ರೇಲ್ವೆ ಸೇತುವೆ ಕಾಮಗಾರಿಗೆ ಕಾಲಮಿತಿ ನಿಗದಿಗೊಳಿಸಿ
ತುಮಕೂರು: ತುಮಕೂರು ನಗರದ ಉಪ್ಪಾರಹಳ್ಳಿ ರೈಲ್ವೆ ಮೇಲುಸೇತುವೆ ಮತ್ತು ಶೆಟ್ಟಿಹಳ್ಳಿ ರೈಲ್ವೆ ಕೆಳಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾಲಮಿತಿ ನಿಗದಿಗೊಳಿಸಲು ಜಿಲ್ಲಾಡಳಿತ ಮತ್ತು ನಗರಾಡಳಿತಕ್ಕೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.
ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮೇಯರ್ ಮತ್ತು ಕಾರ್ಪೊರೇಟರ್‌ಗಳು ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರಿಗಳಿಗೆ ನೈತಿಕ ಬೆಂಬಲ ನೀಡಲು ಮನವಿ ಮಾಡಿದ್ದಾರೆ.
ಉಪ್ಪಾರಹಳ್ಳಿ ರೇಲ್ವೆ ಮೇಲುಸೇತುವೆ: ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಮಾರು 34 ಕೋಟಿ 67 ಲಕ್ಷವನ್ನು ಖರ್ಚು ಮಾಡಲಾಗಿದೆ. ಪ್ರಸ್ತುತ 11 ಕೋಟಿ ಹಣದ ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖೆಗಳು ಅಗತ್ಯ ಕ್ರಮ ಕೈಗೊಂಡಿಲ್ಲ, ಯೋಜನೆಗಳ ರೂಪುರೇಷೆಗಳು ಸಮರ್ಪಕವಾಗಿಲ್ಲ. ರೇಲ್ವೆ ಮೇಲುಸೇತುವೆಯ ಎರಡೂ ಕಡೆ ಇಳಿಯುವಾಗ ಪ್ರತಿದಿನವೂ ಅಪಘಾತಗಳು ಸಂಭವಿಸುತ್ತಿವೆ. ವಾಹನ ಹೆಚ್ಚಿಗೆ ಆದಂತೆ ಜನತೆಗೆ ತೊಂದರೆ ಆಗುವುದು ಖಚಿತ. ಆದ್ದರಿಂದ ಈ ಭಾಗದಲ್ಲಿ ವ್ಯವಸ್ಥಿತವಾದ ತಾಂತ್ರಿಕತೆಯಿಂದ ವೃತ್ತಗಳು ಅಥವಾ ಮೀಡಿಯನ್ ಹಾಕಬೇಕಿದೆ. ಭದ್ರಮ್ಮ ವೃತ್ತದವರೆಗೆ ಮತ್ತು ವಿಜಯನಗರದ ಮಾರ್ಗವಾಗಿ ನಿರ್ಮಿಸುವ ನಾಲ್ಕು ಪಥದ ರಸ್ತೆಗೆ ಭೂಸ್ವಾದಿನ ಪ್ರಕ್ರಿಯೆ ಚುರುಕುಗೊಳ್ಳಬೇಕಿದೆ. ಇರುವ ಮರಗಳನ್ನು ಉಳಿಸಿಕೊಂಡು ರಸ್ತೆ ನಿರ್ಮಿಸಬೇಕಿದೆ ಎಂದರು.
ಶೆಟ್ಟಿಹಳ್ಳಿ ರೇಲ್ವೆ ಕೆಳಸೇತುವೆ: ಸುಮಾರು 8 ಕೋಟಿ 50 ಲಕ್ಷದ ಕಾಮಗಾರಿಗೆ ಚಾಲನೆ ನೀಡಿದ್ದರೂ ಭೂಸ್ವಾದಿನ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಯೋಜನೆ ನೆನೆಗುದಿಗೆ ಬೀಳುವ ಎಲ್ಲಾ ಲಕ್ಷಣಗಳು ಚಾಲ್ತಿಯಲ್ಲಿವೆ. ಕಂದಾಯ ಇಲಾಖೆ ಮತ್ತು ಟೂಡಾ, ಮಹಾನಗರಪಾಲಿಕೆಯ ದಾಖಲೆಗಳು ವಿಭಿನ್ನವಾಗಿವೆ. ಒಂದೊಂದು ದಾಖಲೆಯ ಹಿನ್ನೆಲೆಯು ಪ್ರಶ್ನಾರ್ಥಕವಾಗಿವೆ ಎಂದಿದ್ದಾರೆ.
ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿಯವರು ಈ ದಾಖಲೆಗಳ ಸಂಪೂರ್ಣ ಅಧ್ಯಯನ ಮಾಡಿ ಅಗತ್ಯ ಕ್ರಮ ಕೈಗೊಳ್ಳುವ ಹೊಣೆಗಾರಿಕೆ ಹೊತ್ತಿದ್ದಾರೆ. ಕೇವಲ 23 ಸ್ವತ್ತುಗಳಿಗೆ ಪರಿಹಾರ ನೀಡಲು, ಆದ್ಯತೆ ಮೇರೆಗೆ ನಿವೇಶನ ನೀಡಿ ಸ್ವಾಧೀನಕ್ಕೆ ಪಡೆಯುವುದು ನಗರಾಡಳಿತದ ಜವಾಬ್ದಾರಿ ಎಂದಿದ್ದಾರೆ.
ಸರ್ಕಾರಿ ಜಾಗಗಳಿಗೆ ಬೋಗಸ್ ಖಾತೆ ಮಾಡಿದ್ದಲ್ಲಿ ಸ್ವತ್ತುದಾರರು ಅಗತ್ಯ ದಾಖಲೆ ನೀಡಿದಲ್ಲಿ 2013 ರ ಭೂಸ್ವಾಧೀನ ನಿಯಮದ ಪ್ರಕಾರ ಪರಿಹಾರ ನೀಡುವುದಾಗಿ ಹಾಗೂ ಉಪ್ಪಾರಹಳ್ಳಿ ರೇಲ್ವೆ ಮೇಲುಸೇತುವೆ ಭೂವಂಚಿತರಿಗೆ ನೀಡಿರುವ ಮಾದರಿಯಲ್ಲಿ ನಿವೇಶನ ನೀಡುವ ಭರವಸೆಯೊಂದಿಗೆ ಅಗತ್ಯ ಜಮೀನನ್ನು ಸ್ವಾಧೀನಕ್ಕೆ ಪಡೆಯಲು ಕಾನೂನು ರೀತಿಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಜಿ.ಎಸ್. ಬಸವರಾಜು, ಡಾ. ರಫೀಕ್ ಅಹಮದ್, ಡಾ. ಎಂ.ಆರ್. ಹುಲಿನಾಯ್ಕರ್, ಮೇಯರ್ ಗೀತಾ
ರುದ್ರೇಶ್ ಮತ್ತು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಮತ್ತು ಭೂವಂಚಿತರ ಸಭೆ ನಡೆಸಿ ಸಾರ್ವಜನಿಕರಿಗೆ ಸ್ಪಷ್ಟ ಅಭಿಪ್ರಾಯ ಪ್ರಕಟಿಸಲು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

