ನೀರಾವರಿಗೆ ಶ್ರಮಿಸಿ: ಮಠಾಧೀಶರ ಕರೆ
ಕ.ಪ್ರ.ವಾರ್ತೆ , ಚಿಕ್ಕನಾಯಕನಹಳ್ಳಿ , ಜ.13
ಮಾನವ ಜಗತ್ತಿಗೆ ಬರುವಾಗ ಅಳುತ್ತಾನೆ, ಆದರೆ ಜಗತ್ತು ನಗುತ್ತದೆ. ಇದೇ ಸೃಷ್ಟಿಯ ವೈಚಿತ್ರವಾಗಿದೆ ಎಂದು ತಿಪಟೂರು ಷಡಕ್ಷರಿ ಮಠದ ಶ್ರೀರುದ್ರಮುನಿ ಮಹಾಸ್ವಾಮೀಜಿ ನುಡಿದರು.
ಸೋಮವಾರ ತಾಲೂಕಿನ ತಮ್ಮಡೀಹಳ್ಳಿ ವಿರಕ್ತಮಠಾಧ್ಯಕ್ಷರಾದ ಲಿಂಗೈಕ್ಯ ಶ್ರೀಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮೀಜಿಗಳ 5ನೇ ಸಂಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಆದ್ದರಿಂದ ಶರಣರಿಗೆ ಸಾವು ಸಂತೋಷ ತರಬೇಕು. ನಾವು ಗತಿಸಿದರು ಮಾಡಿದ ಪುಣ್ಯದ ಕೆಲಸಗಳಿಂದ ಜನ ನಮ್ಮನ್ನು ಸ್ಮರಿಸುವಂತೆ ಬದುಕಬೇಕು. ಮಾನವನ ಆಸೆಗೆ ಮಿತಿಯೆಂಬುದಿಲ್ಲ, ಸಾವು ಖಚಿತವೆಂಬುದು ಗೊತ್ತಿದ್ದರೂ ನಶ್ವರವಾದ ಜೀವನಕ್ಕೆ ಅತಿಯಾಸೆ ಪಡುತ್ತಾ,ನೆರೆಹೊರೆಯವರ ನೆಮ್ಮದಿಯನ್ನು ಹಾಳುಮಾಡುತ್ತಾನೆ. ಗುರುಪರಂಪರೆಯಲ್ಲಿ ತಮ್ಮಡೀಹಳ್ಳಿ ಮಠಕ್ಕೆ ವಿಶೇಷ ಸ್ಥಾನಮಾನಗಳಿದ್ದು, ಅದನ್ನು ಹಿರಿಯ ಶ್ರೀಗಳು ತಮ್ಮ ಸೇವಾಕಾರ್ಯದಿಂದ ಮತ್ತಷ್ಟು ಹೆಚ್ಚಿಸಿ ಹೋಗಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಹೊಣೆ ಭಕ್ತರಮೇಲಿದೆ ಎಂದರು.
ನಿಷ್ಕಲ್ಮಕ ಸೇವೆ: ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಜೆ.ಸಿ. ಮಾಧುಸ್ವಾಮಿಯವರು ಪವಿತ್ರವಾದ ಮಾನವ ಜನ್ಮದಲ್ಲಿ ಹುಟ್ಟಿದ ಮೇಲೆ ನಾವು ಬೇರೆಯವರಿಗಾಗಿ ಬದುಕಬೇಕು. ಅದು ಸ್ಮರಣೀಯ, ಹಿರಿಯ ಶ್ರೀಗಳನ್ನು ಇಂದು ಸಾವಿರಾರು ಜನ ಭಕ್ತರು ಸ್ಮರಿಸುವುದು ಅವರ ಸರಳತೆ ಮತ್ತು ನಿಷ್ಕಲ್ಮಶ ಸೇವೆಗಾಗಿ.
ಭಗವಂತ ಎಲ್ಲರಿಗೂ ಶಕ್ತಿಕೊಟ್ಟಿದ್ದಾನೆ. ಆದರೆ ಅದನ್ನು ನಾವು ಸದುಪಯೋಗಪಡಿಸಿಕೊಳ್ಳುವುದರಲ್ಲಿದೆ. ನಮ್ಮ ಹಿರಿಯರು ತೀರ್ಥಯಾತ್ರೆಗಳಿಗೆ ತೆರಳುವಾಗ ಕುಟುಂಬದ ಸದಸ್ಯರಿಗೆ ಮನೆಮಠ ಜೋಪಾನ ಎಂದು ಎಚ್ಚರಿಕೆ ನೀಡುತ್ತಿದ್ದರು. ಅದರ ಅರ್ಥ ಕೊನೆಕಾಲದಲ್ಲಿ ಎಲ್ಲರೂ ಕೈಬಿಟ್ಟರು ಮಠಗಳು ನಮಗೆ ಆಶ್ರಯ ಕೊಡುತ್ತವೆಂಬ ನಂಬಿಕೆಯಿಂದ.
ಮನುಷ್ಯ ಎಲ್ಲವನ್ನು ಸೃಷ್ಟಿಸಿ ಅನುಭವಿಸುತ್ತಾನೆ, ಕೊನೆಗೆ ಅದರಿಂದಲೇ ನೆಮ್ಮದಿಯನ್ನು ತನ್ನ ದುರಾಸೆಯಿಂದ ಹಾಳುಮಾಡಕೊಳ್ಳುತ್ತಾನೆ. ನಾವು ಯಾವುದೇ ಸಾಧನೆ ಮಾಡಲು ತ್ಯಾಗದಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸದ ಜಿ.ಎಸ್.ಬಸವರಾಜು ವಹಿಸಿದ್ದರು. ಕುಪ್ಪೂರು ಗದ್ದಿಗೆ ಮಠದ ಡಾ. ಯತೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಗೋಡೇಕೆರೆ ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ, ಗುರುಕುಲ ಶ್ರೀಇಮ್ಮಡಿಕರಿಬಸವ ದೇಶೀಕೇಂದ್ರ ಸ್ವಾಮೀಜಿ, ಉಜ್ಜಯನೀಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀಕಾರದ ವೀರಬಸವ ಮಹಾಸ್ವಾಮೀಜಿ ಮುಂತಾದವರಿದ್ದರು. ಮಾಜಿ ಶಾಸಕ ಕೆ.ಎಸ್. ಕಿರಣ್ಕುಮಾರ್, ಜಿಪಂ ಸದಸ್ಯ ಎಚ್.ಬಿ. ಪಂಚಾಕ್ಷರಿ, ಲೋಕೇಶ್ವರ, ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

