ಪಕ್ಷವನ್ನು ಸಂಘಟಿಸಲು ತಮ್ಮ ಯುವಕರ ತಂಡ ಮುಂದಾಗಲಿದೆ ಎಂದು ರಮೇಶ್ ಹೇಳಿದರು.
ಆಮ್ ಆದ್ಮಿ ಪಕ್ಷದ ಸದಸ್ಯತ್ವಕ್ಕೆ ಹಾಗೂ ಹೆಚ್ಚಿನ ವಿವರಗಳಿಗೆ ಸೋಮೇನಹಳ್ಳಿ ರಮೇಶ್, 95383-39950, ನಾಯ್ಕನಘಟ್ಟ ವಸಂತ್ ಕುಮಾರ್ 84530-44236 ಹಾಗೂ ಗೂರಲಮಠ ಕೃಷ್ಣಮೂರ್ತಿ 97394-98721ಗೆ ಕರೆ ಮಾಡಲು ವಿನಂತಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.