ತುಮಕೂರು

ಗ್ರಂಥಾಲಯದ ಸೌಲಭ್ಯ ಅಗತ್ಯ: ಡಾ.ಬಿ.ಡಿ.ಕುಂಬಾರ

Published On :

ತಿಪಟೂರು: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಗ್ರಂಥಾಲಯ ಸೇವೆಗಳು ಶಾಲಾ-ಕಾಲೇಜುಗಳಲ್ಲಿ ಸಮರ್ಪಕವಾಗಿ ಬಳಕೆಯಾಗುತ್ತಿದ್ದು, ಇದನ್ನು ಹೆಚ್ಚು ಬಳಸಲು ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರುಗಳಿಗೆ ತರಬೇತಿ ಅಗತ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದ ಮುಖ್ಯಸ್ಥ ಡಾ.ಬಿ.ಡಿ.ಕುಂಬಾರ ತಿಳಿಸಿದರು.
ಪಟ್ಟಣದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಪಾತ್ರ ಮತ್ತು ಮಹತ್ವದ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮುದ್ರಣ ಪುಸ್ತಕಗಳ ಜೊತೆ ಈ-ಬುಕ್ ಕೂಡಾ ಮಹತ್ವವನ್ನು ಪಡೆದುಕೊಂಡಿದ್ದು, ಕಾಲೇಜುಗಳಲ್ಲಿ ಗ್ರಂಥಾಲಯ ಸೌಲಭ್ಯ, ಸೌಕರ್ಯ ಚೆನ್ನಾಗಿದ್ದರೆ ಮಾತ್ರ ಕಾಲೇಜಿನ ಶೈಕ್ಷಣಿಕ ವಾತಾವರಣ ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳು ಗ್ರಂಥಾಲಯದ ಉಪಯೋಗವನ್ನು ಪಡೆದುಕೊಳ್ಳುವ ಮೂಲಕ ತಮ್ಮ ಗುರಿ ಮುಟ್ಟಬೇಕೆಂದು ಕರೆ ನೀಡಿದರು.
ಗ್ರಂಥಪಾಲಕ ಡಾ.ಮಲ್ಲಿಕಾರ್ಜುನ ಬಾಚಲಾಪುರ ಹಾಗೂ ಡಾ.ಗುರುರಾಜ ಹಡಗಲಿ ಗ್ರಂಥಾಲಯದ ಉಪಯೋಗ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಎಸ್.ಎಂ. ಶಶಿಧರ ವಹಿಸಿದ್ದರು. ಸಮ್ಮೇಳನದಲ್ಲಿ ಭಾಗವಹಿಸಿದ ಅತ್ಯುತ್ತಮವಾದ ಲೇಖನಗಳಿಗೆ ಪ್ರಶಸ್ತಿ ನೀಡಲಾಯಿತು.
ಕೊಳವೆಬಾವಿ ಅಕ್ರಮ: ತನಿಖೆಗೆ ಜೆಡಿಎಸ್ ಆಗ್ರಹ
ಪಾವಗಡ: ಕೊಳವೆ ಬಾವಿ ಕೊರೆಸುವಲ್ಲಿ ಬಹುತೇಕ ತಾಲೂಕಿನಾದ್ಯಂತ ಭ್ರಷ್ಟಚಾರ ನಡೆದಿದ್ದು ಸಮಗ್ರ ತನಿಖೆ ನಡೆಸುವಂತೆ ರಾಜ್ಯ ವಿದ್ಯಾರ್ಥಿ ಜನತಾ ದಳದ ಮುಖಂಡ ರಮೇಶ್ ಒತ್ತಾಯಿಸಿದ್ದಾರೆ. 2012-13ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಲ್ಲಿ ತಾಲೂಕಿನದ್ಯಂತ ಭಾರೀ ಭ್ರಷ್ಟಚಾರ ನಡೆದಿದ್ದು ಕೊಳವೆ ಬಾವಿ ಕೊರೆಸುವ ಗುತ್ತಿಗೆ ಪಡೆದ ಗುತ್ತಿಗೆದಾರರ ಶಾಮೀಲಾತಿಯಿಂದ ಇಲ್ಲಿನ ಬಹುತೇಕ ಅರ್ಹ ಬಡ ಫಲಾನುಭವಿಗಳನ್ನು ವಂಚಿಸಿ ದೊಡ್ಡ ರೈತರ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆಂದು ಅವರು ಆರೋಪಿಸಿದ್ದಾರೆ. ಜಿಲ್ಲಾ ಎಸ್‌ಸಿ, ಎಸ್‌ಟಿ ನಿಗಮದ ವ್ಯವಸ್ಥಾಪಕ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಯೋಜನೆಯ ಸಮಗ್ರ ತನಿಖೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ಹುಳಿಯಾರಲ್ಲಿ ಸಂಭ್ರಮದ ಈದ್
ಹುಳಿಯಾರು: ಮಹಮ್ಮದ್ ಪೈಗಂಬರರ ಜನ್ಮದಿನದ ನೆನಪಿಗಾಗಿ ಆಚರಿಕೊಂಡು ಬರುತ್ತಿರುವ ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದ ಮುಸ್ಲಿಂ ಸಮುದಾಯ ಜಾಮೀಯಾ ಮಸೀದಿ, ನೂರುಲ್ಲಾ ಮಸೀದಿ, ಮದೀನಾ ಮಸೀದಿಗಳಲ್ಲಿ  ಒಟ್ಟಾಗಿ ಸೇರಿ ಪ್ರವಚನ ಹಾಗೂ ಪ್ರಾರ್ಥನೆಯನ್ನು ಸಲ್ಲಿಸಿದರು. ಸಡಗರ ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನು ಅಚರಿಸಿದರು.
 ಹಬ್ಬದಂಗವಾಗಿ ಮಸೀದಿಗಳಲ್ಲಿ ಪ್ರಾಥನೆ ಸಲ್ಲಿಸಿ ನಂತರ ಮಹಮ್ಮದ್ ಪೈಗಂಬರರ ಬಗ್ಗೆ, ಜಯಘೋಷಗಳನ್ನು ಕೂಗುತ್ತಾ ಪಟ್ಟಣದ ಬಸ್ ನಿಲ್ದಾಣ, ರಾಜ್‌ಕುಮಾರ್ ರಸ್ತೆ, ರಾಂಗೋಪಾಲ್ ಸರ್ಕಲ್ ಸೇರಿದಂತೆ  ಪ್ರಮುಖ ಬೀದಿಗಳಲ್ಲಿ ವಾದ್ಯ ಪರಿಕರಗಳನ್ನು  ಬಾರಿಸುತ್ತಾ, ಬಾವುಟಗಳನ್ನು ಹಿಡಿದ ನೂರಾರು ಮಕ್ಕಳು, ಮುಖಂಡರು, ಯುವಕರು ಸೇರಿ ಮೆರವಣಿಗೆ ನಡೆಸಿದರು.
ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಹಬ್ಬದ ಶುಭಾಶಯವನ್ನು ಹಂಚಿಕೊಂಡರು.
ತುಮಕೂರಲ್ಲಿ...
ತುಮಕೂರು: ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಮಸೀದಿಯೊಂದರಲ್ಲಿ ಈದ್ ಮಿಲಾದ್ ಅಂಗವಾಗಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಶಾಸಕ ಕೆ.ಎನ್.ರಾಜಣ್ಣ ಭೇಟಿ ನೀಡಿ ಶುಭಕೋರಿದರು. ಈ ವೇಳೆ ಮಸೀದಿಯ ಗುರುಗಳಾದ ಮೌಲಾನಾ ವದೂದ್ ಕ್ವಾಜಾ, ವಿಶ್ವವಿದ್ಯಾಲಯದ ಕುಲಪತಿ ಡಾ.ಎ.ಎಚ್. ರಾಜಾಸಾಬ್, ಮಾಜಿ ಶಾಸಕ ಹಾಗೂ ಡಿಸಿಸಿ ಅಧ್ಯಕ್ಷ ಎಸ್. ಷಫಿ ಅಹಮದ್, ಶಾಸಕ ಡಾ.ರಫೀಕ್ ಅಹಮದ್, ಮುಸ್ಲಿಂ ಬಾಂಧವರಾದ ಆಪ್ತಾಬ್ ಅಹಮದ್, ಕೆ.ಜಿ.ಎನ್. ರಫೀಕ್, ನೂರುಲ್ಲಾ, ಡಾ. ನಯಾಜ್ ಮತ್ತಿತರರು ಉಪಸ್ಥಿತಿರಿದ್ದರು.
ಇಂದು ಸಾದ್ವಿ ಸರಸ್ವತಿ ನಾಟಕ
ತುಮಕೂರು: ಇಲ್ಲಿನ ಅಮರೇಶ್ವರ ವಿಜಯ ನಾಟಕ ಮಂಡಳಿಯಿಂದ ಜ.15 ರಂದು ರಾತ್ರಿ 7.30 ಕ್ಕೆ ಸ್ವಾಂದೇನಹಳ್ಳಿಯ ಗ್ರಾ.ಪಂ. ಮುಂಭಾಗ ಮಾರುತೇಶ್ ಮಾಂಡ್ರೆ ರಚಿಸಿರುವ ಸಾದ್ವಿ ಸರಸ್ವತಿ ನಾಟಕ ಪ್ರದರ್ಶನವಿದೆ. ಉದ್ಘಾಟನೆಯನ್ನು ಗ್ರಾ.ಪಂ. ಸದಸ್ಯ ಕೋದಂಡರಾಮಯ್ಯ ನೆರವೇರಿಸುವರು. ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಈರಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನರಸಿಂಹಮೂರ್ತಿ, ಅಲ್ಲಾಬಕಾಶ್, ವಸಂತಮ್ಮ, ಲಕ್ಷ್ಮೀನರಸಿಂಹಯ್ಯ, ಖೈರುನ್ನೀಸಾ ಬೇಗಂ ಇತರರು ಇರುವರು.
ಎಸ್ಸಿ, ಎಸ್ಟಿ ನೌಕರರ ಘಟಕ
ರಾಜ್ಯ ಎಸ್‌ಸಿ-ಎಸ್ಟಿ ನೌಕರರ ಪದಾಧಿಕಾರಿಗಳ ಸಭೆಯಲ್ಲಿ ತುಮಕೂರು ನಗರ ಘಟಕವನ್ನು ರಚಿಸಲಾಗಿದೆ. ಅಧ್ಯಕ್ಷರಾಗಿ ಬಿ.ಜೆ. ಜಯಶೀಲ, ಗೌರವ ಅಧ್ಯಕ್ಷರಾಗಿ ಪರಮೇಶ್ವರಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಎನ್. ಶಿವರಾಜ್, ಕಾರ್ಯಾಧ್ಯಕ್ಷರಾಗಿ ಡಿ.ಎಸ್. ಶಿವಸ್ವಾಮಿ, ಖಜಾಂಚಿಯಾಗಿ ಎ.ಎಸ್. ಲಕ್ಷ್ಮೀಕಾಂತ್, ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ ವಿ.ಟಿ, ನರಸಿಂಹಮೂರ್ತಿ, ಮಂಜುಳ, ಹನುಮಂತಯ್ಯ, ಲಕ್ಷ್ಮೀನರಸಪ್ಪ, ಸಹಕಾರ್ಯದರ್ಶಿಯಾಗಿ ಜಯರಾಮ್, ರಾಜಣ್ಣ, ಸೋಮರಾಜು, ಪರಮೇಶ್ವರಯ್ಯ, ಭುವನೇಶ್ವರಿ, ಸಂಘಟನಾ  ಕಾರ್ಯದರ್ಶಿಯಾಗಿ ಪುಟ್ಟಮರಿಯಪ್ಪ, ಗಿರೀಶ್, ಜಯಕುಮಾರ್, ಗೋವಿಂದರಾಜ್, ವಿನೋದಮ್ಮ, ವಿಭಾಗೀಯ ಕಾರ್ಯದರ್ಶಿಯಾಗಿ ನಟರಾಜು ಸಿ, ಕುಮಾರ್ ಎ, ನಟೇಶ್ ಎಂ.ವಿ, ಸೋಮಶೇಖರಯ್ಯ, ಶಿವಶಂಕರ್ ನೇಮಕಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.