ತುಮಕೂರು

ರಾಷ್ಟ್ರೀಯ ಖೋ ಖೋ ಪಂದ್ಯಕ್ಕೆ ಚಾಲನೆ

Published On :

ತುಮಕೂರು: ತುಮಕೂರಿನಲ್ಲಿ ಐದು ದಿವಸಗಳ ಕಾಲ ನಡೆಯಲಿರುವ 59ನೇ ಸ್ಕೂಲ್ ಗೇಮ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ 14 ವರ್ಷದೊಳಗಿನ ಬಾಲಕ, ಬಾಲಕಿಯರ ಖೋ ಖೋ ಪಂದ್ಯಾವಳಿಗೆ ಬುಧವಾರ ವಿದ್ಯುಕ್ತವಾಗಿ ಚಾಲನೆ ದೊರೆಯಿತು.
ವಿವಿಧ ರಾಜ್ಯಗಳ ನೂರಾರು ಬಾಲಕ ಬಾಲಕಿಯರು ಈ ಖೋ ಖೋ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರು ಬಲೂನ್ ಹಾರಿ ಬಿಡುವುದರ ಮೂಲಕ ಈ ಖೋ ಖೋ ಪಂದ್ಯಾವಳಿಗೆ ಚಾಲನೆ ನೀಡಿದರು.
ನಂತರ ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಮಾತನಾಡಿದ ಜಯಚಂದ್ರ ಕ್ರೀಡೆಗೆ ಜಾತಿ, ಭಾಷೆ, ಗಡಿಗಳನ್ನು ಮೀರು ವಿಶಿಷ್ಟ ಶಕ್ತಿ ಇದೆ. ಕ್ರೀಡೆ ಐಕ್ಯತೆಗೆ ಇನ್ನೊಂದು ಹೆಸರು. ಇಂತಹ ಕ್ರೀಡಾ ಕೂಟವನ್ನು ತುಮಕೂರಿನಲ್ಲಿ ಏರ್ಪಾಟು ಮಾಡಿರುವುದು ಸುದೈವ. ಕ್ರೀಡೆಯ ಮಹತ್ವದ ಬಗ್ಗೆ ನಾನೇನು ಹೆಚ್ಚಿಗೆ ಹೇಳಬೇಕಿಲ್ಲ. ಭಾರತ ರತ್ನ ಪ್ರಶಸ್ತಿಯನ್ನು ಕೂಡ ಕ್ರೀಡೆ ಪಡೆದುಕೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಕ್ರೀಡಾಪಟುಗಳು ಪಥ ಸಂಚಲನ ನಡೆಸಿದರು. ಈ ಪಥ ಸಂಚಲನದಲ್ಲಿ ಪ್ರಥಮ ಬಹುಮಾನವನ್ನು ಹಿಮಾಚಲ ಪ್ರದೇಶ, ದ್ವಿತೀಯ ಬಹುಮಾನವನ್ನು ಮಧ್ಯಪ್ರದೇಶ ತಂಡಗಳು ಪಡೆದುಕೊಂಡವು.
ಕ್ರೀಡಾಕೂಟವನ್ನು ಜಿಲ್ಲಾಡಳಿತ, ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಸರ್ಕಾರದ ಸಹಯೋಗದಲ್ಲಿ ಏರ್ಪಾಟು ಮಾಡಲಾಗಿದೆ.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಸತ್ಯಮೂರ್ತಿ, ಜಿ.ಪಂ. ಅಧ್ಯಕ್ಷೆ ಸಾಕಮ್ಮ ನಾಗರಾಜ್, ಡಿಡಿಪಿಐ ಈಶ್ವರಯ್ಯ, ಕೇಂದ್ರ ಸರ್ಕಾರದ ರಾಜ್ ಟಂಡನ್, ಜ್ಯೋತಿ ಪ್ರಕಾಶ್ ಮಿರ್ಜಿ, ಎಎಸ್ಪಿ ಲಕ್ಷ್ಮಣ್ ಇತರರು ಇದ್ದರು. ಅಧ್ಯಕ್ಷತೆಯನ್ನು ತುಮಕೂರು ಶಾಸಕ ಡಾ. ರಫೀಕ್ ಅಹಮದ್ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.